ಬಿಗಿ ಕ್ರಮಗಳಿಂದ 8ರಿಂದ 10 ಕೋಟಿ ರೂ. ಉಳಿತಾಯ
Team Udayavani, Dec 22, 2018, 6:00 AM IST
ಸುವರ್ಣಸೌಧ: ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿದ್ದರಿಂದ ಒಟ್ಟಾರೆ ವೆಚ್ಚದಲ್ಲಿ ಸುಮಾರು 8ರಿಂದ 10 ಕೋಟಿ ರೂ. ಉಳಿತಾಯವಾಗಿದೆ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದರು.
ಅಧಿವೇಶನದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆಚ್ಚದ ಪ್ರಮಾಣವನ್ನು ಕಡಿಮೆ ಮಾಡಿದ್ದರೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿರಲಿಲ್ಲ. ಸೌಲಭ್ಯಗಳಲ್ಲಿ ಕೊರತೆ ಇರಲಿಲ್ಲ.
ಕಳೆದ ಅಧಿವೇಶನದ ಸಮಯದಲ್ಲಿ ಸುಮಾರು 22 ಕೋಟಿ ರೂ.ವೆಚ್ಚ ಮಾಡಲಾಗಿದೆ. ನಂತರ, ಖರ್ಚು ವೆಚ್ಚದ ಬಗ್ಗೆ ಸಾಕಷ್ಟು ದೂರು ಹಾಗೂ ಆರೋಪಗಳು ಕೇಳಿ ಬಂದಿದ್ದವು. ಆ ಹಿನ್ನೆಲೆಯಲ್ಲಿ ಯಾವುದಕ್ಕೆಲ್ಲಾ ಅಷ್ಟೊಂದು ಹಣ ವೆಚ್ಚವಾಗಿದೆ? ಎಲ್ಲಿ ಅನಗತ್ಯ
ವೆಚ್ಚವಾಗಿದೆ ಎಂಬುದನ್ನು ತಿಳಿದುಕೊಳ್ಳಲು ಕೂಲಂಕುಷವಾಗಿ ತನಿಖೆಗೆ ಆದೇಶ ಮಾಡಲಾಗುತ್ತಿದೆ. ಶೀಘ್ರದಲ್ಲೇ ಈ ತನಿಖಾ ವರದಿ ಬರಲಿದ್ದು, ಅದು ಕೈಸೇರಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಕಳೆದ ಆಧಿವೇಶನದಲ್ಲಿ ಸುಮಾರು 8 ರಿಂದ 10 ಕೋಟಿ ರೂ.ಹೆಚ್ಚುವರಿಯಾಗಿ ಖರ್ಚಾಗಿದೆ. ಇದು ಸಾರ್ವಜನಿಕರ ಹಣ. ಅನಗತ್ಯವಾಗಿ ಪೋಲಾಗಬಾರದು. ಮುಖ್ಯವಾಗಿ ಸಭಾಪತಿ ಹಾಗೂ ಸಭಾಧ್ಯಕ್ಷರ ಕಚೇರಿಗಳು ಅನುಮಾನದಿಂದ ಹೊರತಾಗಿರಬೇಕು. ಆ ಹಿನ್ನೆಲೆಯಲ್ಲಿ ತನಿಖೆಗೆ ವಹಿಸಲಾಗಿದೆ ಎಂದು ಹೇಳಿದರು.
ಕಳೆದ ಬಾರಿಯಂತೆ ಈ ಅಧಿವೇಶನದಲ್ಲಿ ದುಂದು ವೆಚ್ಚವಾಗಬಾರದು ಎಂಬ ಉದ್ದೇಶದಿಂದ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಉಜ್ವಲ ಕುಮಾರ್ ಘೋಷ್ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಅವರೊಂದಿಗೆ ಬೆಳಗಾವಿ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಧಾರವಾಡ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದರು. ಅದರ ಫಲವಾಗಿ ಅಧಿವೇಶನದಲ್ಲಿ ಸಾಕಷ್ಟು ಹಣ ಉಳಿತಾಯ ಮಾಡಿದ್ದೇವೆ ಎಂದು ತಿಳಿಸಿದರು.
ಒಟ್ಟಾರೆ ಅಧಿವೇಶನದ ಬಗ್ಗೆ ಸಮಾಧಾನ ಇದೆ. ಆದರೆ, ಉತ್ತರ ಕರ್ನಾಟಕದ ವಿಷಯಗಳು, ಸಮಸ್ಯೆ, ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿಲ್ಲ ಎಂಬ ನೋವಿದೆ. ಅಧಿವೇಶನಕ್ಕೆ ಮುನ್ನ ಈ ಭಾಗದ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಡಳಿತ
ಹಾಗೂ ಪ್ರತಿಪಕ್ಷದ ನಾಯಕರ ಜೊತೆ ಸಮಾಲೋಚನೆ ಮಾಡಲಾಗಿತ್ತು. ಆದರೆ, ನಮ್ಮ ಆಶಯದಂತೆ ಚರ್ಚೆ ನಡೆಯಲಿಲ್ಲ ಎಂದು ವಿಷಾದಿಸಿದರು.
ಅಧಿವೇಶನ ತೃಪ್ತಿಕರ: ಸ್ಪೀಕರ್
ಸುವರ್ಣಸೌಧ: ಸುವರ್ಣಸೌಧದಲ್ಲಿ ಸೆಪ್ಟೆಂಬರ್ 10 ರಿಂದ ನಡೆದ 15ನೇ ವಿಧಾನಸಭೆಯ 2ನೇ ಅಧಿವೇಶನ ತೃಪ್ತಿಕರವಾಗಿ
ಮುಕ್ತಾಯಗೊಂಡಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್ ಹೇಳಿದರು. ಸುವರ್ಣ ವಿಧಾನಸೌಧದಲ್ಲಿ
ಪತ್ರಿಕಾಗೋಷ್ಠಿ ನಡೆಸಿದ ಅವರು, ವಿಧಾನಸಭೆಯಲ್ಲಿ 10 ದಿನಗಳ ಕಾಲ ನಡೆದ ಅಧಿವೇಶನದಲ್ಲಿ 40 ಗಂಟೆ 45 ನಿಮಿಷಗಳ ಕಾಲ
ಕಾರ್ಯ ಕಲಾಪಗಳು ನಡೆದಿವೆ. ನಿಯಮ 58ರ ಅಡಿ ಅರ್ಧ ಗಂಟೆ ಕಾಲಾವಧಿ ಚರ್ಚೆಯಡಿ ಮೂರು ಸೂಚನೆಗಳನ್ನು
ಸ್ವೀಕರಿಸಲಾಯಿತು. ನಿಯಮ 72ರ ಅಡಿ 224 ಸೂಚನೆಗಳನ್ನು ಸ್ವೀಕರಿಸಿ, ಅದರ ಪೈಕಿ ಎಂಟು ಸೂಚನೆಗಳಿಗೆ ಸದನದಲ್ಲಿ ಚರ್ಚಿಸಿ
ಉತ್ತರಿಸಲಾಯಿತು. ಉಳಿದ 216 ಸೂಚನೆಗಳ ಪೈಕಿ 41 ಸೂಚನೆಗಳಿಗೆ ಉತ್ತರಗಳನ್ನು ಮಂಡಿಸಲಾಯಿತು ಎಂದರು.
ಅಧಿವೇಶನ ನಡೆದಿದ್ದರ ಬಗ್ಗೆ ಸಮಾಧಾನ ಇದ್ದರೂ ಉ.ಕ ಭಾಗದ ವಿಷಯಗಳು ಅದರಲ್ಲೂ ವಿಶೇಷವಾಗಿ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆಯಾಗದೇ ಮುಂದೂಡಿದ್ದು ನೋವುಂಟುಮಾಡಿತು. ಆದರೆ, ಇದರಲ್ಲಿ ರಾಜಕೀಯ ಪಕ್ಷಗಳ ಜವಾಬ್ದಾರಿಯೂ ಇದೆ.
● ರಮೇಶಕುಮಾರ್, ಸ್ಪೀಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.