ಈ ವರ್ಷ ಶಾಲಾ ಶಿಕ್ಷಣ ಬೋಧನೆಗೆ 228 ದಿನಗಳು ಲಭ್ಯ


Team Udayavani, Apr 22, 2022, 6:45 AM IST

Untitled-1

ಬೆಂಗಳೂರು: ಎರಡು ವರ್ಷಗಳ ನಂತರ ಶಾಲೆಗಳನ್ನು ನಡೆಸಲು ಈ ಬಾರಿ (2022-23) ಶೈಕ್ಷಣಿಕ ವರ್ಷವು ಸಂಪೂರ್ಣವಾಗಿ ದೊರೆಯುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾದಿಂದ ವಿದ್ಯಾರ್ಥಿಗಳು ಅನುಭವಿಸಿರುವ ಕಲಿಕಾ ಹಿನ್ನಡೆಯನ್ನು “ಕಲಿಕಾ ಚೇತರಿಕೆ’ ಕಾರ್ಯಕ್ರಮದ ಮೂಲಕ ಸರಿದೂಗಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ 2022- 23ನೇ ಸಾಲಿನ ಶಾಲಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೇ 15ರಿಂದ ಶೈಕ್ಷಣಿಕ ವರ್ಷವು ಆರಂಭವಾಗಲಿದೆ. ಇಡೀ ವರ್ಷವನ್ನು “ಕಲಿಕಾ ಚೇತರಿಕೆ ವರ್ಷ’ವೆಂದು ಘೋಷಿಸಿದೆ.

ಮೇ 16ರಿಂದ ಅ.2ರ ವರೆಗೆ ಮೊದಲ ಅವಧಿ ನಿಗದಿ ಮಾಡಿದೆ. ಅ.3ರಿಂದ 16ರ ವರೆಗೆ ದಸರಾ ರಜೆ ನೀಡಲಾಗಿದೆ. 2022ರ ಅ.27ರಿಂದ 2023ರ ಏ.10ರ ವರೆಗೆ 2ನೇ ಅವಧಿ ನಿಗದಿ ಮಾಡಿದೆ. 2023ರ ಏ.11ರಿಂದ ಮೇ 28ರ ವರೆಗೆ ಬೇಸಿಗೆ ರಜೆ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಒಟ್ಟಾರೆ ಶೈಕ್ಷಣಿಕ ವರ್ಷದಲ್ಲಿ 256 ದಿನಗಳು ಲಭ್ಯವಾಗುತ್ತಿವೆ. ಇದರಲ್ಲಿ ಪಠ್ಯೇತರ ಚಟುವಟಿಕೆಗಳಾದ ಪ್ರತಿಭಾ ಕಾರಂಜಿ, ಕ್ರೀಡಾಕೂಟ, ವಿಜ್ಞಾನ ವಸ್ತು ಪ್ರದರ್ಶನ, ರಸ ಪ್ರಶ್ನೆ, ಅಣಕು ಸಂಸತ್‌, ಇನ್ಸ್‌ಪೆçರ್‌ ಅವಾರ್ಡ್‌, ಪೋಷಕರ ಸಭೆ, ಶಾಲಾ ಹಬ್ಬಗಳು ಮತ್ತು ಶೈಕ್ಷಣಿಕ ಪ್ರವಾಸಗಳು ಸೇರಿದಂತೆ ಇತರೆ ಪಠ್ಯೇತರ ಚಟುವಟಿಕೆಗಳು ಹೊರತುಪಡಿಸಿ ಬೋಧನೆಗೆ 228 ದಿನಗಳು ಲಭ್ಯವಾಗಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ದಸರಾ ಮತ್ತು ದೀಪಾವಳಿ ಸೇರಿ 14 ದಿನ ರಜೆ ನೀಡಲಾಗಿದೆ. ಉಳಿದ ಸರ್ಕಾರಿ ರಜೆ ಹೊರತುಪಡಿಸಿ 8 ದಿನಗಳು ಮಾತ್ರ ಉಳಿಯಲಿದ್ದು, ಈ ಅವಧಿಯಲ್ಲಿಯೇ ಪರೀಕ್ಷೆಗಳು ಮತ್ತು ಇತರೆ ಚಟುವಟಿಕೆಗಳು ನಡೆಸಬೇಕಿದೆ. ಆದರೆ, ಸರ್ಕಾರವು ಶೈಕ್ಷಣಿಕ ವರ್ಷದ ದಿನಗಳನ್ನು ಲೆಕ್ಕ ಹಾಕುವ ವೇಳೆ ಅಕ್ಟೋಬರ್‌ನಲ್ಲಿ 22 ದಿನಗಳು ಕರ್ತವ್ಯಕ್ಕೆ ಲಭ್ಯವಾಗಲಿವೆ ಎಂದು ಲೆಕ್ಕ ಹಾಕಿದೆ. ಈ ಲೆಕ್ಕವನ್ನು ಸರಿಪಡಿಸಬೇಕು. ಡಿ. ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಕ್ಯಾಮ್ಸ್‌

2022-23ನೇ ವರ್ಷವನ್ನು ಕಲಿಕಾ ಚೇತರಿಕಾ ವರ್ಷವೆಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಕಲಿಕಾ ಚೇತರಿಕೆ ವರ್ಷ ನಡೆಸಲು ಪ್ರತ್ಯೇಕ ಪಠ್ಯ ರಚನೆ ಮಾಡುತ್ತಾರೆಂಬ ನಿರೀಕ್ಷೆ ಹೊಂದಿದ್ದೇವು. ಆದರೆ, ಯಾವುದೇ ಪಠ್ಯವನ್ನು ರಚನೆ ಮಾಡದೆ, ಹಳೆಯ ಪುಸ್ತಕದಲ್ಲಿಯೇ ಕಲಿಕಾ ಚೇತರಿಕೆ ನಡೆಸುತ್ತಿರುವುದು ಪ್ರಗತಿ ಕಾಣುವಲ್ಲಿ ಹಿಂದೆ ಬೀಳಬಹುದು.ಲೋಕೇಶ್‌ ತಾಳಿಕಟ್ಟೆ, ರುಪ್ಸಾ ಅಧ್ಯಕ್ಷ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.