ಹಜ್‌ ಭವನ ಅಭಿವೃದ್ಧಿಗೆ 5 ಕೋಟಿ ಅನುದಾನ

Team Udayavani, Jan 11, 2020, 3:06 AM IST

haj-bhavana

ಬೆಂಗಳೂರು: ಹಜ್‌ ಭವನ ಅಭಿವೃದ್ಧಿಗೆ 5 ಕೋಟಿ ರೂ.ಅನುದಾನ ನೀಡುವುದಾಗಿ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಹಜ್‌ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಹಜ್‌ ಯಾತ್ರೆಗೆ ತೆರಳಲಿರುವ ಯಾತ್ರಿಕರನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ಮುಂಬರುವ ಬಜೆಟ್‌ನಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಬಿಜೆಪಿ ಸರ್ಕಾರ ದೇಶದ ಎಲ್ಲಾ ಮುಸ್ಲಿಮರ ಜೊತೆಗಿದೆ. ಬೀದರ್‌, ಕಲಬುರ್ಗಿ, ಯಾದಗಿರಿ ಮತ್ತು ರಾಯಚೂರ ಜಿಲ್ಲೆಗಳ ಯಾತ್ರಿಗಳು ಹೈದರಾಬಾದ್‌ನಲ್ಲಿರುವ ಹಜ್‌ ಕೇಂದ್ರದಿಂದ ಪ್ರಯಾಣ ಬೆಳೆಸಲಿದ್ದಾರೆಂದರು. ಕಲಬುರಗಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿರುವುದರಿಂದ ಈ ಜಿಲ್ಲೆಗಳ ಯಾತ್ರಿಕರು ಕಲಬುರಗಿ ವಿಮಾನ ನಿಲ್ದಾಣದಿಂದ, ಸೌದಿ ಅರೇಬಿಯಾಕ್ಕೆ ತೆರಳಲು ಸಹಾಯವಾಗಲಿದೆ.

ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು. ಪೌರತ್ವ ತಿದ್ದುಪಡೆ ಕಾಯ್ದೆ ಸೇರಿದಂತೆ ಹಲವು ವಿಚಾರಗಳಲ್ಲಿ ಕೆಲವರು ಗೊಂದಲ ಮೂಡಿಸುತ್ತಿದ್ದಾರೆ. ಇದಕ್ಕೆ ಕಿವಿಗೊಡಬೇಡಿ ಎಂದು ಮುಸ್ಲಿಂ ಸಮುದಾಯದಲ್ಲಿ ಮನವಿ ಮಾಡಿದರು.

ಕಲಬುರಗಿಯಲ್ಲಿ ಹಜ್‌ ಭವನ: ಪಶು ಸಂಗೋಪನೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಖಾತೆ ಸಚಿವ ಪ್ರಭು ಚವ್ಹಾಣ್‌, ಕಲಬುರಗಿಯಲ್ಲಿ ಹಜ್‌ ಭವನ ನಿರ್ಮಿಸುವ ಚಿಂತನೆ ಇದೆ. ಆ ಹಿನ್ನೆಲೆಯಲ್ಲಿ ಪ್ರತಿ ವರ್ಷ ಆಯವ್ಯಯದಲ್ಲಿ 1 ಕೋಟಿ ರೂ.ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದರು.

ದೇಶದ ಭದ್ರತೆ ದೃಷ್ಟಿಯಿಂದ ರೂಪಿಸಲಾದ ಸಿಎಎ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿರುವ ಕೆಲವರು ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರಿನ ಮಾದರಿಯಲ್ಲಿಯೇ ಮಂಗಳೂರಿನ ಯಾತ್ರಿಗಳಿಗೆ ಅನುವಾಗುವಂತೆ ಹಜ್‌ ಭವನ ನಿರ್ಮಾಣ ಮಾಡಲು ಸರ್ಕಾರ ಭೂಮಿ ಮಂಜೂರು ಮಾಡಿದೆ ಎಂದು ತಿಳಿಸಿದರು.

ಹಜ್‌ ಯಾತ್ರೆಗೆ ಆಯ್ಕೆ: ಈ ಸಾಲಿನ ಹಜ್‌ ಯಾತ್ರೆಗೆ 14 ಮಕ್ಕಳು ಸೇರಿ 9869 ಅರ್ಜಿಗಳನ್ನು ರಾಜ್ಯ ಹಜ್‌ ಸಮಿತಿಯಿಂದ ಸ್ವೀಕರಿಸಿತ್ತು. 70 ವರ್ಷಕ್ಕೂ ಮೇಲ್ಪಟ್ಟ 459 ಜನ ಹಾಗೂ ಪದ್ಧತಿಯಂತೆ 45 ವರ್ಷ ಮೇಲ್ಪಟ್ಟು 32 ಮಹಿಳೆಯರು ಈ ಬಾರಿಯ ಹಜ್‌ ಯಾತ್ರೆಗೆ ಆಯ್ಕೆಯಾಗಿದ್ದಾರೆ. ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ರೋಷನ್‌ ಬೇಗ್‌, ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ಮತ್ತಿತರರಿದ್ದರು.

ಟಾಪ್ ನ್ಯೂಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರುಕಲಾದ ಬಸ್

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.