ಖಾಸಗಿ ಆಸ್ಪತ್ರೆ ಎಂದರೆ ಜನ ಸ್ವರ್ಗದಂತೆ ಆಡ್ತಾರೆ
Team Udayavani, Jun 10, 2017, 11:08 AM IST
ವಿಧಾನಸಭೆ: ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತರೆ ನರಕಕ್ಕೆ ಹೋಗ್ತಾರೆ… ಖಾಸಗಿ ಆಸ್ಪತ್ರೆಯಲ್ಲಿ ಸತ್ತರೆ ಮಾತ್ರ ನೇರವಾಗಿ ಸ್ವರ್ಗಕ್ಕೆ ಹೋಗ್ತಾರೆ… ಸರ್ಕಾರಿ ಶಾಲೇಲಿ ಓದಿದ್ರೆ ಜಾಣರಾಗಲ್ಲ… ಖಾಸಗಿ ಶಾಲೇಲಿ ಇಂಗ್ಲಿಷ್ ಕಲಿಸ್ತಾರೆ… ಹೀಗೆ ಆರೋಗ್ಯ ಸಚಿವ ರಮೇಶಕುಮಾರ್ ತಮ್ಮದೇ ಶೈಲಿಯಲ್ಲಿ ಖಾಸಗಿ ಆಸ್ಪತ್ರೆ ಹಾಗೂ ಶಾಲೆ ಮೇಲೆ ಜನರು ಹೊಂದಿರುವ ಒಲವಿನ ಕುರಿತು ವ್ಯಾಖ್ಯಾನ ಮಾಡಿದ್ದಾರೆ. ಶುಕ್ರವಾರ ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ
ಚರ್ಚೆ ವೇಳೆ, ಬಿಜೆಪಿ ಸದಸ್ಯ ನಾರಾಯಣಸ್ವಾಮಿ, ಬೆಂಗಳೂರು ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಐಸಿಯು ಎಷ್ಟಿವೆ ಎಂದು ಪ್ರಶ್ನಿಸಿದರು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಶೇ.50ರಷ್ಟು ಮಾತ್ರ ಬೆಡ್‌ಗಳು ತುಂಬಿರುತ್ತವೆ ಎಂದು ಹೇಳಿದರು.
ಮಾ.ಹಿರಣ್ಣಯ್ಯ ಪರಿಣಾಮ: ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ರಮೇಶಕುಮಾರ್, ನಾಟಕಕಾರ ಮಾಸ್ಟರ್ ಹಿರಣ್ಣಯ್ಯ, ಸರ್ಕಾರಿ ಆಸ್ಪತ್ರೆಯಲ್ಲಿ ಒನ್‌ವೇ ಎಂದು ಫಲಕ ಇರುತ್ತೆ. ಹೀಗಾಗಿ ಅಲ್ಲಿಗೆ ಹೋಗಬೇಡಿ. ಒಳಗೆ ಹೋದರೆ ಹೊರಗೆ ಬರಲು ದಾರಿಯಿಲ್ಲ. ಅಲ್ಲಿಯೇ ಸತ್ತು ಬಿಡುತ್ತಾರೆ ಎಂದು ವ್ಯಂಗ್ಯವಾಡುತ್ತಿದ್ದರು. ಜನರಲ್ಲಿ ಕೂಡ ಸರ್ಕಾರಿ
ಆಸ್ಪತ್ರೆಗಳಿಗಿಂತಲೂ ಖಾಸಗಿ ಆಸ್ಪತ್ರೆಗಳೇ ಉತ್ತಮ ಎನ್ನುವ ಭಾವನೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸತ್ತರೆ ನರಕಕ್ಕೆ ಹೋಗುತ್ತೇವೆ ಎನ್ನುವ ಭಾವ ಬಂದಂತಿದೆ. ಅದೇ ವೇಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಸತ್ತರೆ ನೇರ ಯಾವುದೇ ವೀಸಾ ಇಲ್ಲದೇ ಸ್ವರ್ಗಕ್ಕೆ ಹೋಗುತ್ತೇವೆ ಎಂಬಂತೆ ಜನ ಆಡುತ್ತಿದ್ದಾರೆ. ಆರೋಗ್ಯ ಮಾತ್ರವಲ್ಲ, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಖಾಸಗಿ ಸಂಸ್ಥೆಗಳವರು ಬಲಾಡ್ಯರಾಗುತ್ತಿದ್ದಾರೆ. ವ್ಯಾಪಾರಿಗಳು ಜನಪ್ರತಿನಿಧಿಗಳಾಗುತ್ತಿದ್ದು, ಜನಪ್ರತಿನಿಧಿಗಳು ವ್ಯಾಪಾರಿಗಳಾಗುತ್ತಿದ್ದಾರೆಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Mangaluru: ಪಾಲಿಕೆ ಕಚೇರಿ ಪಕ್ಕದಲ್ಲೇ ಫುಟ್‌ಪಾತ್ ಅವ್ಯವಸ್ಥೆ
Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.