![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Jul 26, 2022, 9:31 PM IST
ಬೆಂಗಳೂರು: ಶಾಲಾ ಪ್ರವೇಶಾತಿ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಿರುವ ರಾಜ್ಯ ಶಿಕ್ಷಣ ಇಲಾಖೆಯು ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ಜೂ. 1ಕ್ಕೆ ಅನ್ವಯವಾಗುವಂತೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ಆದೇಶ ಹೊರಡಿಸಿದೆ.
ಆರ್‌ಟಿಇ ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು-2012ರಂತೆ ಶೈಕ್ಷಣಿಕ ವರ್ಷದಲ್ಲಿ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿಪಡಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.
2016-17ನೇ ಶೈಕ್ಷಣಿಕ ಸಾಲಿನಲ್ಲಿ ಆರ್‌ಟಿಇ ಕಾಯ್ದೆ 2009ರ ಸೆಕ್ಷನ್ 12 (1) (ಸಿ) ಪ್ರಕಾರ, ಎಲ್‌ಕೆಜಿ ಪ್ರವೇಶಕ್ಕೆ 3 ವರ್ಷ 10 ತಿಂಗಳಿನಿಂದ 4 ವರ್ಷ 10 ತಿಂಗಳು ಹಾಗೂ 1ನೇ ತರಗತಿಗೆ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳ ವಯೋಮಿತಿ ನಿಗದಿ ಮಾಡಲಾಗಿತ್ತು.
2018ರಲ್ಲಿ ವಯೋಮಿತಿ ಸಡಿಲಿಸಿದ್ದ ಸರಕಾರ 1ನೇ ತರಗತಿಗೆ ದಾಖಲಿಸಲು ಕನಿಷ್ಠ 5 ವರ್ಷ 5 ತಿಂಗಳಿನಿಂದ ಗರಿಷ್ಠ 7 ವರ್ಷದ ವಯೋಮಿತಿಯನ್ನು ನಿಗದಿ ಮಾಡಿತ್ತು. ಈಗ ಹೊಸ ಆದೇಶ ಹೊರಡಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗಿದ್ದು, ಬಹುತೇಕ ಶಾಲೆಗಳಲ್ಲಿ ದಾಖಲಾತಿ ನಡೆದಿದೆ. ಆದ್ದರಿಂದ ಮುಂದಿನ ವರ್ಷದಿಂದ ಈ ಆದೇಶ ಅನ್ವಯವಾಗಲಿದೆ.
– ಡಾ| ಆರ್. ವಿಶಾಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.