ಪಿಎಫ್ಐ, ಸಿಎಫ್ಐ ಕರಾಳ ಮುಖ ಬಯಲು
ಮುಸ್ಲಿಂ ಸಮುದಾಯದ ಯುವಕರ ಬ್ರೈನ್‌ವಾಶ್ ಪ್ರಚೋದನೆ ಪೋಸ್ಟ್
Team Udayavani, Oct 4, 2022, 7:00 AM IST
ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಾಗೂ ಅದರ ಅಂಗ ಸಂಸ್ಥೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮತ್ತೂಂದು ಕರಾಳ ಮುಖವನ್ನು ರಾಜ್ಯ ಪೊಲೀಸರು ಬಯಲಿಗೆಳೆದಿದ್ದಾರೆ.
ಸಮುದಾಯದ ಯುವಕರನ್ನು ಸಂಘಟನೆ ಹಾಗೂ ಉಗ್ರ ಕೃತ್ಯಗಳ ಕಡೆ ಸೆಳೆಯಲು ಬಳಸುತ್ತಿದ್ದ ಪ್ರಮುಖವಾದ ಪೋಸ್ಟರ್ ಸಿಕ್ಕಿರುವುದು ಅವುಗಳ ಉಗ್ರ ಕೃತ್ಯಕ್ಕೆ ಸಾಕ್ಷಿಯಾಗಿದೆ.
ಇತ್ತೀಚೆಗೆ ರಾಜ್ಯ ಪೊಲೀಸರು ಪಿಎಫ್ಐ ಸಂಘಟನೆಗಳ ಕಚೇರಿ ಮತ್ತು ಅದರ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ ದಾಗ ಕೆಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದವು. ತಮ್ಮ ಸಮು ದಾಯದ ಯುವಕರನ್ನು ಸಂಘಟನೆ ಹೆಸರಿನಲ್ಲಿ ಉಗ್ರ ಕೃತ್ಯಗಳಿಗೆ ಪ್ರಚೋದಿಸಲು “ಜಿನೋಸೈಡ್’ (ನರಮೇಧ) ಎಂಬ ಪೋಸ್ಟರ್ ಸಿದ್ದಪಡಿಸಿದ್ದರು. ಅದರಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನರಮೇಧದಂಥ ಕೃತ್ಯಗಳು ನಡೆ ಯುತ್ತಿವೆ.
ಬಲಪಂಥೀಯ ಹಿಂದುತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರವನ್ನು ಹಿಡಿದ ಅನಂತರ ಅಲ್ಪಸಂಖ್ಯಾಕರ, ವಿಶೇಷವಾಗಿ ಮುಸ್ಲಿಮರ ವಿರುದ್ಧದ ಹಿಂಸಾಚಾರ ದಿನೇ ದಿನೇ ಹೆಚ್ಚಾಗುತ್ತಿದೆ. ಸಮು ದಾಯಗಳ ಮಧ್ಯೆ ದ್ವೇಷ ಉಂಟು ಮಾಡಲು ಸುಳ್ಳುಗಳನ್ನು ಹೇಳು ತ್ತಿದ್ದಾರೆ. ದೇಶ ಅಥವಾ ರಾಜ್ಯದಲ್ಲಿ ಕೋಮುಗಲಭೆ, ಹತ್ಯೆ ನಡೆ ದಾಗ ಸಮುದಾಯದ ಮೇಲೆ ಪೊಲೀಸರಿಂದ ಗುಂಡಿನ ದಾಳಿ ನಡೆ ಯುತ್ತದೆ. ಅಮಾಯಕರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಇದು ಸಂಘಟಿತ ಮತ್ತು ವ್ಯವಸ್ಥಿತ ಜಾಲದ ಪಿತೂರಿ. ಇದೊಂದು ನರಮೇಧ ಕೃತ್ಯ ಎಂದು ಪೋಸ್ಟರ್‌ನಲ್ಲಿ ಚಿತ್ರಿಸಲಾಗಿದೆ.
ಪೋಸ್ಟರ್‌ನ ಮತ್ತೊಂದು ಭಾಗದಲ್ಲಿ ಹತ್ಯೆಗೀಡಾದ ಮತ್ತು ನಾಪತ್ತೆಯಾದ ಅಥವಾ ಅಪರಾಧ ಕೃತ್ಯ ಎಸಗಿ ಜೈಲು ಸೇರಿದ ಸಮುದಾಯದ ವ್ಯಕ್ತಿಗಳ ಭಾವಚಿತ್ರ ಹೋಲುವ ಫೋಟೋಗಳನ್ನು ಹಾಕಿ, ಮಹಿಳೆಯೊಬ್ಬರು ತಮ್ಮ ಮಗಳಿಗೆ ಆ ಫೋಟೋ ತೋರಿಸುತ್ತಿದ್ದಾರೆ. ಈ ಮೂಲಕ ಹಿಂದೂ ಸಮುದಾಯದ ವಿರುದ್ಧ ದ್ವೇಷವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸೃಷ್ಟಿಸುತ್ತಿತ್ತು ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಕರಾವಳಿ ಭಾಗದ ಕಲ್ಯಾಣ ಮಂಟಪವೊಂದರಲ್ಲಿ ಪಿಎಫ್ಐ ಸಂಘಟನೆ ಮುಖಂಡರು ತಮ್ಮ ಸಮುದಾಯದ ಯುವಕರಿಗೆ ಹಿಂದೂಗಳ ಹತ್ಯೆಗೆ ಮೌಖೀಕ ತರಬೇತಿ ನೀಡುತ್ತಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಜತೆಗೆ ಕೇರಳದ ವಯನಾಡು, ಕಣ್ಣೂರು ಹಾಗೂ ತಮಿಳುನಾಡಿನ ಸತ್ಯಮಂಗಲಂ ಕಾಡಿನಲ್ಲಿ ಶಸ್ತ್ರಾಸ್ತ್ರಗಳ ತರಬೇತಿ ನೀಡುತ್ತಿದ್ದರು ಎಂಬುದೂ ಬೆಳಕಿಗೆ ಬಂದಿದೆ. ಜಿನೋಸೈಡ್ ಪೋಸ್ಟರ್ ಸೇರಿ ಆರೋಪಿಗಳ ಬಳಿಯಿದ್ದ ಎಲ್ಲ ದಾಖಲೆಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.