5, 8, 9ನೇ ಕ್ಲಾಸ್ ಬೋರ್ಡ್ ಪರೀಕ್ಷೆ ಅನುದಾನ ಬಿಡುಗಡೆ
ತಿಂಗಳೊಳಗೆ ಖರ್ಚು ವೆಚ್ಚದ ಮಾಹಿತಿ ನೀಡುವಂತೆ ಸೂಚನೆ
Team Udayavani, Apr 2, 2024, 8:02 PM IST
ಬೆಂಗಳೂರು: ರಾಜ್ಯದ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಮೌಲ್ಯಾಂಕನ ಚಟುವಟಿಕೆಗಳಿಗೆ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿ ಅನುದಾನವನ್ನು ಬಿಡುಗಡೆ ಮಾಡಿದೆ. ತಿಂಗಳೊಳಗೆ ಖರ್ಚುವೆಚ್ಚದ ಮಾಹಿತಿ ನೀಡುವಂತೆ ಸೂಚನೆ ನೀಡಿದೆ.
ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಪ್ರತಿ ಮೌಲ್ಯಮಾಪಕರಿಗೆ ದಿನವೊಂದಕ್ಕೆ 100 ರೂ.ಗಳಂತೆ ಗೌರವ ಸಂಭಾವನೆ ನೀಡುವುದು. ಬ್ಲಾಕ್ ಹಂತದಲ್ಲಿ ಪ್ರತಿ ಕೇಂದ್ರಕ್ಕೆ ಪ್ರತಿ ತರಗತಿಗೆ ತಲಾ 2 ಸಾವಿರ ರೂ.ಗಳಂತೆ 6 ಸಾವಿರ ರೂ. ನೀಡಬೇಕು. ಮೌಲ್ಯಮಾಪನ ಪೂರ್ಣಗೊಂಡ ನಂತರ ಶಾಲೆಗಳಿಗೆ ವಾಪಸ್ ಮರು ರವಾನೆಗಾಗಿ ಕ್ಲಸ್ಟರ್ಗಳಿಗೆ 1,500 ರೂ., ಬಳಸಬೇಕು.
ಬೆಂಗಳೂರು ಉತ್ತರ, ದಕ್ಷಿಣ ಶೈಕ್ಷಣಿಕ ಜಿಲ್ಲೆಗಳಿಗೆ ತಲಾ 10 ಸಾವಿರ ರೂ.ಗಳಂತೆ 30 ಸಾವಿರ ರೂ. ನೀಡಬೇಕು ಎಂದು ಮಂಡಳಿ ಅಧ್ಯಕ್ಷರು ಸೂಚನೆ ಕೊಟ್ಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.