PHC ಗಳಿದ್ದೂ ಅಲೆದಾಟ ತಪ್ಪಲಿಲ್ಲ: ರಕ್ತ ಪರೀಕ್ಷೆಗೆ 30ರಿಂದ 60 ಕಿ.ಮೀ. ಪಾದಯಾತ್ರೆ!
Team Udayavani, Aug 13, 2023, 12:43 AM IST
ಕುಂದಾಪುರ: ಡೆಂಗ್ಯೂ, ಮಲೇರಿಯಾ ಬಂದರೆ ವೈದ್ಯರು ರಕ್ತ ಪರೀಕ್ಷೆ, ಕಫ ಮತ್ತಿತರ ಪರೀಕ್ಷೆ ಮಾಡಿಸಲು ರೋಗಿಗಳಿಗೆ ಸೂಚಿಸುತ್ತಾರೆ. ಅದ
ಕ್ಕಾಗಿ ಸ್ಥಳೀಯವಾಗಿ ಪ್ರಯೋಗಾಲಯ ತಜ್ಞರಿಲ್ಲದ ಕಾರಣ ರೋಗಿಗಳು ಹತ್ತಾರು ಕಿ.ಮೀ. ದೂರದ ಆಸ್ಪತ್ರೆಗಳಿಗೆ ಅಥವಾ ಖಾಸಗಿ ಕೇಂದ್ರ ಗಳಿಗೆ ಹೋಗಬೇಕು. ಇಂಥ ಸಂದರ್ಭ ದಲ್ಲಿ ರೋಗಿ ಕನಿಷ್ಠ 30ರಿಂದ 60 ಕಿ.ಮೀ. ದೂರ ಕ್ರಮಿಸಬೇಕು. ಸಮಯ ಹಾಗೂ ಹಣ ಎರಡೂ ವ್ಯರ್ಥ.
ಈ ಪರಿಸ್ಥಿತಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿದೆ. ಹಲವು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಗಳಲ್ಲಿ ಪ್ರಯೋಗಾಲಯ ತಂತ್ರಜ್ಞರು (ಲ್ಯಾಬ್ ಟೆಕ್ನಿಶಿಯನ್) ಮತ್ತಿತರ ಸಿಬಂದಿ ಇಲ್ಲವೇ ಇಲ್ಲ. ಕೆಲವೆಡೆ ಆ ಹುದ್ದೆಯನ್ನೇ ಸರಕಾರ ಮಂಜೂರು ಮಾಡಿಲ್ಲ. ಇನ್ನು ಕೆಲವೆಡೆ ಹುದ್ದೆಗಳಿವೆ, ಅದಕ್ಕೆ ಸೂಕ್ತ ಸಿಬಂದಿ ಯನ್ನು ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಾಧ್ಯ ವಾಗಿಲ್ಲ. ಹಾಗಾಗಿ ಜನರಿಗೆ ಕಿ.ಮೀ.ಗಟ್ಟಲೆ ಸುತ್ತುವ ಪ್ರಯಾಸ ತಪ್ಪಿಲ್ಲ.
ಉದಾಹರಣೆಗೆ ಬೈಂದೂರು ತಾಲೂಕಿನ ಹಳ್ಳಿಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಯೋ ಗಾಲಯ ತಜ್ಞರಿಲ್ಲ. ಈ ಆಸ್ಪತ್ರೆ ಹಳ್ಳಿಹೊಳೆ, ಜಡ್ಕಲ್- ಮುದೂರು, ಯಡಮೊಗೆ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಇಲ್ಲಿ ಚಿಕಿತ್ಸೆಗೆ ಬರುವ ಬಡ ರೋಗಿಗಳು ರಕ್ತ ಪರೀಕ್ಷೆಗೆ ಕನಿಷ್ಠ 30 ಕಿ.ಮೀ. ದೂರದ ಸಿದ್ಧಾಪುರಕ್ಕೆ ಹೋಗಬೇಕು. ಇಲ್ಲವೇ ಕುಂದಾಪುರಕ್ಕೆ ಹೋಗಲು 90 ಕಿ.ಮೀ. ಕ್ರಮಿಸಬೇಕು. ಇದೇ ಪರಿಸ್ಥಿತಿ ಹಲವು ಗ್ರಾಮಗಳಲ್ಲಿದೆ.
ದ.ಕ. ಜಿಲ್ಲೆಯಲ್ಲಿ 66 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇಲ್ಲಿಗೆ ಮಂಜೂರಾದ 80 ಲ್ಯಾಬ್ ಟೆಕ್ನಿಶಿಯನ್‌ಗಳ ಹುದ್ದೆಗಳಲ್ಲಿ 30 ಹುದ್ದೆಗಳು ಖಾಲಿಯಿವೆ. ಉಡುಪಿಯಲ್ಲಿ 62 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 94 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 9 ಖಾಲಿ ಇವೆ.
ಫಾರ್ಮಸಿಸ್ಟ್ ಹುದ್ದೆಯೂ ಖಾಲಿ
ನಗರದ ಸರಕಾರಿ ಆಸ್ಪತ್ರೆಗಳಲ್ಲಿಯೂ ಹಲವು ಹುದ್ದೆಗಳು ಖಾಲಿಯಿವೆ. ಫಾರ್ಮಸಿಸ್ಟ್ ಗಳು, ಕ್ಲರಿಕಲ್ ಹುದ್ದೆಗಳು ಖಾಲಿ ಇವೆ. ಆದ ಕಾರಣ ಇರುವ ಸಿಬಂದಿಯ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ದ.ಕ.ದಲ್ಲಿ 87 ಫಾರ್ಮಸಿಸ್ಟ್ ಹುದ್ದೆಗಳಲ್ಲಿ 64 ಖಾಲಿ ಇವೆ. ಉಡುಪಿಯಲ್ಲಿ 81ರಲ್ಲಿ 30 ಹುದ್ದೆಗಳು ಖಾಲಿಯಿವೆ.
ಕೆಲವು ಆಸ್ಪತ್ರೆಗಳಿಗೆ ಈ ಹುದ್ದೆಯೇ ಮಂಜೂರಾಗಿಲ್ಲ. ಮಂಜೂರಾದ ಕಡೆ ಖಾಲಿ ಇರುವ ಲ್ಯಾಬ್ ಟೆಕ್ನಿಶಿಯನ್, ಫಾರ್ಮಸಿಸ್ಟ್ ಸಹಿತ ಎಲ್ಲ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದ ಮಟ್ಟದಲ್ಲಿ ಹೊಸದಾಗಿ ನೇಮಕಾತಿ ನಡೆಯುತ್ತಿದೆ.
ಅದರಲ್ಲಿ ಕೆಲವು ಹುದ್ದೆಗಳು ಭರ್ತಿಯಾಗಬಹುದು.
- ಡಾ| ನಾಗಭೂಷಣ ಉಡುಪ, – ಡಾ| ಕಿಶೋರ್ ಕುಮಾರ್
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಗಳು
ಪ್ರಸ್ತಾವನೆ ಪರಂಪರೆ!
ಜಿಲ್ಲಾ ಆರೋಗ್ಯಾಧಿಕಾರಿಗಳು ಸರಕಾರಕ್ಕೆ ಹುದ್ದೆಗಳ ಮಂಜೂರಾತಿಗೆ ಪ್ರಸ್ತಾವನೆ ಕಳುಹಿಸುತ್ತಾರೆ. ಸರಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಸ್ತಾವನೆಯನ್ನು ಓದಿ ಸುಮ್ಮನಾಗುತ್ತವೆ. ಹುದ್ದೆಗಳು ಹಲವು ಕಾರಣಗಳಿಗಾಗಿ ಮಂಜೂರಾಗುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಅಲೆಯುವುದು ತಪ್ಪುವುದಿಲ್ಲ. ಉಡುಪಿ ಜಿಲ್ಲೆಯ ಪ್ರಸ್ತಾವನೆ ಪರಂಪರೆಯೂ ಸುಮಾರು ಐದು ವರ್ಷಗಳಿಂದ ಮುಂದುವರಿದಿದೆಯಂತೆ.
ಮತ್ತೂಂದು ತೆರನಾದ ಸಮಸ್ಯೆಯೆಂದರೆ ಈ ಭರ್ತಿ ಇರುವ ಹುದ್ದೆಗಳ ಅಧಿಕಾರಿಗಳಿಗೂ ಹೆಸರಿಗಷ್ಟೇ ಗಾಮೀಣ, ಕೆಲಸವೆಲ್ಲ ನಗರದಲ್ಲೇ. ಯಾಕೆಂದರೆ ಅವರು ಜಿಲ್ಲೆ, ತಾಲೂಕು, ನಗರದ ಆಸ್ಪತ್ರೆಗಳಿಗೆ ನಿಯೋಜನೆಗೊಂಡಿದ್ದಾರೆ.
ಜತೆಗೆ ಹಿಂದೆ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಘಟಕ (ಪಿಎಚ್‌ಯು) ಗಳಾಗಿದ್ದ ಉಡುಪಿಯ 6 ಆಸ್ಪತ್ರೆಗಳನ್ನು ಸುಮಾರು 15-20 ವರ್ಷಗಳ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಇಂದಿಗೂ ಹೆಸರಿಗಷ್ಟೇ ಮೇಲ್ದರ್ಜೆಗೇರಿವೆ. ಆದರೆ ಅದಕ್ಕೆ ತಕ್ಕಂತೆ ಯಾವುದೇ ಹುದ್ದೆಗಳು ಮಂಜೂರಾಗಿಲ್ಲ. ಇಲ್ಲಿ ಹಿಂದೆ ಕೊರೊನಾ ವಿಶೇಷ ಸಂದರ್ಭವೆಂದು ಓರ್ವ ಸಿಬಂದಿಯನ್ನು ನಿಯೋಜಿಸಲಾಗಿತ್ತು; ಈಗ ಅದನ್ನೂ ತೆರವು ಮಾಡಲಾಗಿದೆ. ಅದರಲ್ಲೂ ಮುಖ್ಯವಾಗಿ ಪ್ರಯೋಗಾಲಯ ತಂತ್ರಜ್ಞರು, ಸ್ಟಾಫ್ ನರ್ಸ್, ಫಾರ್ಮಸಿಸ್ಟ್ ಹುದ್ದೆಗಳು ಇವೆ.
ಇನ್ನು ದ.ಕ. ಜಿಲ್ಲೆಯಲ್ಲಿ ಪಿಎಚ್‌ಯುಗಳಾಗಿದ್ದು, ಪಿಎಚ್‌ಸಿಗಳಾಗಿ ಮೇಲ್ದರ್ಜೆಗೇರಿದ ಆಸ್ಪತ್ರೆಗಳಿಲ್ಲ. ಉಳಿದೆಡೆ ಮಂಜೂರಾದ ಹುದ್ದೆಗಳು ಭರ್ತಿಯಾಗಿಲ್ಲ.
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ
Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.