![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 16, 2020, 12:26 PM IST
ಬೆಂಗಳೂರು: ಕೋವಿಡ್-19 ಸೋಂಕು ಕರ್ನಾಟಕದಲ್ಲಿ ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಬುಧವಾರ ಸಂಜೆ 5 ಗಂಟೆಯ ನಂತರ ಇದುರೆಗೆ ಬರೋಬ್ಬರಿ 34 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ.
ಬೆಳಗಾವಿ ಜಿಲ್ಲೆಯೊಂದರಲ್ಲೇ 17 ಪ್ರಕರಣಗಳು ದೃಢವಾಗಿದ್ದು, ಕಳವಳಕ್ಕೆ ಕಾರಣವಾಗಿದೆ. ಉಳಿದಂತೆ ವಿಜಯಪುರದಲ್ಲಿ ಏಳು ಪ್ರಕರಣಗಳು, ಬೆಂಗಳೂರು ನಗರದಲ್ಲಿ ಐದು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಬುಧವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 66 ವರ್ಷದ ಓರ್ವ ಸೋಂಕಿತ ಸಾವನ್ನಪ್ಪಿದ್ದು, ರಾಜ್ಯದ ಸೋಂಕಿತರ ಸಂಖ್ಯೆ 13ಕ್ಕೇರಿದೆ. ಇಂದಿನ ದಾಖಲೆಯ 34 ಸೋಂಕಿತರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 313 ಕ್ಕೇರಿದ್ದು, 82 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಸೋಂಕಿತ ಸಂಖ್ಯೆ 224 ಮತ್ತು 225ರ ಸಂಪರ್ಕದಿಂದ ಬೆಳಗಾವಿಯ ಹಿರೆಬಾಗೆವಾಡಿಯ ಏಳು ( 2 ಪುರುಷ+ 5 ಮಹಿಳೆ) ಮತ್ತು ಬಾಗೆವಾಡಿಯ ಓರ್ವ ಮಹಿಳೆಗೆ ಸೋಂಕು ಹರಡಿರುವುದು ದೃಢವಾಗಿದೆ. ದಿಲ್ಲಿ ಪ್ರಯಾಣ ಮಾಡಿದ್ದ ಚಿಕ್ಕೋಡಿ, ಬೆಳಗಾವಿಯ ತಲಾ ಓರ್ವರು, ರಾಯಬಾಗದ ಮೂವರಿಗೆ ಸೋಂಕು ತಾಗಿರಿವುದು ದೃಢವಾಗಿದೆ. ( ಮರು ಪರೀಕ್ಷೆಯಲ್ಲಿ ದೃಢ)
ಉಳಿದಂತೆ ರಾಯಬಾಗದಲ್ಲಿ ನೆಲೆಸಿರುವ ಮೂವರು ಅನ್ಯ ರಾಜ್ಯದ ಪ್ರಜೆಗಳಿಗೆ ಸೋಂಕು ಖಚಿತವಾಗಿದೆ. ಸೋಂಕಿತ ಸಂಖ್ಯೆ 245ರ ಸಂಪರ್ಕದಿಂದ ರಾಯಬಾಗದ 64 ವರ್ಷದ ವ್ಯಕ್ತಿಗೆ ಸೋಂಕು ಖಚಿತವಾಗಿದೆ. ಇವರೆಲ್ಲರೂ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತ ಸಂಖ್ಯೆ 221ರ ಸಂಪರ್ಕದಿಂದ 12 ವರ್ಷದ ಬಾಲಕ ಸೇರಿ ವಿಜಯಪುರದ ಆರು ಜನರಿಗೆ ಸೋಂಕು ತಾಗಿದ್ದು, ಪಿ-228ರ ಸಂಪರ್ಕ್ಇಂದ 1.5 ವರ್ಷದ ಮಗುವಿಗೆ ಸೋಂಕು ಖಚಿತವಾಗಿದೆ.
ಮೈಸೂರಿನಲ್ಲಿ ಮೂವರು ಫಾರ್ಮ ಕಂಪನಿಯ ಉದ್ಯೋಗಿಗಳಿಗೆ ಸೋಂಕು ಖಚಿತವಾಗಿದೆ. ಗದಗ ಮತ್ತು ಕಲಬುರಗಿಯಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.