“ಒಂದು ದೇಶ, ಒಂದು ಪರೀಕ್ಷೆ’ಯಿಂದ ಸ್ಥಳೀಯರಿಗೆ ಅನ್ಯಾಯ?

ಕೇಂದ್ರದಿಂದಲೇ ಎಲ್ಲವನ್ನೂ ನಿರ್ವಹಿಸುವ ವ್ಯವಸ್ಥೆ ಮಾರಕವಾಗಲಿದೆ: ತಜ್ಞರ ಅಭಿಮತ

Team Udayavani, Apr 16, 2022, 6:50 AM IST

“ಒಂದು ದೇಶ, ಒಂದು ಪರೀಕ್ಷೆ’ಯಿಂದ ಸ್ಥಳೀಯರಿಗೆ ಅನ್ಯಾಯ?

ಬೆಂಗಳೂರು: ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗ (ಯುಜಿಸಿ) ಆರಂಭಿಸಲು ಹೊರಟಿರುವ ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ)ಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದು ಮಾತ್ರವಲ್ಲ, ಸ್ಥಳೀಯ ಶಿಕ್ಷಣ ಸಂಸ್ಥೆಗಳ ಸಂಪನ್ಮೂಲ ಬೇರೊಬ್ಬರಿಗೆ ನೀಡಿದಂತಾಗುತ್ತದೆಯೇ?

ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಲ್ಲಿರುವ ಹೊಸ ಚಿಂತನೆಗಳಿಗೆ ವೇದಿಕೆ ಕಲ್ಪಿಸುತ್ತಿವೆ. ಸ್ಟಾರ್ಟ್‌ ಅಪ್‌ ಆರಂಭಿಸಲು ಬೇಕಾಗುವ ಅವಶ್ಯ ಅನುದಾನ ಮತ್ತು ಇನ್ನಿತರ ಸಹಾಯ ಗಳನ್ನು ಮಾಡಿಕೊಡುತ್ತಿವೆ. ಈ ಎಲ್ಲಾ ಕಾರಣಗಳಿಂದ ವಿದ್ಯಾರ್ಥಿಗಳ ಮೊದಲ ಆಯ್ಕೆ ಬೆಂಗ ಳೂರು ಇರಲಿದೆ ಎಂಬುದರಲ್ಲಿ ಅನುಮಾನವಿಲ್ಲ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಹಲ ವಾರು ರೀತಿಯಲ್ಲಿ ಸಮಸ್ಯೆ ಯಾಗಲಿದೆ ಎಂದು ತಜ್ಞರು ಹೇಳುತ್ತಾರೆ.

ಭಾರತವು ಪ್ರತಿ ಕ್ಷೇತ್ರದಲ್ಲಿಯೂ ಪ್ರಾದೇಶಿಕವಾಗಿ ವೈವಿಧ್ಯತೆ ಹೊಂದಿದೆ. ಇದನ್ನು ಕೇಂದ್ರೀಕರಣ ಮಾಡುವುದು ಸರಿಯಲ್ಲ. “ಒಂದು ದೇಶ, ಒಂದು ಪರೀಕ್ಷೆ’ಯಿಂದ ಸ್ಥಳೀಯರಿಗೆ ಹಾಗೂ ಅವಕಾಶ ವಂಚಿತ ಸಮುದಾಯಗಳು ಮತ್ತಷ್ಟು ಅವಕಾಶ ವಂಚಿತರಾಗಲಿದ್ದಾರೆ ಎನ್ನುತ್ತಾರೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಎಸ್‌. ಜಾಫೆಟ್‌.

ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ: ಕೇಂದ್ರ ಸರಕಾರವು ರಾಜ್ಯಗಳಿಗೂ ಅಧಿಕಾರ ನೀಡಬೇಕು. ಕೇಂದ್ರದಿಂದಲೇ ಎಲ್ಲವನ್ನೂ ನಿರ್ವಹಿಸುವ ವ್ಯವಸ್ಥೆ ಮಾರಕವಾಗಲಿದೆ. ಉದಾಹರಣೆಗೆ: ನ್ಯಾಷನಲ್‌ ಲಾ ಸ್ಕೂಲ್‌ಗ‌ಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಕಾನಚೂನು ಪ್ರವೇಶ ಪರೀಕ್ಷೆ (ಕ್ಲಾಟ್‌) ಪರೀಕ್ಷೆಯಲ್ಲಿ ಕಳೆದ 25 ವರ್ಷಗಳಲ್ಲಿ ಕನ್ನಡಿಗರ ಆಯ್ಕೆ ಬೆರಳೆಣಿಕೆಯಷ್ಟಿದೆ. ಹೀಗಾಗಿ ಕನ್ನಡಿಗರಿಗೆ ಶೇ.25ರಷ್ಟು ಮೀಸ ಲಾತಿ ನೀಡುವ ಕಾನೂನು ತರ ಲಾಯಿತು. ಇದ ರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿತು. ಇದು ಕೇವಲ ಒಂದು ಪರೀಕ್ಷೆಗೆ ಸೀಮಿತ ವಾಗಿ ಲ್ಲ. ಪ್ರಾಧ್ಯಾ ಪಕರ ನೇಮಕಾತಿಗೆ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌), ಬ್ಯಾಂಕಿಂಗ್‌, ರೈಲ್ವೆ ನೇಮಕಾತಿ ಪರೀಕ್ಷೆ ಸೇರಿದಂತೆ ಸಾರ್ವತ್ರಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗಲಿದೆ ಎಂದು ಹೇಳುತ್ತಾರೆ.

ರಾಜ್ಯಮಟ್ಟದಲ್ಲಿ ಪರೀಕ್ಷೆ ನಡೆಯಲಿ: ರಾಷ್ಟ್ರ ಮಟ್ಟ ದ ಬದಲಾಗಿ ರಾಜ್ಯಮಟ್ಟದಲ್ಲಿ ಪರೀಕ್ಷೆ ನಡೆಸು ವುದರಿಂದ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಸೌಲಭ್ಯ ಸಿಗುವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಅನುಕೂಲವಾಗಲಿದೆ. ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆ ನಡೆಸುವುದರಿಂದ ನಮ್ಮ ಸಂಪನ್ಮೂಲವಾಗಿ ಬೇರೆಯವರಿಗೆ ಬಿಟ್ಟುಕೊಟ್ಟು, ರಾಜ್ಯಕ್ಕೆ ಅನ್ಯಾಯ ಮಾಡಿಕೊಂಡಂತೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯಬೇಕಿದೆ. ಅದ ರಲ್ಲಿಯೂ ಫ‌ಲಾನುಭವಿಗಳಾದ ವಿದ್ಯಾರ್ಥಿಗಳು, ಪೋಷಕರು, ಜನಸಾಮಾನ್ಯರು, ಪ್ರಾಧ್ಯಾಪಕರು, ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಮೊದಲು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಸಬೇಕಿದೆ. ದಿಢೀರ್‌ ಏಕಮುಖ ನಿರ್ಧಾರ ಕೈಗೊಳ್ಳುವುದು ಉತ್ತಮ ನಿರ್ಧಾರವಲ್ಲ ಎಂಬುದು ತಜ್ಞರ ಅಭಿಮತ.

ಯಾವುದೇ ವಿಶ್ವವಿದ್ಯಾನಿಲಯವು ತನ್ನ ಸುತ್ತಲಿನ ಪ್ರದೇಶದ ಅಗತ್ಯತೆಗಳಿಗೆ ಇರಬೇಕು. ಒಂದು ವೇಳೆ ಸಾರ್ವತ್ರಿಕರಣ ಗೊಳಿಸಿದರೆ, ಸ್ವಾಯತ್ತತೆ ಹಾಳಾಗುವ ಜತೆಗೆ ತನ್ನದೇ ಅಸ್ಮಿತೆ ಕಳೆದು ಕೊಳ್ಳಲಿದೆ. ಸಾಮಾನ್ಯ ಪ್ರವೇಶ ಪರೀಕ್ಷೆ, ಸಾಮಾನ್ಯ ಪಠ್ಯಕ್ರಮ, ಸಾಮಾನ್ಯ ಬೋಧನಾ ಸಿಬಂದಿ. ಹೀಗೆ ಎಲ್ಲವೂ ಸಾಮಾನ್ಯ ಮಾಡುವುದಾದರೆ, ವಿವಿಗಳು ಏಕೆ ಬೇಕು. ವಿವಿ ಗಳನ್ನು ಉನ್ನತ ಶಿಕ್ಷಣದ ಒಂದು ಭಾಗ ಮಾಡಿಬಿಡಿ ಸಾಕು ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಬೆಂ.ವಿವಿ ವಿಶ್ರಾಂತ ಕುಲಪತಿ ಡಾ| ಎಂ.ಎಸ್‌. ತಿಮ್ಮಪ್ಪ.

ಸ್ಥಳೀಯರಿಗೆ ಕೈತಪ್ಪಲಿಗೆ ಸೀಟುಗಳು
ರಾಷ್ಟ್ರ ಮಟ್ಟದಲ್ಲಿ ಪ್ರವೇಶ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಪ್ಲೇಸ್‌ಮೆಂಟ್‌ ಇರುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಉತ್ತಮ ಪ್ಲೇಸ್‌ಮೆಂಟ್‌ ಇರುವ ಕಾಲೇಜುಗಳು ಹೆಚ್ಚಿನ ಅಂಕ ಪಡೆಯುವವರ ಪಾಲಾಗಲಿವೆ. ವಿಶ್ವವಿದ್ಯಾನಿಲಯದ ಮಟ್ಟದ ಪರೀಕ್ಷೆಗಳನ್ನು ನಡೆಸಿದರೆ, ಸ್ಥಳೀಯ ವಿದ್ಯಾರ್ಥಿಗಳು ಮಾತ್ರ ಸ್ಪರ್ಧಿಸುತ್ತಾರೆ. ಸಿಯುಇಟಿ ಆರಂಭವಾದರೆ, ದೇಶಾದ್ಯಂತ ವಿದ್ಯಾರ್ಥಿಗಳು ಒಂದೇ ವೇದಿಕೆಗೆ ಬರಲಿದ್ದಾರೆ. ಇದರಿಂದ ಉನ್ನತ ಶಿಕ್ಷಣದಲ್ಲಿ ಸಂಸ್ಥೆಗಳಲ್ಲಿ ಮೂಲಸೌಕರ್ಯ ಮತ್ತು ಗುಣಮಟ್ಟದ ವ್ಯಾಸಂಗ ಇರದ ರಾಜ್ಯದ ವಿದ್ಯಾರ್ಥಿಗಳು ಬೆಂಗಳೂರಿನತ್ತ ವಲಸೆ ಬರುತ್ತಾರೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಲಿದ್ದಾರೆ ಎಂದು ತಜ್ಞರು ಹೇಳುತ್ತಾರೆ.

-ಎನ್‌.ಎಲ್‌.ಶಿವಮಾದು

ಟಾಪ್ ನ್ಯೂಸ್

BSN-Gowda-yatnal

ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್‌

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…

Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…

7

Udupi ನಗರಸಭೆಗೆ ಸರಕಾರದಿಂದ 5 ಸದಸ್ಯರ ನಾಮ ನಿರ್ದೇಶನ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Court Verdict: ಕೊಲ್ಕತ್ತಾ ಅತ್ಯಾಚಾರ ಪ್ರಕರಣ: ಆರೋಪಿ ಸಂಜಯ್ ರಾಯ್ ದೋಷಿ, ಕೋರ್ಟ್ ತೀರ್ಪು

Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ

12-metro

Metro: ನಾಡಿದ್ದಿನಿಂದ ಮೆಟ್ರೋ ಪ್ರಯಾಣ ದರ ಏರಿಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BSN-Gowda-yatnal

ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್‌

Raichur: ಕಾಂಗ್ರೆಸ್ ಸರ್ಕಾರ ಮುಸ್ಲಿಮರ ನಿಯಂತ್ರಣದಲ್ಲಿದೆ: ಚಕ್ರವರ್ತಿ ಸೂಲಿಬೆಲೆ ಕಿಡಿ

Raichur: ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ… ಚಕ್ರವರ್ತಿ ಸೂಲಿಬೆಲೆ

MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜಕೀಯ ಪಿತೂರಿ: ಡಿಕೆಶಿ

MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದ ರಾಜಕೀಯ ಪಿತೂರಿ: ಡಿಕೆಶಿ

Hubballi: ED ಬಿಜೆಪಿಯ ಅಂಗ ಸಂಸ್ಥೆಯೇ… ಸಚಿವ ಎಚ್.ಕೆ.ಪಾಟೀಲ್ ಗರಂ

Hubballi: ED ಬಿಜೆಪಿಯ ಅಂಗ ಸಂಸ್ಥೆಯೇ…? ಸಚಿವ ಎಚ್.ಕೆ.ಪಾಟೀಲ್ ಗರಂ

Republic Day: ಗಣರಾಜ್ಯೋತ್ಸವ ಪರೇಡ್ ಗೆ ಚಾಮರಾಜನಗರದ ಕೃಷಿಕ ದಂಪತಿ

Republic Day Parade: ಗಣರಾಜ್ಯೋತ್ಸವ ಪರೇಡ್ ಗೆ ಚಾಮರಾಜನಗರದ ಕೃಷಿಕ ದಂಪತಿ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

BSN-Gowda-yatnal

ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್‌

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

20

Ban: ಏರ್‌ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್‌ ಬಳಕೆ ನಿಷೇಧ: ಪಾಲಿಕೆ ಆದೇಶ

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

19-

EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್‌ 1 ಸ್ಥಾನ ಪಡೆದ ಕರ್ನಾಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.