ಒಂದು ದೇಶ ಒಂದು ನಕ್ಷೆ!
Team Udayavani, Sep 17, 2019, 3:06 AM IST
ಬೆಂಗಳೂರು: ಇಡೀ ದೇಶದ ಭೌಗೋಳಿಕ ಪ್ರದೇಶವನ್ನು ಕೇವಲ 10 ಸೆಂ.ಮೀ. ರೆಸಲ್ಯೂಷನ್‌ನಲ್ಲಿ ಡಿಜಿಟಲ್ ನಕ್ಷೆಗೆ ಪರಿವರ್ತಿಸುವ ಕಾರ್ಯಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಈ ಮಹತ್ವಾಕಾಂಕ್ಷಿ ಯೋಜನೆಯ ಪ್ರಯೋಗಕ್ಕೆ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿದೆ.
ಯೋಜನೆಯನ್ನು ಪ್ರಾಯೋಗಿಕವಾಗಿ ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಹಾಗೂ ಗಂಗಾ ನದಿಪಾತ್ರದಲ್ಲಿ ಕೈಗೆತ್ತಿಕೊ ಳ್ಳಲಾಗಿದೆ. ಇಲ್ಲೆಲ್ಲಾ ಉನ್ನತ ಗುಣಮಟ್ಟದ ಸೆನ್ಸರ್‌ಗಳನ್ನು ಅಳವಡಿಸಿದ ಡ್ರೋಣ್‌ಗಳನ್ನು ಬಳಸಿ ಚಿತ್ರಗಳನ್ನು ಸೆರೆಹಿಡಿಯುವ ಕಾರ್ಯ ನಡೆದಿದ್ದು, ನಂತರದಲ್ಲಿ ಅವುಗಳನ್ನು ಆಧರಿಸಿ ವೈಜ್ಞಾನಿಕ ನಕ್ಷೆ ರೂಪಿಸಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ.ಅಶುತೋಶ್ ಶರ್ಮ ತಿಳಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯಲ್ಲಿ ಹಮ್ಮಿಕೊಂಡಿದ್ದ ಅಂತರ ಶಾಸ್ತ್ರೀಯ ಶಕ್ತಿ ಸಂಶೋಧನಾ ಕೇಂದ್ರ ಸಮರ್ಪಣೆ ಹಾಗೂ ನ್ಯಾಷನಲ್ ಸೆಂಟರ್ ಫಾರ್ ಕ್ಲೀನ್ ಕೋಲ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಬಿಗ್ ಡಾಟಾದಂತಹ ಮುಂದುವರಿದ ತಂತ್ರಜ್ಞಾನ ಗಳನ್ನು ಬಳಸಿಕೊಂಡು ಈ ಯೋಜನೆ ಕೈಗೆತ್ತಿ ಕೊಳ್ಳಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಸಮೀಕ್ಷೆ ಕಾರ್ಯ ಆರಂಭಗೊಂಡಿದ್ದು, 2 ವರ್ಷಗಳಲ್ಲಿ ಒಟ್ಟಾರೆ ಸರ್ವೇ ಪೂರ್ಣ ಗೊಳ್ಳಲಿದೆ. ಭಾರತೀಯ ಸರ್ವೇಕ್ಷಣಾಲ ಯಕ್ಕೆ ಇದರ ಸಂಪೂರ್ಣ ಜವಾಬ್ದಾರಿ ವಹಿಸ ಲಾಗಿದೆ. ಅದಕ್ಕೆ ಇನ್ನಿತರ ಆಸಕ್ತ ಸಂಸ್ಥೆಗಳು ಕೈಜೋಡಿಸಲಿವೆ ಎಂದು ಹೇಳಿದರು.
ಗೂಗಲ್ ಮತ್ತಿತರ ಮ್ಯಾಪಿಂಗ್‌ಗೂ ಇದಕ್ಕೂ ತುಂಬಾ ವ್ಯತ್ಯಾಸ ಇದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಪ್ರೊ. ಅಶುತೋಶ್, ಪ್ರಸ್ತುತ ಲಭ್ಯವಿರುವ ನಕ್ಷೆಗಳು ಹಲವು ಮೀಟರ್‌ಗಳಷ್ಟು ರೆಸ ಲ್ಯೂಷನ್ ಹೊಂದಿವೆ. ನಾವು ಕೈಗೆತ್ತಿಕೊಂಡಿರುವ ಡಿಜಿಟಲ್ ಮ್ಯಾಪಿಂಗ್ ವೈಜ್ಞಾನಿಕ ವಾಗಿರಲಿದ್ದು, ಕೇವಲ 10 ಸೆಂ.ಮೀ. ಅಂತರದ ರೆಸಲ್ಯೂಷನ್ ಇರಲಿದೆ. ಹಾಗಾಗಿ, ಇಲ್ಲಿ ನಿಖರತೆ ಹೆಚ್ಚು ಎಂದು ಸ್ಪಷ್ಟಪಡಿಸಿದರು.
ಯೋಜನೆಗಳಿಗೆ ಬುನಾದಿ: ಕೆರೆ- ಕುಂಟೆಗಳು, ರಸ್ತೆಗಳು, ರೈಲು ಮಾರ್ಗ ಗಳು, ಗ್ರಾಮ, ನಗರ, ರಾಜ್ಯಗಳ ಸರಹದ್ದು ಸೇರಿದಂತೆ ಪ್ರತಿಯೊಂದರ ಮಾಹಿತಿ ಲಭ್ಯವಾಗಲಿದೆ. ಈಗಾಗಲೇ ಅರಣ್ಯ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಸ್ಥಳೀಯವಾಗಿ ಹಲವು ಸಮೀಕ್ಷೆಗಳ ನಕ್ಷೆಗಳು ಇವೆ. ಅವೆಲ್ಲವುಗಳನ್ನು ಈ ನಕ್ಷೆಯಡಿ ತರಲಾಗುವುದು. ಮುಂದಿನ ದಿನಗಳಲ್ಲಿ ಈ ನಕ್ಷೆಯಿಂದ ಸರ್ಕಾರದ ಯಾವುದೇ ಯೋಜನೆಗಳನ್ನು ರೂಪಿಸಲು ಸಾಕಷ್ಟು ಅನುಕೂಲ ಆಗಲಿದೆ ಎಂದು ವಿವರಿಸಿದರು.
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಗೂ ಈ ಕಾರ್ಯಕ್ರಮದ ಭಾಗವಾಗಿಲ್ಲ. ಅದು ಸ್ಯಾಟಲೈಟ್‌ಗಳಿಂದ ಚಿತ್ರಗಳನ್ನು ಸೆರೆಹಿಡಿದು ಕಳುಹಿಸುತ್ತದೆ. ಆದರೆ, ಈ ಡಿಜಿಟಲ್ ಮ್ಯಾಪಿಂಗ್‌ನಲ್ಲಿ ಡ್ರೋಣ್‌ಗಳು ಚಿತ್ರಗಳನ್ನು ಸೆರೆಹಿಡಿಯಲಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.