ಒಂದೇ ದಿನ 600 ಅರ್ಜಿ ವಿಚಾರಣೆ! ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ವಿಕ್ರಮ
544 ಅರ್ಜಿಗಳು ಬೆಂಗಳೂರು ಜಲಮಂಡಳಿಗೆ ಸಂಬಂಧಿಸಿದ್ದಾಗಿದ್ದವು.
Team Udayavani, Jun 19, 2024, 10:40 AM IST
ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮಂಗಳವಾರ ಒಂದೇ ದಿನದ ಕಲಾಪದಲ್ಲಿ ಬರೋಬ್ಬರಿ 600 ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ.
ಆರಂಭದಲ್ಲೇ ಅಷ್ಟೂ ವಿಚಾರಣೆ ಮಂಗಳವಾರ ನಡೆಸಲಾಗುತ್ತದೆ ಎಂದು ನಿಗದಿ ಪಡಿಸಲಾಗಿತ್ತು. ಅದರಂತೆಯೇ ಅಷ್ಟು ಅರ್ಜಿಗಳ ವಿಚಾರಣೆಯನ್ನು ಅಪರಾಹ್ನ 3.56ರ ವೇಳೆಗೆ ಪೂರ್ಣಗೊಳಿಸಿ ಕಲಾಪ ಮುಗಿಸಿದರು.
ನಿಗದಿಯಾಗಿದ್ದ 600 ಅರ್ಜಿಗಳ ಪೈಕಿ 180 ಅರ್ಜಿಗಳ ಸಂಬಂಧ ಮಧ್ಯಾಂತರ ಆದೇಶ ನೀಡಿದ್ದಾರೆ.
87 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ವಿಲೇವಾರಿ ಮಾಡಿದ್ದಾರೆ. ನ್ಯಾ| ನಾಗಪ್ರಸನ್ನ ಅವರು ಕಳೆದ ಮಾ. 22ರಂದು ಒಂದೇ ದಿನದ ಕಲಾಪದದಲ್ಲಿ 801 ಅರ್ಜಿಗಳನ್ನು ವಿಚಾರಣೆ ನಡೆಸಿದ್ದರು. ಅವುಗಳ ಪೈಕಿ 36 ಅರ್ಜಿಗಳ ಸಂಬಂಧ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದರು. ಉಳಿದಂತೆ ಸುಮಾರು 572 ಅರ್ಜಿಗಳನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸಿದರು.
ಇತ್ಯರ್ಥವಾದ ಪ್ರಕರಣಗಳಲ್ಲಿ 544 ಅರ್ಜಿಗಳು ಬೆಂಗಳೂರು ಜಲಮಂಡಳಿಗೆ ಸಂಬಂಧಿಸಿದ್ದಾಗಿದ್ದವು.
ಈ ಹಿಂದೆ 750 ಅರ್ಜಿ ವಿಲೇವಾರಿ
ಈ ಹಿಂದೆ ನ್ಯಾಙ ಕೃಷ್ಣ ಎಸ್. ದೀಕ್ಷಿತ್ ಅವರು ಒಂದೇ ದಿನದ ಕಲಾಪದಲ್ಲಿ ಸುಮಾರು 750 ಅರ್ಜಿಗಳನ್ನು ವಿಲೇವಾರಿ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.