6ಕ್ಕೇ ಏಳ್ಳೋರು, 8.30 ಆದ್ರೂ ಬಾಗ್ಲು ತೆಗೀಲಿಲ್ಲ
Team Udayavani, Jan 4, 2017, 3:45 AM IST
ಚಿಕ್ಕಮಗಳೂರು: ಸೋಮವಾರ ರಾತ್ರಿ ಜಿಲ್ಲೆಯ ಸೆರಾಯ್ ರೆಸಾರ್ಟ್‌ನಲ್ಲಿ ತಂಗಿದ್ದ ಸಚಿವ ಡಾ| ಎಚ್.ಎಸ್. ಮಹದೇವಪ್ರಸಾದ್ ಅವರ ಸಾವಿಗೂ ಮುಂಚಿನ ಕ್ಷಣಗಳು ಹೇಗಿದ್ದವು ಎಂಬುದನ್ನುಅವರೊಂದಿಗೇ ರೆಸಾರ್ಟ್‌ನಲ್ಲಿದ್ದ ಅವರ ಆತ್ಮೀಯ ಸ್ನೇಹಿತ ಶಂಕರೇಗೌಡ ಹಾಗೂ ಕೊನೆ ಘಳಿಗೆಯಲ್ಲಿ ಸಚಿವರ ಜೊತೆಗಿದ್ದ ಮಾಜಿ ಶಾಸಕ ಐ.ಬಿ.
ಶಂಕರ್ ವಿವರಿಸಿದ್ದಾರೆ.
“ಪ್ರತಿ ಬಾರಿಯೂ ಬೆಳಗ್ಗೆ 7.30ರ ಸುಮಾರಿಗೆ ಅವರೇ ಬಂದು ನನ್ನನ್ನು ಎಬ್ಬಿಸುತ್ತಿದ್ದರು. ಆದರೆ ಮಂಗಳವಾರ ನಾನು ಅವರ ಮೃತದೇಹವನ್ನು ನೋಡುವಂತಾಯಿತು’ ಎಂದು ತಮ್ಮ ನೋವು ತೋಡಿಕೊಂಡರು ಶಂಕರೇಗೌಡ.
“ಮೈಸೂರಿನಿಂದ ಸಚಿವರೊಟ್ಟಿಗೆ ನಾನು ಹಾಗೂ ನದೀಂ ಇಬ್ಬರೂ ಚಿಕ್ಕಮಗಳೂರಿಗೆ ಬಂದೆವು. ಮಾಜಿ ಶಾಸಕ ಐ.ಬಿ. ಶಂಕರ್ ಅವರ ಮನೆಗೆ ತೆರಳಿ ಊಟ ಮಾಡಿ, ಅಲ್ಲಿಂದ ರಾತ್ರಿ 10.45ರ ವೇಳೆಗೆ ಸೆರಾಯ್ ರೆಸಾರ್ಟ್‌ಗೆ ಬಂದೆವು.
ಸಚಿವರು ಚಾಮರಾಜನಗರದಿಂದ ಬೇರೆ ಜಿಲ್ಲೆಗಳಿಗೆ ಪ್ರವಾಸ ಹೋಗುವ ಸಂದರ್ಭದಲ್ಲಿ ನನ್ನನ್ನೂ ಕರೆಯುತ್ತಿದ್ದರು.
ಆ ರೀತಿ ಬಂದಾಗ ಇಬ್ಬರೂ ಒಂದೇ ಕೊಠಡಿಯಲ್ಲಿ ಮಲಗುತ್ತಿದ್ದೆವು. ಆದರೆ ಈ ಬಾರಿ ನಮ್ಮೊಟ್ಟಿಗೆ ನದೀಂ ಇದ್ದರು. ಹೀಗಾಗಿ ನನಗೆ, ನದೀಂಗೆ ಒಂದು ಕೊಠಡಿಯಲ್ಲಿ ಮಲಗುವಂತೆ ಸೂಚಿಸಿದರು’ ಎಂದು ಕಣ್ಣೀರಿಟ್ಟರು ಶಂಕರೇಗೌಡ.
ಬಾಗಿಲು ತೆರೆಯಲಿಲ್ಲ: “ಪ್ರತಿದಿನವೂ ಸಚಿವ ಮಹದೇವ ಪ್ರಸಾದ್ ಬೆಳಗ್ಗೆ 6 ಗಂಟೆಗೇ ಎದ್ದು ವಾಕಿಂಗ್ ಹೋಗುತ್ತಿದ್ದರು.
ವಾಕಿಂಗ್ ಮುಗಿಸಿ ವಾಪಸಾದಾಗ ನಾನು ಇನ್ನೂ ಎದ್ದಿರದಿದ್ದರೆ, ಅವರೇ ನನ್ನನ್ನು ಎಬ್ಬಿಸುತ್ತಿದ್ದರು. ಆದರೆ ಇಂದು ನಾನು ಬೆಳಗ್ಗೆ 7.30ಕ್ಕೆ ಎದ್ದಾಗ ಸಚಿವರ ಕೊಠಡಿ ಬಾಗಿಲು ತೆರೆದಿರಲಿಲ್ಲ. ಹಲವು ಬಾರಿ ಬಡಿದರೂ ಕೊಠಡಿ ಬಾಗಿಲು ತೆರೆಯಲಿಲ್ಲ. ಬಹುಶಃ ಸ್ನಾನ ಮಾಡುತ್ತಿರಬಹುದು ಎಂದು ಭಾವಿಸಿ ನಾನು ಮತ್ತು ನದೀಂ ಇಬ್ಬರೂ ಹೊರ ಬಂದು
ಟೀ ಕುಡಿದೆವು’ ಎಂದು ವಿವರಿಸಿದರು.
ಮಲಗಿದ ಸ್ಥಿತಿಯಲ್ಲೇ ಮರಣ: ಸಮಯ 8.30 ಆದರೂ ಸಚಿವರ ಕೊಠಡಿಯ ಬಾಗಿಲು ತೆರೆಯಲಿಲ್ಲ. ಆಗ ಪುನಃ ಕೊಠಡಿಯ ಬಾಗಿಲನ್ನು ಹಲವು ಬಾರಿ ಬಡಿದೆವು. ಆ ನಂತರ ಅವರ ಮೊಬೈಲ್‌ಗೆ ಕರೆ ಮಾಡಿದೆವು. ಆಗಲೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ಅನುಮಾನಗೊಂಡು ಕೊಠಡಿಯ ಸುತ್ತಲೂ ಸುತ್ತಿದೆವು. ಎಲ್ಲ ಕಿಟಕಿಗಳಿಗೆ
ಕರ್ಟನ್ ಹಾಕಲಾಗಿತ್ತು. ಒಳಗೇನೂ ಕಾಣುತ್ತಿರಲಿಲ್ಲ. ಒಂದು ಕಡೆ ಸ್ವಲ್ಪ ಕರ್ಟನ್ ತೆರೆದಿದ್ದು, ಒಳಗೆ ನೋಡಿದಾಗ ಸಚಿವರು ಮಲಗಿದ ಸ್ಥಿತಿಯಲ್ಲಿ ಇದ್ದುದು ಕಂಡು ಬಂದಿತು. ಕೂಡಲೇ ಹೋಟೆಲ್ ಸಿಬ್ಬಂದಿಗೆ ವಿಚಾರ ತಿಳಿಸಿ ಡೂಪ್ಲಿಕೇಟ್ ಕೀ ಬಳಸಿ ಕೊಠಡಿ ಬಾಗಿಲು ತೆರೆಯಲಾಯಿತು. ತಾವೇ ಹೋಗಿ ಅವರ ಕೈ ಮುಟ್ಟಿ ನೋಡಿದಾಗ ಅದು ತಣ್ಣಗಾಗಿತ್ತು. ಕೂಡಲೇ ಜಿಲ್ಲಾಡಳಿತಕ್ಕೆ ಸುದ್ದಿ ಮುಟ್ಟಿಸಲಾಯಿತು ಎಂದು ಶಂಕರೇಗೌಡ ಹೇಳಿದರು.
ಆರೋಗ್ಯ ಸರಿಯಿಲ್ಲ ಎಂದಿದ್ದರು: ಮಾಜಿ ಶಾಸಕ ಐ.ಬಿ. ಶಂಕರ್ ಮಾತನಾಡಿ, “ಕಳೆದ ಬಾರಿ ಚಿಕ್ಕಮಗಳೂರಿಗೆ ಬಂದಾಗ ನನ್ನ ಮನೆಗೆ ಬರುವುದಕ್ಕೆ ಆಗಿಲ್ಲ ಎಂದು ಅವರು ಬಹಳ ಬೇಸರಗೊಂಡಿದ್ದರು. ಆದ ಕಾರಣ ಈ ಬಾರಿ
ಅವರು ಕಾಂಗ್ರೆಸ್ ಮುಖಂಡರಿಗೂ ವಿಚಾರ ತಿಳಿಸದೆ ನೇರವಾಗಿ ನನ್ನ ಮನೆಗೆ ಬಂದರು. ಮನೆಗೆ ಬಂದಾಗ ಸಾಕಷ್ಟು ಸಮಯ ನಮ್ಮ ಬಳಿ ಮಾತನಾಡಿ, ತಮಗೆ ಬೈಪಾಸ್ ಸರ್ಜರಿ ಆಗಿರುವುದು, ಏಪ್ರಿಲ್ ತಿಂಗಳಲ್ಲಿ ಮತ್ತೂಮ್ಮೆ ಚಿಕಿತ್ಸೆ ಪಡೆದುಕೊಂಡಿದ್ದು ಎಲ್ಲವನ್ನೂ ಹೇಳಿಕೊಂಡು ಆರೋಗ್ಯ ಸರಿ ಇಲ್ಲ. ಕೈ ಎಳೆಯುತ್ತಿತ್ತು. ಇದಕ್ಕೆ ಬೆಂಗಳೂರಿನಲ್ಲಿ ಚಿಕಿತ್ಸೆ
ಪಡೆದುಕೊಂಡಿದ್ದೇನೆ. ಈಗ ಪರವಾಗಿಲ್ಲ ಎಂದೆಲ್ಲ ಹೇಳಿಕೊಂಡರು’ ಎಂಬುದಾಗಿ ವಿವರಿಸಿದರು.
“ಆರೋಗ್ಯ ಸರಿ ಇಲ್ಲ ಎಂದ ಮೇಲೆ ಸುತ್ತಾಟ ಏಕೆ? ಸ್ವಲ್ಪ ವಿಶ್ರಾಂತಿ ಪಡೆಯಿರಿ ಎಂದು ನಾನು ಸಲಹೆ ನೀಡಿದಾಗ, ಏನೂ ಮಾಡಲು ಆಗುವುದಿಲ್ಲ. ಹೋಗುವ ಕಡೆಗೆ ಹೋಗಲೇ ಬೇಕಾಗುತ್ತದೆ ಎಂಬ ಉತ್ತರವನ್ನು ಸಚಿವರು ನೀಡಿದರು. ರಾತ್ರಿ 10.30ಕ್ಕೆ ಊಟ ಮಾಡೋಣ ಎಂದು ಅವರೇ ಹೇಳಿದರು. ಊಟವಾದ ನಂತರ ಹೋಗಿ ಬರುತ್ತೇನೆ ಎಂದು ಹೇಳಿದವರು, ಪುನಃ ವಾಪಸ್ ಬರಲಾಗದ ಸ್ಥಳಕ್ಕೆ ಹೋದರು’ ಎಂದು ಬೇಸರಗೊಂಡರು ಶಂಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
MUST WATCH
ಹೊಸ ಸೇರ್ಪಡೆ
Railway; 2 ವರ್ಷದಲ್ಲಿ 50 ಅಮೃತ್ ಭಾರತ ರೈಲು ಉತ್ಪಾದನೆ: ಅಶ್ವಿನಿ ವೈಷ್ಣವ್
Fraud Case: ವೈದ್ಯಕೀಯ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚನೆ
Cardiac arrest: ಗುಜರಾತ್ ಶಾಲೆಯಲ್ಲಿ 3ನೇ ತರಗತಿ ವಿದ್ಯಾರ್ಥಿನಿ ಸಾ*ವು
Chhattisgarh: ನಕ್ಸಲರು ಇಟ್ಟಿದ್ದ ಐಇಡಿ ಸ್ಫೋ*ಟ, ವ್ಯಕ್ತಿ ಸಾ*ವು
Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.