ರಾಜ್ಯದಲ್ಲಿ ಕೋವಿಡ್-19 ಸ್ಪೋಟ: ಒಂದೇ ದಿನ 53 ಜನರಲ್ಲಿ ಸೋಂಕು ಪತ್ತೆ
ರಾಜ್ಯಕ್ಕೆ ತಲೆನೋವಾದ ಅಜ್ಮೀರ್, ಅಹಮದಾಬಾದ್ ಪ್ರವಾಸಿಗರು
Team Udayavani, May 10, 2020, 1:11 PM IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಮಹಾಸ್ಪೋಟವೇ ಸಂಭವಿಸಿದೆ. ಇದೇ ಮೊದಲ ಬಾರಿಗೆ ಒಂದು ದಿನದ ಕೋವಿಡ್ ಸೋಂಕಿತರ ಸಂಖ್ಯ ಅರ್ಧಶತಕದ ಗಡಿ ದಾಟಿದೆ. ಇಂದು ರಾಜ್ಯದಲ್ಲಿ 53 ಜನರಿಗೆ ಸೋಂಕು ತಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 847ಕ್ಕೆ ಏರಿಕೆಯಾಗಿದೆ.
ರಾಜಸ್ಥಾನದ ಅಜ್ಮೀರ್ ನಿಂದ ರಾಜ್ಯಕ್ಕೆ ಆಗಮಿಸಿದವರ ಕಾರಣದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಈ ಮಟ್ಟಿನ ಏರಿಕೆ ಕಂಡು ಬಂದಿದೆ. ಅಜ್ಮೀರ್ ನಿಂದ ಬೆಳಗಾವಿಗೆ ಬಂದಿದ್ದ 22 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಹೊಸ ಎಂಟು ಕೋವಿಡ್ -19 ಪ್ರಕರಣ ದೃಢವಾಗಿದೆ. ಇವರೆಲ್ಲರೂ ರಾಜಸ್ಥಾನದ ಅಜ್ಮೀರ್ ಪ್ರವಾಸದ ಹಿನ್ನಲೆ ಹೊಂದಿದವರು.
ಅಜ್ಮೀರ್ ಪ್ರವಾಸದ ಹಿನ್ನಲೆ ಹೊಂದಿದವರ ಕಾರಣದಿಂದ ದಾವಣಗೆರೆಯಲ್ಲಿ ಒಂದು ಪ್ರಕರಣ, ದೃಢವಾಗಿದೆ. ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಸೋಂಕಿತ ಸಂಖ್ಯೆ 790ರ ಸಂಪರ್ಕದಿಂದ ಬಂದಿದೆ.
ಇದುವರೆಗೆ ಒಂದೂ ಪ್ರಕರಣ ಕಂಡಿರದ ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಎಂಟು ಪ್ರಕರಣಗಳು ದೃಢವಾಗಿದೆ. ಇವರೆಲ್ಲರೂ ಅಹಮದಾಬಾದ್ ನಿಂದ ಬಂದವರಾಗಿದ್ದಾರೆ.
ಕಲಬುರಗಿಯಲ್ಲಿ ಮೂರು ಪ್ರಕರಣ ದೃಢವಾಗಿದ್ದು, ಓರ್ವ ಮಹಾರಾಷ್ಟ್ರದಿಂದ ವ್ಯಕ್ತಿಗೆ ಸೋಂಕು ತಾಗಿದೆ. ಸೋಂಕಿತ ಸಂಖ್ಯೆ 604ರ ಸಂಪರ್ಕದಿಂದ 72ರ ವೃದ್ಧನಿಗೆ ಸೋಂಕು ಬಂದಿದೆ. ಅಫಜಲಪುರದ 35 ವರ್ಷದ ಪುರುಷನಿಗೂ ಸೋಂಕು ತಾಗಿದೆ.
ಬೆಂಗಳೂರು ನಗರದಲ್ಲಿ ಮೂರು ಪ್ರಕರಣ ದೃಢವಾಗಿದ್ದು, ಅದರಲ್ಲಿ ಓರ್ವ ಮಹಿಳೆ (56 ವ) ಸಾವನ್ನಪ್ಪಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕಯಾಗಿದ್ದು, ಮತ್ತೆ ಏಳು ಸೋಂಕು ಪ್ರಕರಣ ಖಚಿತವಾಗಿದೆ. ಸೋಂಕಿತ ಸಂಖ್ಯೆ 659 ರ ಸಂಪರ್ಕದಿಂದ ಸೋಂಕು ಹರಡಿರುವುದು ಖಚಿತವಾಗಿದೆ.
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 847ಕ್ಕೆ ಏರಿಕೆಯಾಗಿದೆ. ಇವರಲ್ಲಿ 31 ಜನರು ಸಾವನ್ನಪ್ಪಿದ್ದು, 405 ಸೋಂಕಿತರು ಗುಣಮುಖರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.