ವಸತಿಹೀನರಿಗೆ 96 ಎಕರೆ ಭೂಮಿ
Team Udayavani, Oct 23, 2019, 3:00 AM IST
ಬೆಂಗಳೂರು: “ಎಲ್ಲರಿಗೂ ಸೂರು’ ಯೋಜನೆಯಡಿ ವಸತಿಹೀನರಿಗೆ ಸೂರು ಕಲ್ಪಿಸಲು ಚಿಕ್ಕಬಳ್ಳಾಪುರದಲ್ಲಿ 96 ಎಕರೆ ಭೂಮಿಯನ್ನು ಕಂದಾಯ ಇಲಾಖೆ ಯಿಂದ ವಸತಿ ಇಲಾಖೆಗೆ ಹಸ್ತಾಂತರಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಮಂಗಳವಾರ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಅವರು, ಚಿಕ್ಕಬಳ್ಳಾಪುರ ತಾಲೂಕಿನ ಮರಳುಕುಂಟೆ ಗ್ರಾಮದಲ್ಲಿ 61 ಎಕರೆ, ಆವಲಹಳ್ಳಿಯಲ್ಲಿ 10 ಎಕರೆ, ಚಿಕ್ಕತಿಮ್ಮನಹಳ್ಳಿಯಲ್ಲಿ 25 ಎಕರೆ ಸೇರಿ ಒಟ್ಟು 96 ಎಕರೆ ಕಂದಾಯ ಇಲಾಖೆಯ ಭೂಮಿಯನ್ನು ವಸತಿಹೀನರಿಗೆ ಮನೆ ನಿರ್ಮಿಸಿಕೊಡಲು ವಸತಿ ಇಲಾಖೆಗೆ ಹಸ್ತಾಂತರಿಸಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ಸಾಲಕ್ಕೆ ಸರ್ಕಾರಿ ಖಾತರಿ ನೀಡಲು ಸಂಪುಟ ಒಪ್ಪಿಗೆ
* ಕೃಷಿ ಇಲಾಖೆಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟದ ವತಿಯಿಂದ ಪ್ರಸಕ್ತ ಸಾಲಿಗೆ ರಸಗೊ ಬ್ಬರ ಖರೀದಿ ಮತ್ತು ದಾಸ್ತಾನಿಗಾಗಿ 400 ಕೋಟಿ ರೂ.ಸಾಲ ತೆಗೆದುಕೊಳ್ಳಲು ಸರ್ಕಾರದ ಖಾತರಿ ನೀಡಲು ಒಪ್ಪಿಗೆ ನೀಡಲಾಗಿದೆ.
* ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 15 ಕೋಟಿ ರೂ.ಸಾಲ ಪಡೆಯಲು ಸರ್ಕಾರದ ಖಾತರಿಗೆ ಒಪ್ಪಿಗೆ.
* ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಷೇರು ಬಂಡವಾಳ ಪ್ರಮಾಣವನ್ನು 500 ಕೋಟಿ ರೂ.ನಿಂದ 550 ಕೋಟಿ ರೂ.ಗೆ ಹೆಚ್ಚಿಸಿಕೊಳ್ಳಲು ಅನುಮೋದನೆ.
* ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್‌ಎಲ್) ಐಇಬಿಆರ್ ಅಡಿ 1,000 ಕೋಟಿ ರೂ.ಸಾಲ ಪಡೆಯಲು ಸರ್ಕಾರ ಖಾತರಿ ಕೊಡಲು ಅನುಮೋದನೆ.
ಇತರ ಪ್ರಮುಖ ನಿರ್ಣಯಗಳು
* ನಗರ ಪ್ರದೇಶಗಳಲ್ಲಿನ 1,000 ಅಂಗನವಾಡಿಗಳನ್ನು 10 ಕೋಟಿ ರೂ.ವೆಚ್ಚದಲ್ಲಿ ದುರಸ್ತಿಪಡಿಸಲು ಅನುಮೋದನೆ.
* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಶಾಲೆ ಹಾಗೂ ಆಶ್ರಮ ಶಾಲೆಗಳ ಮಕ್ಕಳಿಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ವತಿಯಿಂದ 18.62 ಕೋಟಿ ರೂ.ವೆಚ್ಚದಲ್ಲಿ ನಿರ್ಮಲ ಹಾಗೂ ಸಿರಿಗಂಧ ಕಿಟ್ ವಿತರಣೆಗೆ ಒಪ್ಪಿಗೆ.
* “ರಾಷ್ಟ್ರೀಯ ಆರೋಗ್ಯ ಮಿಷನ್’ನ ತಾಯಿ ಆರೋಗ್ಯ ಕಾರ್ಯಕ್ರಮದಡಿ ಕಬ್ಬಿಣಾಂಶ, ಫೋಲಿಕ್ ಆ್ಯಸಿಡ್ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ದಾಸ್ತಾನು ಸೊಸೈಟಿಯಿಂದ 14.38 ಕೋಟಿ ರೂ.ವೆಚ್ಚದಲ್ಲಿ ಖರೀದಿಗೆ ಒಪ್ಪಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.