32 ಐಪಿಎಸ್ ಅಧಿಕಾರಿಗಳ ವರ್ಗ
Team Udayavani, Feb 22, 2019, 1:29 AM IST
ಬೆಂಗಳೂರು: ಐಎಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೇ 32 ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಗುಪ್ತದಳ ಮುಖ್ಯಸ್ಥ ಸ್ಥಾನಕ್ಕೆ ದಯಾನಂದ್ ಅವರನ್ನು ನೇಮಿಸಲಾಗಿದೆ. ಗುಪ್ತದಳ ಮುಖ್ಯಸ್ಥರಾಗಿದ್ದ ಅಮರ್‌ಕುಮಾರ್ ಪಾಂಡೆ ಅವರನ್ನು ಎಡಿಜಿಪಿ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರ್ಗಾವಣೆ ಮಾಡಲಾಗಿದೆ.
ಅಮೃತ್ ಪೌಲ್- ಐಪಿಜಿ ಪೂರ್ವ ವಲಯ, ಕೆ.ವಿ.ಶರತ್‌ಚಂದ್ರ- ಕೇಂದ್ರ ವಲಯ ಐಜಿಪಿ , ವಿಪುಲ್ ಕುಮಾರ್- ದಕ್ಷಿಣ ವಲಯ ಐಜಿಪಿ (ಹೆಚ್ಚುವರಿ ಹೊಣೆಗಾರಿಕೆ), ಎಂ.ನಂಜುಂಡಸ್ವಾಮಿ- ಬಳ್ಳಾರಿ ಐಜಿಪಿ, ಎಚ್.ಎಸ್.ರೇವಣ್ಣ- ಬೆಂಗಳೂರು ಕೇಂದ್ರ ಕಾರಾಗೃಹ ಐಜಿಪಿ, ರಾಘವೇಂದ್ರ ಸುಹಾಸ್- ಉತ್ತರವಲಯ ಐಜಿಪಿ, ಡಾ.ಎ.ಸುಬ್ರಹ್ಮಣ್ಯೇಶ್ವರ- ಬೆಂಗಳೂರು ಗುಪ್ತದಳ ಡಿಐಜಿ, ಟಿ.ಆರ್.ಸುರೇಶ್- ಬೆಂಗಳೂರು ಜಂಟಿ ಆಯುಕ್ತರು, ಸಂದೀಪ್ ಪಾಟೀಲ್- ಮಂಗಳೂರು ಪೊಲೀಸ್ ಆಯುಕ್ತರು, ಡಾ.ಪಿ.ಎಸ್.ಹರ್ಷ-ಕೆಎಸ್ ಆರ್‌ಟಿಸಿ ಜಾಗೃತದಳದ ನಿರ್ದೇಶಕ, ವಿಕಾಸ್ ಕುಮಾರ್ ವಿಕಾಸ್- ನಕ್ಸಲ್ ನಿಗ್ರಹಪಡೆ ಡಿಐಜಿ. ಡಾ.ಚೇತನ್‌ಸಿಂಗ್ ರಾಥೋಡ್-ವಿಧಿ ವಿಜ್ಞಾನ ಪ್ರಯೋಗಾಲಯ ನಿರ್ದೇಶಕ, ಎನ್.ಶಶಿಕುಮಾರ್-ಬೆಂಗಳೂರು ಉತ್ತರ ಡಿಜಿಪಿ, ಡಾ.ಎಂ.ಬೋರಲಿಂಗಯ್ಯ-ಬೆಂಗಳೂರು ಗುಪ್ತದಳ ಎಸ್‌ಪಿ, ಅಭಿನವ್ ಖರೆ- ಗೃಹರಕ್ಷಕದಳ ಕಮಾಂಡೆಂಟ್, ಲಡಾ ಮಾರ್ಟಿನ್ ಮಾರ್ಬಿಯಾಂಗ್- ಕಲಬುರಗಿ ಎಸ್‌ಪಿ, ಕಾರ್ತಿಕ್ ರೆಡ್ಡಿ-ಡಿಐಜಿ(ಅಪರಾಧ), ಕೆ.ಸಂತೋಷ್ ಬಾಬು- ಚಿಕ್ಕಬಳ್ಳಾಪುರ ಎಸ್‌ಪಿ, ಇಶಾ ಪಂತ್- ಬೆಂಗಳೂರು ದಕ್ಷಿಣ ಡಿಸಿಪಿ, ಡಾ.ಧರ್ಮೇಂದ್ರ ಕುಮಾರ್ ಮೀನಾ- ಬೆಂಗಳೂರು ಅಪರಾಧ ತನಿಖಾ ವಿಭಾಗ ಎಸ್‌ಪಿ, ನಿಶಾ ಜೇಮ್ಸ್- ಉಡುಪಿ ಎಸ್ಪಿ, ಲಕ್ಷ್ಮಣ್ ಬಿಂಬರ್ಗಿ- ಬೆಂಗಳೂರು ವೈರ್‌ಲೆಸ್ ಎಸ್‌ಪಿ, ಸೋನವಾನೆ ಋಷಿಕೇಷ್ ಭಗವಾನ್-ಯಾದಗಿರಿ ಎಸ್ಪಿ, ಡಿ.ಎಲ್.ನಾಗೇಶ್- ಹುಬ್ಬಳ್ಳಿ-ಧಾರವಾಡ ಡಿಸಿಪಿ, ಡಾ.ಎಂ.ಅಶ್ವಿನಿ – ಶಿವಮೊಗ್ಗ ಎಸ್‌ಪಿ, ಎನ್.ವಿಷ್ಣುವರ್ಧನ್- ಡಿಸಿಪಿ (ಗುಪ್ತದಳ), ಎಚ್.ಡಿ.ಆನಂದ್‌ಕುಮಾರ್- ಚಾಮರಾಜ ನಗರ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡಿದ್ದ ಬಿ.ಎಸ್.ಲೋಕೇಶ್‌ಕುಮಾರ್ ಅವರ ಆದೇಶ ರದ್ದು ಮಾಡಿ ಬೆಳಗಾವಿ ಪೊಲೀಸ್ ಆಯುಕ್ತರ ಸ್ಥಾನಕ್ಕೆ ನಿಯೋಜಿಸಲಾಗಿದೆ. ಬೆಳಗಾವಿ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದ್ದ ಪಿ.ರಾಜೇಂದ್ರಪ್ರಸಾದ್ ಅವರ ಆದೇಶ ರದ್ದು ಮಾಡಿ ಅವರನ್ನು ಡಿಐಜಿ, ನೇಮಕಾತಿ ಬೆಂಗಳೂರು ಹುದ್ದೆಗೆ ನಿಯೋಜಿಸಲಾಗಿದೆ.
ಆಪರೇಷನ್ ಆಡಿಯೋ: ಡಿವೈಎಸ್ಪಿ ಹರೀಶ್ ವರ್ಗ
ರಾಯಚೂರು: “ಆಪರೇಷನ್ ಆಡಿಯೋ’ ಪ್ರಕರಣದ ತನಿಖೆಗೆ ನಿಯೋಜನೆಗೊಂಡಿದ್ದ ಡಿವೈಎಸ್‌ಪಿ ಹರೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ತನಿಖೆ ನಿಮಿತ್ತ ಫೆ.19ರಂದು ದೇವದುರ್ಗ ಪ್ರವಾಸಿ ಮಂದಿರಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದರು. ದೂರುದಾರ ಶರಣಗೌಡ ಕಂದಕೂರ್ ಅವರನ್ನು ಸ್ಥಳಕ್ಕೆ ಕರೆಸಿ ಮಾಹಿತಿ ಪಡೆಯಲಾ ಗಿತ್ತು. ಆದರೆ, ಈಗ ವರ್ಗಾವಣೆ ಮಾಡಿದ್ದು, ಬೇರೆ ಯಾವುದೇ ಸ್ಥಳಕ್ಕೆ ಅವರನ್ನು ನಿಯೋಜನೆ ಮಾಡಿಲ್ಲ. ಅವರ ಸ್ಥಳಕ್ಕೆ ಬೆಂಗಳೂರಿನ ಸಿಐಡಿಯಲ್ಲಿದ್ದ ಬಸಪ್ಪ ಅಂಗಡಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಲೋಕಸಭೆ ಚುನಾವಣೆ ನಿಮಿತ್ತ ಈ ವರ್ಗಾವಣೆ ಪ್ರಕ್ರಿಯೆ ನಡೆಸಲಾಗಿದ್ದು, ತನಿಖೆ ಹೊಣೆ ಹೊತ್ತ ಅ ಧಿಕಾರಿ ವರ್ಗಾವಣೆ ಅಚ್ಚರಿ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.