ಹವ್ಯಕ ಮಹಾಸಭಾದ ನೂತನ ಪದಾಧಿಕಾರಿಗಳ ಆಯ್ಕೆ
Team Udayavani, Dec 16, 2019, 3:04 AM IST
ಬೆಂಗಳೂರು: ಶ್ರೀ ಅಖೀಲ ಹವ್ಯಕ ಮಹಾಸಭೆಗೆ ಅಧ್ಯಕ್ಷರಾಗಿ ಡಾ. ಗಿರಿಧರ ಕಜೆಯವರು 5ನೇ ಬಾರಿಗೆ ಸರ್ವಾನು ಮತದಿಂದ ಪುನರಾಯ್ಕೆಯಾದರು. ಮಲ್ಲೇಶ್ವರದ ಹವ್ಯಕ ಭವನದಲ್ಲಿ ಭಾನುವಾರ ನಡೆದ 76ನೇ ವರ್ಷದ ಸರ್ವಸದಸ್ಯರ ಸಭೆಯಲ್ಲಿ ಉತ್ತರ ಕನ್ನಡ, ಬೆಂಗಳೂರು, ಶಿವಮೊಗ್ಗ, ಕೊಡಗು, ಕಾಸರಗೋಡು ವ್ಯಾಪ್ತಿಯ 15 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು.
ಆದರೆ, ಎಲ್ಲ 15 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹವ್ಯಕ ಸಮಾಜದ ಸಂಘಟನೆಯ ಒಗ್ಗಟ್ಟು ಪ್ರದರ್ಶಿತ ವಾಯಿತು. ಚುನಾವಣಾಧಿ ಕಾರಿ ರಾಮಭಟ್ ಅವಿರೋಧ ಆಯ್ಕೆಯನ್ನು ಹಾಗೂ ನೂತನ ನಿರ್ದೇಶಕರನ್ನು ಉದ್ಘೋಷಿಸಿದರು.
ಡಾ.ಗಿರಿಧರ ಕಜೆ ಮಾತನಾಡಿ, ಮಹಾಸಭೆಯ ಕಾರ್ಯಕ್ರಮಗಳಿಗೆ ಸಮಾಜದಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಕಳೆದ ವರ್ಷಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿ ಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದೆ. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಬಲ ತುಂಬಲು 25 ವಿವಿಧ ಹವ್ಯಕ ವೇದಿಕೆಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಗಾಯತ್ರೀ ಮಹೋತ್ಸವ: ಹವ್ಯಕ ಮಹಾಸಭೆಯಿಂದ ಗಾಯತ್ರಿ ಮಂತ್ರದ ಮಹತ್ವವನ್ನು ತಿಳಿಸುವ ಸಲುವಾಗಿ ಈ ವರ್ಷ ಗಾಯತ್ರಿ ಮಹೋತ್ಸವ ಆಚರಿ ಸಲು ನಿರ್ಧರಿಸಲಾಗಿದೆ ಎಂದರು.
ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ 5ನೇ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಧರ ಜೆ.ಭಟ್ ಹಾಗೂ ಆರ್. ಎಂ.ಹೆಗಡೆ, ಪ್ರಧಾನ ಕಾರ್ಯದರ್ಶಿಯಾಗಿ ವೇಣು ವಿಘ್ನೇಶ ಸಂಪ, ಕಾರ್ಯದರ್ಶಿಗಳಾಗಿ ಪ್ರಶಾಂತ ಕುಮಾರ ಭಟ್ ಯಲ್ಲಾಪುರ ಹಾಗೂ ಶ್ರೀಧರ ಭಟ್ ಸಾಲೇಕೊಪ್ಪ, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್.ಭಟ್ ಆಯ್ಕೆಯಾದರು.
ನೂತನ ನಿರ್ದೇಶಕರು: ಉತ್ತರ ಕನ್ನಡ – ರಾಮಚಂದ್ರ ಗಣೇಶ ಹೆಗಡೆ, ರಾಮಚಂದ್ರ ಎಂ.ಹೆಗಡೆ, ಹಂಡ್ರಮನೆ ಗೋಪಾಲಕೃಷ್ಣ ಭಟ್. ಬೆಂಗಳೂರು – ಶ್ರೀಧರ ಭಟ್ ಕೆಕ್ಕಾರು, ಡಾ.ಗಿರಿಧರ ಕಜೆ, ಯು.ಎಸ್.ಜಿ.ಭಟ್, ಮೋಹನ ಭಾಸ್ಕರ ಹೆಗಡೆ, ನಾರಾಯಣ ಭಟ್ ಹುಳೇಗಾರು, ರಮಾನಾಥ ಹೆಗಡೆ. ಶಿವಮೊಗ್ಗ – ಬಾಲಸುಬ್ರಮಣ್ಯ ಕೆ., ಅಶೋಕ ಎಚ್.ಬಿ, ರಾಜಲಕ್ಷ್ಮೀ ದೇವಪ್ಪ. ಕೊಡಗು – ಪುರುಷೋತ್ತಮ ಡಿ.ಐ. ಕಾಸರಗೋಡು – ಗೋವಿಂದ ಭಟ್. ಹೊರರಾಜ್ಯ – ರಮಣ ಎಸ್. ಭಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಬಿಜೆಪಿ ಅಧಿಕಾರದಲ್ಲಿದ್ದಾಗ ಕತ್ತೆ ಕಾಯಿತಿದ್ದರಾ?: ಪ್ರಿಯಾಂಕ್ ಖರ್ಗೆ
Bellary; ಲೂಟಿ ಮಾಡಿದ ರೆಡ್ಡಿಯನ್ನು ಯಾಕೆ ಪಕ್ಷಕ್ಕೆ ಸೇರಿಸಿದಿರಿ: ಮೋದಿಗೆ ಸಿಎಂ ಪ್ರಶ್ನೆ
Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.