ಅಹಮದಾಬಾದ್ ಸಂಪರ್ಕದಿಂದ ಸೋಂಕು ಸ್ಪೋಟ: ಮತ್ತೆ 42 ಜನರಲ್ಲಿ ಸೋಂಕು ಪತ್ತೆ
Team Udayavani, May 12, 2020, 12:25 PM IST
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಹಮದಾಬಾದ್ ಪ್ರಯಾಣ ಮಾಡಿದ ಹಿನ್ನಲೆ ಇರುವವರಲ್ಲಿ ಸೋಂಕು ಕಂಡು ಬರುತ್ತಿದೆ. ಇಂದು ಒಟ್ಟು 42 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ರಾಜ್ಯದ ಸೋಂಕಿತರ ಸಂಖ್ಯೆ 900 ದಾಟಿದೆ.
ಇಂದಿನ 42 ಪ್ರಕರಣಗಳಲ್ಲಿ 25 ಮಂದಿ ಅಹಮದಾಬಾದ್ ಪ್ರಯಾಣ ಹಿನ್ನಲೆ ಹೊಂದಿದವರಾಗಿದ್ದಾರೆ. ಆರು ಮಂದಿ ಮುಂಬೈ ಪ್ರಯಾಣ ಮಾಡಿದ ಹಿನ್ನಲೆ ಹೊಂದಿದವರಾಗಿದ್ದಾರೆ. ಈವರೆಗೆ ಸೋಂಕು ಭೀತಿ ಇರದ ಹಾಸನ, ಯಾದಗಿರಿಯಲ್ಲೂ ಸೋಂಕು ಕಂಡು ಬಂದಿದೆ.
ಬಾಗಲಕೋಟೆಯಲ್ಲಿ 14 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢವಾಗಿದೆ. ಅದರಲ್ಲಿ 13 ಮಂದಿ ಅಹಮದಾಬಾದ್ ಪ್ರಯಾಣ ಹಿನ್ನಲೆ ಇರುವವರು. ಧಾರವಾಡದಲ್ಲಿ ಒಂಬತ್ತು ಸೋಂಕು ಪ್ರಕರಣಗಳು ದೃಢವಾಗಿದೆ. ಇವರೆಲ್ಲರೂ ಅಹಮದಾಬಾದ್ ಪ್ರಯಾಣದ ಹಿನ್ನೆಲೆ ಹೊಂದಿದವರು.
ಹಾಸನದಲ್ಲಿ ಐವರಿಗೆ ಸೋಂಕು ಕಾಣಿಸಿಕೊಂಡಿದೆ. 4 ಮತ್ತು 7 ವರ್ಷದ ಪ್ರಾಯದ ಮಕ್ಕಳಿಗೂ ಸೋಂಕು ತಾಗಿದೆ. ಇವರಲ್ಲರೂ ಮುಂಬೈ ಪ್ರಯಾಣದ ಹಿನ್ನಲೆ ಹೊಂದಿರುವವರು.
ಬೆಂಗಳೂರು ನಗರದಲ್ಲಿ ಮೂರು ಕೋವಿಡ್-19 ಪಾಸಿಟಿವ್ ಪ್ರಕರಣ ದೃಢವಾಗಿದೆ. ಮೂವರು ಮಹಿಳೆಯರಿಗೆ ಸೋಂಕು ತಾಗಿದ್ದು, ಮೂವರಿಗೂ ಸೋಂಕಿತ ಸಂಖ್ಯೆ 454ರ ಸಂಪರ್ಕದಿಂದ ಸೋಂಕು ತಾಗಿದೆ.
ಬೀದರ್ ನಲ್ಲಿ ಇಬ್ಬರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಇಬರಿಬ್ಬರೂ ಇಲ್ಲಿನ ಕಂಟೈನ್ ಮೆಂಟ್ ಝೋನ್ ನ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಎರಡು ಸೋಂಕು ಪ್ರಕರಣಗಳು ದೃಢವಾಗಿದೆ. ಇವರಿಬ್ಬರೂ ಸೋಂಕಿತ ಸಂಖ್ಯೆ 507ರ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಎರಡು ಕೋವಿಡ್-19 ಪ್ರಕರಣಗಳು ದೃಢವಾಗಿದೆ. 33 ವರ್ಷದ ಮಹಿಳೆ ಮತ್ತು 38 ವರ್ಷದ ವ್ಯಕ್ತಿಗೆ ಸೋಂಕು ತಾಗಿದ್ದುಇವರಿಬ್ಬರೂ ಅಹಮದಾಬಾದ್ ಪ್ರಯಾಣದ ಹಿನ್ನಲೆ ಹೊಂದಿದರು .
ಬಳ್ಳಾರಿಯಲ್ಲಿ 30 ವರ್ಷದ ವ್ಯಕ್ತಿಗೆ ಸೋಂಕು ತಾಗಿದ್ದು, ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ, ಮಂಡ್ಯ, ಕಲಬುರಗಿಯಲ್ಲೂ ತಲಾ ಒಂದು ಪ್ರಕರಣ ದೃಢವಾಗಿದೆ.
ರಾಜ್ಯದಲ್ಲಿ ಒಟ್ಟು 904 ಪ್ರಕರಣಗಳು ದೃಢವಾಗಿದೆ. ರಾಜ್ಯದಲ್ಲಿ ಇದುವರೆಗೆ ಸೋಂಕಿನ ಕಾರಣದಿಂದ 31 ಜನರು ಸಾವನ್ನಪ್ಪಿದ್ದು, 426 ಜನರು ಗುಣಮುಖರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.