Exam ಕಾಮೆಡ್-ಕೆ ಪರೀಕ್ಷೆಗೆ ಶೇ.88 ಹಾಜರಿ: ಇಬ್ಬರು ಅಮಾನತು
Team Udayavani, May 12, 2024, 11:19 PM IST
ಬೆಂಗಳೂರು: ರಾಜ್ಯದ 24 ನಗರಗಳು ಸೇರಿ ದೇಶದ 191 ನಗರಗಳಲ್ಲಿ ರವಿವಾರ ರಾಜ್ಯದ 72 ಮತ್ತು ದೇಶದ 264 ಕೇಂದ್ರಗಳಲ್ಲಿ ಮೂರು ಅವಧಿಯಲ್ಲಿ ಕಾಮೆಡ್-ಕೆ ಪರೀಕ್ಷೆ ನಡೆಯಿತು.
ನೋಂದಣಿ ಮಾಡಿಕೊಂಡಿದ್ದ 1.18 ಲಕ್ಷ ವಿದ್ಯಾರ್ಥಿಗಳ ಪೈಕಿ 1,03,799 (ಶೇ.87.96) ಮಂದಿ ಪರೀಕ್ಷೆ ಹಾಜರಾದರು. ಬೆಂಗಳೂರಿನಲ್ಲಿ ನೋಂದಣಿ ಮಾಡಿಕೊಂಡಿದ್ದ 19,676 ಮತ್ತು ರಾಜ್ಯದ 38,475ರಲ್ಲಿ 35,124 ಮಂದಿ ಹಾಜರಾಗಿದ್ದರು.
ಪರೀಕ್ಷೆ ಬಹುತೇಕ ಶಾಂತಿಯುತವಾಗಿ ಯಶಸ್ವಿಯಾಗಿ ನಡೆದಿದೆ. ಕೆಲವೆಡೆ ಸಣ್ಣಪುಟ್ಟ ಅಡೆತಡೆ, ಗೊಂದಲಗಳು ನಡೆದಿವೆ. ಬೆಂಗಳೂರು ಮತ್ತು ತಮಿಳುನಾಡಿನ ಕೇಂದ್ರ ವೊಂದರಲ್ಲಿ ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಫೋನ್ ಬಳಸಿದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳ ಮೊಬೈಲ್ ವಶಪಡಿಸಿಕೊಂಡು ಅವರನ್ನು ಪರೀಕ್ಷಾ ಕೇಂದ್ರದಿಂದ ಹೊರಕಳುಹಿಸಲಾಗಿದೆ. ಅವರನ್ನು ಪರೀಕ್ಷೆ ಬರೆಯುವುದರಿಂದ ಅಮಾನತು ಮಾಡಲಾಗಿದೆ.
ಅನಾರೋಗ್ಯ ಕಾರಣದಿಂದ ತಡವಾಗಿ ಆಗಮಿಸಿದ್ದ ನಾಲ್ವರಿಗೆ ಪ್ರವೇಶ ನೀಡಲಾಗಿದೆ. ಬೆಂಗಳೂರಿನ ಪೀಣ್ಯದ 2 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯಗೊಂಡಿದ್ದ ಪರೀಕ್ಷೆ ಬರೆಯಲು ಹೆಚ್ಚು ಸಮಯ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.