4 ಕಳ್ಳತನ ಪ್ರಕರಣ; ಇಬ್ಬರ ಬಂಧನ,6 ಕೆಜಿ ಬೆಳ್ಳಿ,940 ಗ್ರಾಂ ಚಿನ್ನ ವಶ
Team Udayavani, Oct 29, 2018, 5:31 PM IST
ಬೆಂಗಳೂರು: ನಗರದ ಬನಶಂಕರಿ ಪೋಲೀಸರ ಮಹತ್ವದ ಕಾರ್ಯಾಚರಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕುಖ್ಯಾತ ಕಳ್ಳರನ್ನು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಯ್ಯದ್ ಇಮ್ರಾನ್ ಅಲಿಯಾಸ್ ಕಾಲು (22 ವರ್ಷ) ಮತ್ತು ವಾಸಿಂ ಅಕ್ರಮ್ ಅಲಿಯಾಸ್ ( 26 ವರ್ಷ) ಎಂದು ಗುರುತಿಸಲಾಗಿದೆ.
ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು, ಬಸವನಗುಡಿ ಠಾಣಾ ವ್ಯಾಪ್ತಿಯ ಒಂದು ರಾತ್ರಿ ವೇಳೆ ಕಳವು ಪ್ರಕರಣ, ಹಾಗು ಜೆ.ಪಿ.ನಗರ ಠಾಣೆಯ ಒಂದು ಹಗಲು ಕಳ್ಳತನ ಪ್ರಕರಣಕ್ಕೆ ಸೇರಿದಂತೆ ಒಟ್ಟು 4 ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ ಸುಮಾರು 30 ಲಕ್ಷ ಬೆಲೆ ಬಾಳುವ 940 ತೂಕದ ಚಿನ್ನಾಭರಣಗಳು ಮತ್ತು 6.5 ಕೆಜಿ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ .
ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಹೆಚ್. ಶ್ರೀನಿವಾಸ ಅವರ ನೇತೃತ್ವದ ವಿಶೇಷ ತಂಡ ಬನಶಂಕರಿ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಪಿ. ಪುಟ್ಟು ಸ್ವಾಮಿ, ಪಿಎಸೈ ಅರ್ಜುನ್ ಸಿ ಅರ್ , ಗಿರಿಮಲ್ಲಪ್ಪ, ಸಿಬ್ಬಂದಿಗಳಾದ ಎ ಎಸ್ ಐ ಚಿಕ್ಕಣ್ಣ, ವೆಂಕಟೇಶ , ಮತ್ತಾ ನಾಯ್ಕ , ಪರಮೇಶ್ವರ , ಶ್ರೀಮಂತ ಖೇಮು ರಾಥೋಡ್, ತ್ಹೌಸಿಫ್ ಅಹಮದ್, ವಸಂತ್ ಕುಮಾರ್, ಶರತ್ ಕುಮಾರ್, ಸೋನಿಯಾ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಮತ್ತು ಅಪರ ಪೊಲೀಸ್ ಆಯುಕ್ತರು- ಪಶ್ಚಿಮ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.