6th Guarantee ಎನ್ನುತ್ತಿದ್ದಾರೆ; ಏನು ಮಾಡಬೇಕು?: ಅಧಿಕಾರಿಗಳಿಗೆ ಸಿಎಂ ಪ್ರಶ್ನೆ
ವಿದ್ಯುತ್‌ಗೆ ಯಾಕೆ ಸಿದ್ಧತೆ ಮಾಡಿಕೊಂಡಿಲ್ಲ
Team Udayavani, Oct 13, 2023, 11:41 PM IST
ಬೆಂಗಳೂರು: ಅಧಿಕಾರಕ್ಕೆ ಬರುವ ಮುನ್ನ ನಾವು ಏಳು ತಾಸು ನಿರಂತರ ಕೃಷಿ ಉದ್ದೇಶಕ್ಕೆ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದೆವು. ಅದರಂತೆ ರೈತರು ಕೇಳುತ್ತಿದ್ದಾರೆ. ರೈತರಿಗೆ ವಿದ್ಯುತ್ ಕೊರತೆ ಆಗದಂತೆ ಆಕಸ್ಮಿಕ ಸಂದರ್ಭಕ್ಕೆ ಅಗತ್ಯ ಯೋಜನೆ ಅಥವಾ ಸಿದ್ಧತೆಗಳನ್ನು ಯಾಕೆ ಮಾಡಿಕೊಂಡಿಲ್ಲ? ಲೋಡ್‌ಶೆಡ್ಡಿಂಗ್ ಸರಕಾರದ 6ನೇ ಗ್ಯಾರಂಟಿ ಅಂತ ಟೀಕಿಸುತ್ತಿದ್ದಾರೆ. ಏನು ಮಾಡಬೇಕು ನೀವೇ ಹೇಳಿ?
ಇವು ಸಿಎಂ ಗೃಹ ಕಚೇರಿ “ಕೃಷ್ಣಾ’ದಲ್ಲಿ ನಡೆದ ಸಭೆ ಯಲ್ಲಿ ಇಂಧನ ಇಲಾಖೆ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ ಸಿದ್ದ ರಾಮಯ್ಯ ಅವರು ಕೇಳಿದ ಸರಣಿ ಪ್ರಶ್ನೆಗಳು.
ಇರುವ ವಿದ್ಯುತ್ ಅನ್ನು ವೈಜ್ಞಾನಿಕವಾಗಿ ಬೇರೆ ಬೇರೆ ಹಂತಗಳಲ್ಲಿ ಸರಬರಾಜು ಮಾಡಲು ಕ್ರಮ ವಹಿಸಬೇಕು. ಮೊದಲೇ ಹೀಗೆ ಮಾಡಿದ್ದರೆ ವಿದ್ಯುತ್ ಕೊರತೆ ನಡುವೆಯೂ ರೈತರಿಗೆ ಸಮಸ್ಯೆ ಆಗದಂತೆ ನಿರ್ವಹಿಸಬಹುದಿತ್ತು. ಕಚೇರಿಯಲ್ಲೇ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಚೀಫ್ ಎಂಜಿನಿಯರ್ (ಮುಖ್ಯ ಎಂಜಿನಿ ಯರ್)ಗಳು ಫೀಲ್ಡ್ ಗೆ ಹೋಗಬೇಕು. ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಚಾಟಿ ಬೀಸಿದರು.
ಹಿಂದಿನ ಸರಕಾರದಲ್ಲಿ ಉತ್ತಮ ವಾದ ಅಗತ್ಯ ಮಳೆ ಆಗಿದ್ದರೂ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. ನಮ್ಮ ಸರಕಾರ ಬಂದ ಮೇಲೆ ಮಳೆ ಕೊರತೆ ಆಗಿ, ಬರಗಾಲ ಬಂದಿದೆ. ಇದನ್ನು ರೈತರಿಗೆ ಮನವರಿಕೆ ಮಾಡಿಸಬೇಕು. ರೈತರಿಗೆ ಯಾವ ವೇಳೆ ಎಷ್ಟು ವಿದ್ಯುತ್ ಅಗತ್ಯವಿದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಇರುವ ವಿದ್ಯುತ್ ಅನ್ನು ಅಗತ್ಯ ವೇಳೆಯಲ್ಲಿ ಸರಬರಾಜು ಮಾಡಬೇಕು ಎಂದು ಸೂಚಿಸಿದರು.
ವಿದ್ಯುತ್ ಕಳ್ಳತನ ಮತ್ತು ವಿದ್ಯುತ್ ಸೋರಿಕೆ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ವಿಚಕ್ಷಣ ದಳದಲ್ಲಿ ಎಷ್ಟು ಅಧೀಕ್ಷಕರು ಇದ್ದೀರಿ? ಏನು ಮಾಡುತ್ತಿ ದ್ದೀರಿ? ಇವರು ಎಷ್ಟು ವಿದ್ಯುತ್ ಕಳ್ಳತನ ಪತ್ತೆ ಹಚ್ಚಿ ¨ªಾರೆ ಎನ್ನುವು ದನ್ನು ನಿಗಾ ವಹಿಸಿ ಕ್ರಿಯಾಶೀಲವಾಗಿ ಕೆಲಸ ಮಾಡಲು ಸೂಚನೆ ನೀಡಿ ಎಂದೂ ಹೇಳಿದರು.
ಅಧಿಕಾರಿಗಳ ಸಮಜಾಯಿಷಿ
ಇದಕ್ಕೂ ದೈನಂದಿನ ಬಳಕೆಯು 180 ಮಿಲಿಯನ್ ಯೂನಿಟ್‌ನಿಂದ 260 ಮಿಲಿಯನ್ ಯೂನಿಟ್‌ಗಳಿಗೆ ಏರಿಕೆಯಾಗಿದೆ. ಹಗಲು ಗರಿಷ್ಠ ವಿದ್ಯುತ್ ಬೇಡಿಕೆ 11,000 ಮೆ.ವ್ಯಾ.ನಿಂದ 16,000 ಮೆ.ವ್ಯಾ.ಗೆ ಏರಿಕೆಯಾಗಿದೆ (ಮಳೆಗಾಲದಲ್ಲಿ). ಜಲವಿದ್ಯುತ್ ಮತ್ತು ಪವನ ವಿದ್ಯುತ್ ಲಭ್ಯತೆಯ ಕೊರತೆಯಿಂದಾಗಿ, ರಾತ್ರಿ ವೇಳೆ ಸುಮಾರು 10,000 ಮೆ.ವ್ಯಾ. ವಿದ್ಯುತ್ ಕೊರತೆ ಎದುರಿಸಲಾಗುತ್ತಿದೆ. ವಿದ್ಯುತ್ ವಿನಿಮಯ ಕೇಂದ್ರಗಳಲ್ಲಿಯೂ ಹೆಚ್ಚಿನ ಬೇಡಿಕೆಯಿರುತ್ತದೆ. ಇದರ ಹೊರತಾಗಿಯೂ ರಾಜ್ಯದಿಂದ 1,000ದಿಂದ 1,500 ಮೆ.ವ್ಯಾ. ಖರೀದಿಸಲು ಪ್ರಯತ್ನಗಳು ನಡೆಯು ತ್ತಿವೆ ಎಂದು ಸಮಜಾಯಿಷಿ ನೀಡಿ ದರು. ಆಗ ಮುಖ್ಯಮಂತ್ರಿ ತರಾಟೆಗೆ ತೆಗೆದುಕೊಂಡರು.
ವಿದ್ಯುತ್ ವಿನಿಮಯದ ವಿದ್ಯುತ್ ಲಭ್ಯತೆಯ ಮೇಲ್ವಿಚಾರಣೆಯನ್ನು ಪ್ರತಿಗಂಟೆಯ ಆಧಾರದಲ್ಲಿ ಕೈಗೊಳ್ಳಲಾಗುತ್ತಿದ್ದು, ರಾಜ್ಯ ಲೋಡ್ ವಿತರಣೆ ಕೇಂದ್ರ (ಖಔಈಇ)ಯ ಪ್ರಾಜೆಕ್ಷ®ಗಳು ಹಾಗೂ ಆವಶ್ಯಕತೆಗೆ ಅನುಗುಣವಾಗಿ ವಿದ್ಯುತ್ ಖರೀದಿಗೆ ಬಿಡ್‌ಗಳನ್ನು ಕರೆಯಲಾಗುತ್ತಿದೆ. ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳೊಂದಿಗೆ ದ್ವಿಪಕ್ಷೀಯ ವಿದ್ಯುತ್ ವಿನಿಮಯ ಆಧಾರದಲ್ಲಿ ವಿದ್ಯುತ್ ಪಡೆಯಲಾಗುತ್ತಿದೆ. ಈಗ ಪಡೆಯುತ್ತಿರುವ ವಿದ್ಯುತ್ ಅನ್ನು ಮುಂದಿನ ಮುಂಗಾರು ಅವಧಿಗಳಲ್ಲಿ ಹಿಂದಿರುಗಿಸಲಾಗುವುದು. ಅಲ್ಲದೆ, ಅಲ್ಪಾವಧಿ ಆಧಾರದಲ್ಲಿ 1300 ಮೆ.ವ್ಯಾ.ವಿದ್ಯುತ್ ಖರೀದಿ ಕೈಗೊಳ್ಳಲು ಕೆಇಆರ್‌ಸಿ ಅನುಮೋದನೆ ಪಡೆಯಲಾಗಿದ್ದು, ಟೆಂಡರ್ ಕರೆಯಲಾಗುತ್ತಿದೆ. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸೆಕ್ಷನ್ 11 ಜಾರಿ; ಮುಕ್ತ ಮಾರಾಟಕ್ಕೆ ಕಡಿವಾಣ
ರಾಜ್ಯದ ಮುಕ್ತ ಮಾರುಕಟ್ಟೆಗಳಿಂದ ವಿದ್ಯುತ್ ಪಡೆಯಲು ರಾಷ್ಟ್ರೀಯ ವಿಪತ್ತಿನ ಅಡಿ ವಿದ್ಯುತ್ ಕಾಯ್ದೆ ಸೆಕ್ಷನ್ 11 ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಉತ್ಪಾದಕರಿಂದ (ಶಾಖೋತ್ಪನ್ನ, ಸಹ-ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಮೂಲ) ಸುಮಾರು 800 ಮೆ.ವ್ಯಾ. ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಗಮನಕ್ಕೆ ತಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.