![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jun 12, 2022, 6:12 PM IST
ದಾವಣಗೆರೆ: ರಕ್ಷಿತ್ ಶೆಟ್ಟಿ ಅಭಿನಯದ “777 ಚಾರ್ಲಿ” ಚಿತ್ರ ನೋಡಲು ಪ್ರೀತಿಯ ಸಾಕು ನಾಯಿಯೊಂದಿಗೆ ಬಂದಿದ್ದವರಿಗೆ ಚಿತ್ರ ಮಂದಿರದ ಒಳಗೆ ಪ್ರವೇಶ ನಿರಾಕರಿಸಿದ್ದಕ್ಕೆ ನಾಯಿಯೊಂದಿಗೆ ಮೂವರು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ದಾವಣಗೆರೆಯಲ್ಲಿ ನಡೆದಿದೆ.
ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಬಗ್ಗೆ 777 ಚಾರ್ಲಿ ಚಿತ್ರದಲ್ಲಿ ಅತಿ ಮನೋಜ್ಞವಾಗಿ ತೋರಿಸಲಾಗಿದೆ. ಹಾಗಾಗಿ ತಮ್ಮ ಪ್ರೀತಿಯ ಸಾಕು ನಾಯಿ ಡಯಾನದೊಂದಿಗೆ ಚಿತ್ರವನ್ನು ನೋಡಬೇಕು ಎಂಬ ಆಸೆಯಿಂದ ದಾವಣಗೆರೆ ತಾಲೂಕಿನ ಪುಟಗನಾಳ್ ಗ್ರಾಮದ ಕೆಂಚ ಎಂಬುವರು ಚಿತ್ರಮಂದಿರಕ್ಕೆ ಆಗಮಿಸಿದ್ದರು.
ಮೂವರಿಗೆ ಅಡ್ವಾನ್ಸ್ ಟಿಕೆಟ್ ಬುಕ್ ಸಹ ಮಾಡಿದ್ದರು. ಬೆಳಗಿನ ಪ್ರದರ್ಶನಕ್ಕೆ ಬಂದಾಗ ಚಿತ್ರಮಂದಿರದವರು ನಾಯಿಯನ್ನು ಚಿತ್ರಮಂದಿರದ ಒಳಕ್ಕೆ ಬಿಡಲು ನಿರಾಕರಿಸಿದರು. ಜಿಲ್ಲಾಡಳಿತದಿಂದ ಅನುಮತಿ ತಂದರೆ ಮಾತ್ರ ನಾಯಿಗೆ ಪ್ರವೇಶ ನೀಡಲಾಗುತ್ತದೆ ಎಂದು ಹೇಳಿದರು.
ನಾಯಿ ಮತ್ತು ಮಾನವರ ಸಂಬಂಧದ ಬಗ್ಗೆ 777 ಚಾರ್ಲಿ ಚಿತ್ರದಲ್ಲಿ ಬಹಳ ಚೆನ್ನಾಗಿ ತೋರಿಸಲಾಗಿದೆ. ಹಾಗಾಗಿ ನಾನು ನನ್ನ ಪ್ರೀತಿಯ ಸಾಕು ನಾಯಿಯೊಂದಿಗೆ ಚಿತ್ರ ನೋಡಬೇಕು. ನನ್ನ ನಾಯಿಗೆ ಡಯಾನ 777 ಹೆಸರಿಡಬೇಕು ಎಂದೂ ತೀರ್ಮಾನ ಮಾಡಿದ್ದೇನೆ. ಹಾಗಾಗಿ ಸಾಕುನಾಯಿಯೊಂದಿಗೆ ಚಿತ್ರ ನೋಡಲು ಬಿಡಬೇಕು ಎಂದು ನಾಯಿ ಮಾಲೀಕ ಕೆಂಚ ಇತರರು ಎಷ್ಟೇ ಕೇಳಿಕೊಂಡರೂ ಚಿತ್ರಮಂದಿರದ ಒಳಗೆ ಹೋಗಲು ಬಿಡಲಿಲ್ಲ. ಇದರಿಂದ ಬೇಸತ್ತ ಕೆಂಚ ಮತ್ತಿತರರು ಚಿತ್ರಮಂದಿರದ ಮುಂದೆಯೇ ನಾಯಿಯೊಂದಿಗೆ ಕೆಲ ಕಾಲ ಪ್ರತಿಭಟನೆ ನಡೆಸಿದರು. ನಂತರ ನಿರಾಸೆಯಿಂದಲೇ ಗ್ರಾಮಕ್ಕೆ ತೆರಳಿದರು.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.