ಕಹಿ ಅನುಭವ, ಕರಾಳ ನೆನಪುಗಳೊಂದಿಗೆ ಮುಗಿದ ಕಲಾಪ


Team Udayavani, Jul 22, 2023, 7:21 AM IST

vidhana soudha

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ “ತಾಳ್ಮೆ”ಯೇ ಅತಿ ಮುಖ್ಯ ಅಸ್ತ್ರ. ತಾಳ್ಮೆ ಕಳೆದುಕೊಂಡರೆ ಅಥವಾ ಆತುರದ ನಿರ್ಣಯ ಕೈಗೊಂಡರೆ ಏನೆಲ್ಲ ಎಡವಟ್ಟುಗಳು ಆಗುತ್ತವೆ ಎಂಬುದಕ್ಕೆ ಈಗಿನ ವಿಧಾನಮಂಡಲದ ಕಲಾಪದ ಕಾರ್ಯವೈಖರಿಯೇ ನಿದರ್ಶನ.

ಈ ವಿಧಾನಸಭೆಯ ಮೊದಲ ಅಧಿ ವೇಶನದ ಮುಂದುವರಿದ ಉಪ ಅಧಿವೇಶನವು ಹಲವು ಅನಿರೀ ಕ್ಷಿತ ಘಟನಾವಳಿಗಳು, ಕಹಿ ಅನು ಭವಗಳು, ಕರಾಳ ನೆನಪುಗಳೊಂದಿಗೆ ಶುಕ್ರವಾರ ಅಂತ್ಯಗೊಂಡಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಸ್ಪೀಕರ್‌ ಯು.ಟಿ. ಖಾದರ್‌ ಅವರಿಗೆ ಈ ಅಧಿವೇಶನ ಸಾಕಷ್ಟು ಮುಜುಗರ ತಂದಿದ್ದರಿಂದ ಬಹಳ ನೋವಿನಿಂದಲೇ ಸದನದಿಂದ ಹೊರಗೆ ಹೆಜ್ಜೆ ಹಾಕಿದರು.

ವಿಧಾನಸಭೆ ಚುನಾವಣೆ ಮುಗಿಸಿ ಸರಕಾರಗಳು ಅದಲು-ಬದಲು ಆದಾಗ ಹೊಸ ಸರಕಾರ ಹಾಗೂ ಹೊಸ ವಿಪಕ್ಷಗಳ ಮೇಲೆ ಜನ ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಹೊಸ ಸರಕಾರ ಅಸ್ತಿತ್ವಕ್ಕೆ ಬಂದಾಗ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ಬದಲಾವಣೆ ಎರಡನ್ನೂ ಕಾಣಲು ಬಯಸುತ್ತಾರೆ. ವಿಶೇಷವಾಗಿ ಸುಗಮವಾಗಿ ಕಲಾಪ ನಡೆಸಿ ವಿಪಕ್ಷಗಳ ಟೀಕೆಗಳಿಗೆ ಉತ್ತರ ಕೊಡುವ ಹೊಣೆಗಾರಿಕೆ ಸರಕಾರದ ಮೇಲಿದ್ದರೆ, ಸರಕಾರದ ಲೋಪ ಗಳನ್ನು ಗುರುತಿಸಿ ಎಚ್ಚರಿಸುವಂತಹ ಮಹತ್ವದ ಜವಾಬ್ದಾರಿಯೂ ವಿಪಕ್ಷಗಳ ಮೇಲಿರುತ್ತದೆ.

ಆದರೆ ಇಲ್ಲಿ ಒಂದು ಸಣ್ಣ ವಿಷಯ ಮುಂದಿಟ್ಟು ಕೊಂಡು ದೊಡ್ಡ ರಾದ್ಧಾಂತ ಮಾಡಿದ್ದು ಸರಿಯಲ್ಲ. ಜಿದ್ದಾಜಿದ್ದಿಗೆ ಬಿದ್ದವರಂತೆ ಪರಸ್ಪರ ಟೀಕೆ, ಆರೋಪ – ಪ್ರತ್ಯಾರೋಪಗಳಲ್ಲಿ ಮುಳುಗಿದರು. ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಗಣ್ಯರಿಗೆ ರಾಜಾತಿಥ್ಯ ಹಾಗೂ ಅತಿಥಿಗಳಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಸ್ಪೀಕರ್‌ ಖಾದರ್‌ ಭಾಗಿಯಾಗಿದ್ದರಿಂದ ಕೆರಳಿದ ವಿಪಕ್ಷಗಳು ನಡೆಸಿದ ಧರಣಿ ಇಡೀ 3 ದಿನಗಳ ಕಾಲ ಉಭಯ ಸದನಗಳ ಕಲಾಪವನ್ನು ನುಂಗಿ ಹಾಕಿತು.

ಅನಂತರ ಕೆಲವು ಅನಿರೀಕ್ಷಿತ ಘಟನೆಗಳು ನಡೆದವು. ಇದು ಮೊದಲ ಅಧಿವೇಶನ ಹಾಗೂ 70ಕ್ಕೂ ಹೆಚ್ಚು ಹೊಸ ಶಾಸಕರಿದ್ದರಿಂದ ಈ ಅಧಿವೇಶನ ಹೊಸಬರಿಗೆ ಹೊಸ ಸಂದೇಶ ನೀಡಲಿದೆ ಎಂಬ ನಿರೀಕ್ಷೆಗಳಿದ್ದವು. ಆದರೆ, ಆಗಿದ್ದು ಮಾತ್ರ ತಿರುವುಮುರುವು. ಸ್ಪೀಕರ್‌ ಪೀಠದಲ್ಲಿದ್ದ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರನ್ನೇ ಗುರಿಯಾಗಿಟ್ಟುಕೊಂಡು ಮಸೂದೆಗಳ ಪ್ರತಿಗಳನ್ನು ಹರಿದು ಮುಖಕ್ಕೆ ಎಸೆದರೆಂಬ ಆರೋಪದ ಮೇಲೆ ನಾಲ್ವರು ಮಾಜಿ ಸಚಿವರು ಸೇರಿ 10 ಮಂದಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸುವಂತಹ ಹಂತಕ್ಕೂ ಹೋಯಿತು. ಸ್ಪೀಕರ್‌ ನಡೆ ಹಾಗೂ ಸರಕಾರದ ಧೋರಣೆ ವಿರುದ್ಧ ವಿಪಕ್ಷಗಳಿಂದ ಕಲಾಪ ಬಹಿಷ್ಕಾರ, ಗಾಂಧೀಜಿ ಪ್ರತಿಮೆ ಬಳಿ ಬಿಜೆಪಿ ಧರಣಿ, ರಾಜ್ಯಪಾಲರಿಗೆ ಜಂಟಿ ದೂರು ಸಲ್ಲಿಸಿ ಸರಕಾರ ಹಾಗೂ ಸ್ಪೀಕರ್‌ ವಿರುದ್ಧ ಹರಿಹಾಯ್ದವು.

ವಿಪಕ್ಷಗಳ ಅನುಪಸ್ಥಿತಿಯಲ್ಲೇ ಮಸೂದೆ ಮಂಡನೆ
ಸದನದಲ್ಲಿ ಕೂರಬೇಕಾದ ವಿಪಕ್ಷಗಳು ಬೀದಿಗೆ ಬಂದವು. ವಿಪಕ್ಷಗಳ ಅನುಪಸ್ಥಿತಿಯಲ್ಲೇ ಹಲವು ಮಹತ್ವದ ಮಸೂದೆಗಳು ಅನುಮೋದನೆ ಪಡೆ ದವು. ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ಮೇಲಿನ ಚರ್ಚೆಗೆ ವಿಪಕ್ಷಗಳಿಲ್ಲದೆ ಕೇವಲ ಆಡಳಿತ ಪಕ್ಷದ ಸಾಲಿಗೆ ಸೀಮಿತವಾಗಿ ಉತ್ತರ ಕೊಡಬೇಕಾಯಿತು. ವಿಪಕ್ಷವಿಲ್ಲದೆ ಕಲಾಪ ನಡೆದ ನಿದರ್ಶನವಿಲ್ಲ. ಆ ರೀತಿಯ ಘಟನೆಗೂ ಈ ಬಾರಿಯ ಕಲಾಪ ವಿಧಾನಮಂಡಲದ ಇತಿಹಾಸ ಪುಟ ಸೇರಿತು. ಸ್ವತಃ ಸಿಎಂ ಅವರೇ ಉತ್ತರ ಕೊಡುವಾಗ ವಿಪಕ್ಷಗಳಿಲ್ಲದೆ ಸದನ ನಡೆದಿರಲಿಲ್ಲ, ಇದು ಬಹಳ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದು, ಆಗ ಬಾರದ ಘಟನೆ ಆಗಿ ಹೋಗಿದೆ ಎಂಬುದು ಅವರ ಮಾತುಗಳಿಂದಲೇ ವ್ಯಕ್ತವಾದಂತಿತ್ತು.

ಪ್ರತಿಭಟನೆಗೂ ಮಿತಿ ಇರಬೇಕು
ಬಿಜೆಪಿ ಸದಸ್ಯರ ವರ್ತನೆ ತುಸು ಅತಿರೇಕವೆಂದೇ ಹೇಳಬಹುದು.ಪ್ರತಿಭಟನೆಗೂ ಒಂದು ಇತಿಮಿತಿ ಇರುತ್ತದೆ. ಸದನದ ಒಳಗೆ ಹೇಗೆ ನಡೆದು
ಕೊಳ್ಳಬೇಕು ಎಂಬುದರ ಬಗ್ಗೆ ಸ್ವತಃ ಸ್ಪೀಕರ್‌ ಖಾದರ್‌ ಅವರೇ ಮೂರು ದಿನಗಳ ಕಾಲ ತರಬೇತಿ ಕೊಡಿಸಿದ್ದರು. ಆದರೆ ಒಳಗಡೆ ಆಗಿದ್ದು ವ್ಯತಿರಿಕ್ತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ, ಧರಣಿಗೆ ಎಲ್ಲವುಗಳಿಗೂ ಅವಕಾಶವಿದೆ. ಆದರೆ ಅದು ಮಿತಿ ಮೀರಬಾರದು. ಪೀಠಕ್ಕೆ ಅಗೌರವ ತರಬಾರದು. ಈ ವರ್ತನೆ ಸಹಿಸುವುದಂತೂ ಆಗಿರಲಿಲ್ಲ, ಸಮರ್ಥನೀಯವೂ ಆಗಿರಲಿಲ್ಲ. ಹೊಸಬರಿಗೆ ಮಾದರಿಯಾಗಬೇಕಾದ ಹಿರಿಯ ಅನುಭವಿಗಳೇ ಪ್ರತಿಗಳನ್ನು ಹರಿಯುವುದರಲ್ಲಿ ಮುಂಚೂಣಿಯಲ್ಲಿ ಇದ್ದುದು ಕಿರಿಯರಿಗೆ ಪ್ರೇರಣೆಯಾಯಿತು. ಪರಿಣಾಮ ಅಮಾನತು ಶಿಕ್ಷೆ ಅನುಭವಿಸಬೇಕಾಯಿತು.

ಸಹನೆಯೂ ಅಷ್ಟೇ ಮುಖ್ಯ
ಸ್ಪೀಕರ್‌ ಸ್ಥಾನದಲ್ಲಿ ಕುಳಿತವರಿಗೆ ತಾಳ್ಮೆ ಅತ್ಯಂತ ಮುಖ್ಯ. ಆಡಳಿತ ಪಕ್ಷ ಮತ್ತು ವಿಪಕ್ಷಗಳನ್ನು ಸಮಾನಾಗಿ ಕಾಣಬೇಕು. ವಿಪಕ್ಷಗಳ ಕಡೆಗೆ ತುಸು ಹೆಚ್ಚು ವಾಲಿರಬೇಕು. ಗದ್ದಲ-ಕೋಲಾಹಲದ ಸಂದರ್ಭದಲ್ಲಿ ಕೆಲಕಾಲ ಸದನ ಮುಂದೂಡಿ ಬಳಿಕ ಸಭಾಧ್ಯಕ್ಷರ ಕೊಠಡಿಯಲ್ಲಿ ಸಂಧಾನ ನಡೆಸಿ ಪುನಃ ಸದನ ಸೇರಿ ಸುಗಮವಾಗಿ ನಡೆದ ಉದಾಹರಣೆಗಳಿವೆ. ಆದರೆ ಈ ಘಟನೆಯಲ್ಲಿ ಅಂತಹ ಪ್ರಯತ್ನಗಳು ಆಗಲಿಲ್ಲ. ಬಹುಶಃ ಸ್ಪೀಕರ್‌ ಅವರು ಅಮಾನತು ಶಿಕ್ಷೆ ಪ್ರಕಟಿಸುವ ಮುನ್ನ ಕೆಲ ಕಾಲ ಸದನ ಮುಂದೂಡಿದ್ದರೆ ಏನೂ ಆಗುತ್ತಿರಲಿಲ್ಲ, ಇದೊಂದು ಆತುರದ ನಿರ್ಧಾರವಾಯಿತೆಂಬ ಅಭಿಪ್ರಾಯ ಮೂಡಿದೆ.

ವಿಪಕ್ಷಗಳಿಗೆ ಸಿಕ್ಕಿತು ಹೋರಾಟದ ಅಸ್ತ್ರ
ಮೈತ್ರಿ ಸುದ್ದಿ ಹೊರಗಡೆ ಹರಿದಾಡುತ್ತಿರುವುದರ ನಡುವೆಯೇ ಈ ಘಟನೆಯಿಂದ ಬಿಜೆಪಿ-ಜೆಡಿಎಸ್‌ ಪಕ್ಷಗಳು ಮತ್ತಷ್ಟು ಹತ್ತಿರವಾದವು. ಕಾಂಗ್ರೆಸ್‌ ಸರ ಕಾರದ ವಿರುದ್ಧ ಹೋರಾಡಲು ಸಿಕ್ಕ ಅಸ್ತ್ರ ವನ್ನು ಪ್ರಬಲವಾಗಿ ಬಳಸಿಕೊಂಡವು ಎಂದೇ ಹೇಳ ಬಹುದು. ಆದರೆ ಅಧಿವೇಶನ ನಡೆಯುವುದೇ ಅಪ ರೂಪ. ವಿಪಕ್ಷಗಳ ಬೇಡಿಕೆ ಮೇರೆಗೆ ಒಂದು ವಾರ ಕಾಲ ಅಧಿವೇಶನ ವಿಸ್ತರಿಸಲಾಗಿತ್ತು. ಈ ಅವಕಾಶ ವನ್ನು ಬಳಸಿಕೊಳ್ಳಲು ವಿಪಕ್ಷಗಳು ವಿಫ‌ಲವಾದವು.

ವಿಪಕ್ಷ ನಾಯಕನಿಲ್ಲದ ಅಧಿವೇಶನ
ಈ ಅಧಿವೇಶನದ ಹಲವು ದಾಖಲೆಗಳಲ್ಲಿ ವಿಪಕ್ಷದ ನಾಯಕನಿಲ್ಲದೆ ಅಧಿವೇಶನ ಮುಗಿದದ್ದು ಒಂದು ದಾಖಲೆ. ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಗಳನ್ನು ಗೆದ್ದಿದ್ದು ಸಹಜವಾಗಿಯೇ ಅದಕ್ಕೆ ವಿಪಕ್ಷದ ನಾಯಕನ ಸ್ಥಾನ ಸಿಗುತ್ತದೆ. ಆದರೆ ಆ ಪಕ್ಷದ ವರಿಷ್ಠರಿಗೆ ರಾಜ್ಯ ಬಿಜೆಪಿ ನಾಯಕರ ಮೇಲೆ ಇನ್ನೂ ಸಿಟ್ಟು ಕಡಿಮೆಯಾದಂತೆ ಕಾಣುತ್ತಿಲ್ಲ. ಸೋಲಿನಿಂದ ಆಘಾತಕ್ಕೊಳಗಾಗಿರುವ ಬಿಜೆಪಿ ವರಿಷ್ಠರು ವಿಪಕ್ಷ ನಾಯಕನ ಆಯ್ಕೆ ಮಾಡದೆ ಮುಜುಗರ ಉಂಟು ಮಾಡಿದರು. ಇದನ್ನು ಹಲವು ಸಲ ಪ್ರಸ್ತಾಪಿಸಿದ ಆಡಳಿತ ಪಕ್ಷ ಲೇವಡಿ ಮಾಡಿದ್ದು ಉಂಟು. ಆದರೆ ಈ ಅವಕಾಶ ಬಳಸಿಕೊಂಡ ಜೆಡಿಎಸ್‌ನ ಎಚ್‌.ಡಿ. ಕುಮಾರಸ್ವಾಮಿ ನಿಜವಾದ ವಿಪಕ್ಷದ ನಾಯಕನಂತೆ ಸರಕಾರಕ್ಕೆ ವರ್ಗಾವಣೆ ದಂಧೆ ಬಿಸಿ ಮುಟ್ಟಿಸಿದರು.

ವಿಪಕ್ಷಗಳ ಗೈರು ಹಾಜರಿಯಲ್ಲೇ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಹರಿಹಾಯ್ದರು. ತಮ್ಮ ಗ್ಯಾರಂಟಿ ಯೋಜನೆಗಳನ್ನು ಬಲವಾಗಿ ಸಮರ್ಥಿಸಿಕೊಂಡರು. ಸದನದಲ್ಲಿ ರಾಜಕೀಯ ಭಾಷಣದ ಮೂಲಕ ಎದುರಾಳಿಗಳಿಗೆ ತಕ್ಕ ಸಂದೇಶ ಕೂಡ ಕೊಟ್ಟರು. ಅಂತಿಮವಾಗಿ ಸರಕಾರಕ್ಕೆ ಏನು ಆಗಬೇಕೋ ಅದು ಆಯಿತು, ಅದೇ ರೀತಿ ವಿಪಕ್ಷಗಳಿಗೆ ಏನು ಆಗಬೇಕಿತ್ತೋ ಅದೇ ಆಯಿತು. ಇಬ್ಬರು ಗೆದ್ದ ಹುಮ್ಮಸ್ಸಿನಲ್ಲಿ ಇರಬಹುದು, ಸೋತಿದ್ದು ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ.

 ಎಂ.ಎನ್‌. ಗುರುಮೂರ್ತಿ

ಟಾಪ್ ನ್ಯೂಸ್

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

Karnataka Govt.,: ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Gold-saffron

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.