ಕೋಲಾರದಲ್ಲಿ 80 ಸಾವಿರಕ್ಕೆ 50 ಲಕ್ಷ ನೀಡುವ ಆಮಿಷ!
Team Udayavani, Jun 16, 2019, 3:00 AM IST
ಕೋಲಾರ: ಬೆಂಗಳೂರಿನ ಐಎಂಎ ಮೋಸ ಬಹಿರಂಗವಾಗುತ್ತಿದ್ದಂತೆಯೇ ಕೋಲಾರ ನಗರದ ಹೊರವಲಯದ ಟಮಕ ಬಡಾವಣೆಯಲ್ಲಿ ಹೊಸ ಕಟ್ಟಡವೊಂದನ್ನು ಬಾಡಿಗೆಗೆ ಪಡೆದಿರುವ ಬೆಂಗಳೂರು ಇಂದಿರಾ ನಗರ ನಿವಾಸಿ ಬಿ.ಅಶೋಕ್ ಎನ್ನುವರು ಎಕೆಎನ್ ಫೌಂಡೇಷನ್ ಹೆಸರಿನಲ್ಲಿ ಜನರಿಂದ ಕೇಂದ್ರ ಸರ್ಕಾರದ ಯೋಜನೆ ನೆಪದಲ್ಲಿ ಸಾವಿರಾರು ರೂ. ವಸೂಲು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸ್ಥಳೀಯರನ್ನೇ ಮಧ್ಯವರ್ತಿಗಳನ್ನಾಗಿ ಬಳಕೆ ಮಾಡಿಕೊಂಡು ಸ್ಥಳೀಯರನ್ನೇ ಕೆಲಸಕ್ಕೆ ನೇಮಕ ಮಾಡಿಕೊಂಡು ಕಚೇರಿಯಲ್ಲಿ ಕಂಪ್ಯೂಟರ್ ಇಂಟರ್‌ನೆಟ್ ಸಂಪರ್ಕ ಪಡೆದುಕೊಂಡು ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿತ್ತು. ಜನರಿಂದ ಸಾವಿರಾರು ರೂ.ಗಳನ್ನು ಪಡೆದುಕೊಂಡಿರುವ ಈ ಸಂಸ್ಥೆ, ಪ್ರತಿ 80 ಸಾವಿರ ರೂ.ಗೆ ಒಂದು ವರ್ಷದೊಳಗೆ 30 ರಿಂದ 50 ಲಕ್ಷ ರೂ.ನ್ನು ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗುತ್ತದೆಯೆಂದು ಮೌಖೀಕವಾಗಿ ವಾಗ್ಧಾನ ಮಾಡುತ್ತಿತ್ತು.
ಹಣ ಪಾವತಿ ಮಾಡಿದ್ದಕ್ಕಾಗಲಿ, ಹಣ ಸ್ಪೀಕೃತಿ ಮಾಡಿಕೊಂಡಿದ್ದಕ್ಕಾಗಲಿ ಯಾವುದೇ ರೀತಿಯ ದಾಖಲೆಗಳನ್ನು ಸಂಸ್ಥೆಯು ನೀಡುತ್ತಿಲ್ಲ. ಇದು ಬಲವಂತವಲ್ಲ, ಹಣ ಬೇಕಿದ್ದರೆ ಪಾವತಿಸಿ. ಇಂಥದ್ದೊಂದು ಅವಕಾಶ ಮತ್ತೆ ಸಿಗದು ಎಂದೇ ಪ್ರಚಾರ ಮಾಡಲಾಗಿದೆ. ಕೋಲಾರ ಸುತ್ತಮುತ್ತಲ ಗ್ರಾಮಸ್ಥರು, ವಿವಿಧ ತಾಲೂಕುಗಳಿಂದ ಆಗಮಿಸಿ ಈ ಸಂಸ್ಥೆಯಲ್ಲಿ ಹಣ ತೊಡಗಿಸಿದ್ದಾರೆಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.