Insurance ಹಣಕ್ಕೆ ಅಮಾಯಕನ ಹತ್ಯೆಗೈದು ತಾನೇ ಸತ್ತಂತೆ ಬಿಂಬಿಸಿದ ವ್ಯಕ್ತಿ ಬಂಧನ
ತನ್ನನ್ನೇ ಹೋಲುವ ವ್ಯಕ್ತಿಯನ್ನು ಕರೆದೊಯ್ದು ಲಾರಿ ಹತ್ತಿಸಿ ಕೊಲೆ ,ಅಂತ್ಯಸಂಸ್ಕಾರ ಮಾಡಿ ನಾಟಕವಾಡಿದ್ದ ಪತ್ನಿ ನಾಪತ್ತೆ!
Team Udayavani, Aug 25, 2024, 6:20 AM IST
ಹಾಸನ: ಜೀವವಿಮೆಯ ಕೋಟಿಗಟ್ಟಲೆ ರೂ. ಪಡೆಯಲು ಅಮಾಯಕನೊಬ್ಬನ ಮೇಲೆ ಲಾರಿ ಹರಿಸಿ ಕೊಲೆ ಮಾಡಿ ತಾನೇ ಸತ್ತಿರುವುದು ಎಂಬಂತೆ ಕತೆ ಕಟ್ಟಿದ್ದ ಟಯರ್ ವ್ಯಾಪಾರಿ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಅರಸೀಕೆರೆ ತಾಲೂಕು ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಅಮಾಯಕನ ಮೇಲೆ ಲಾರಿ ಹರಿಸಿ ಕೊಲೆ ಮಾಡಿಸಿದ್ದ ಆರೋಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಮುನಿಸ್ವಾಮಿಗೌಡ (49) ಮತ್ತು ಲಾರಿ ಹರಿಸಿದ ಚಾಲಕ ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿ ಹೋಬಳಿಯ ಕರಕುಚ್ಚಿಯ ದೇವೇಂದ್ರ ನಾಯಕ (38)ನನ್ನು ಗಂಡಸಿ ಪೊಲೀಸರು ಬಂಧಿಸಿದ್ದಾರೆ. ಲಾರಿ ಹರಿದು ಸತ್ತವನು ತನ್ನ ಗಂಡನೇ ಎಂದು ಪೊಲೀಸರ ಬಳಿ ನಾಟಕವಾಡಿದ ಮುನಿಸ್ವಾಮಿ ಗೌಡನ ಪತ್ನಿ ಶಿಲ್ಪಾರಾಣಿ ತಲೆಮರೆಸಿಕೊಂಡಿದ್ದಾಳೆ.
ಗಂಡಸಿ ಠಾಣೆ ವ್ಯಾಪ್ತಿಯ ಗೊಲ್ಲರಹಳ್ಳಿ ಗೇಟ್ ಬಳಿ ಆ. 13ರಂದು ರಾತ್ರಿ ಪಂಕ್ಚರ್ ಆಗಿ ನಿಂತಿದ್ದ ಕಾರಿನ ಬಳಿ ಲಾರಿ ಹರಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಟಯರ್ ಬದಲಿಸುವ ವೇಳೆ ಲಾರಿ ಢಿಕ್ಕಿ ಹೊಡೆದು ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ತನಿಖೆ ಮುಂದುವರಿಸಿದಾಗ ನಿಜ ವಿಚಾರ ಬಹಿರಂಗಗೊಂಡಿದೆ.
ತನ್ನನ್ನೇ ಹೋಲುವ ಅಮಾಯಕ
ಎಂಆರ್‌ಎಫ್ ಟಯರ್ ವ್ಯಾಪಾರ ಮಾಡಿಕೊಂಡಿದ್ದ ಮುನಿಸ್ವಾಮಿ ಸಾಲದಿಂದಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ. ಆತ ಡಬಲ್ ಆಕ್ಸಿಡೆಂಟ್ ಬೆನಿಫಿಟ್(ಡಿಎಬಿ) ಜೀವ ವಿಮೆ ಸೇರಿ ಹಲವು ವಿಮಾ ಪಾಲಿಸಿ ಮಾಡಿಸಿದ್ದ. ತನ್ನನ್ನೇ ಹೋಲುವ ಅಮಾಯಕ ವ್ಯಕ್ತಿಯೊಬ್ಬನನ್ನು ಗುರುತಿಸಿ ಆತನೊಂದಿಗೆ ವಿಶ್ವಾಸ ಬೆಳೆಸಿ ಆ. 10 ರಂದು ಹೊಸಕೋಟೆಯಿಂದ ಕಾರಿನಲ್ಲಿ ಕರೆದುಕೊಂಡು ಮಂಗಳೂರಿಗೆ ಹೋಗಿ ಅಲ್ಲಿಂದ ಬಂದು ಗಂಡಸಿ ಸಮೀಪ ಮೊದಲೇ ಯೋಜಿಸಿದಂತೆ ದೇವೇಂದ್ರ ನಾಯಕ್ ಲಾರಿ ತಂದು ಅಪರಿಚಿತನ ಮೇಲೆ ಹರಿಸಿದ್ದ.
ಆನಂತರ ಮುನಿಸ್ವಾಮಿಯ ಪತ್ನಿ ಗಂಡಸಿ ಠಾಣೆಗೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ತನ್ನ ಗಂಡನೇ ಎಂದು ಹೇಳಿದ್ದಳು. ಶವವನ್ನು ತೆಗೆದು ಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿ ನಾಟಕವಾಡಿದ್ದಳು.ಲಾರಿ ಹರಿಸಿ ಕೊಲೆಯಾದ ಅಮಾಯಕ ಭಿಕ್ಷುಕ ನಿರಬಹುದು ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.