![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 28, 2019, 6:35 AM IST
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮಂಜೂರಾದ ಉಪನ್ಯಾಸಕರ ಹುದ್ದೆಗಳ ಪೈಕಿ ಶೇ.65ರಷ್ಟು ಖಾಲಿಯಿದ್ದು, ಬೋಧಕರ ಕೊರತೆಯಿಂದ ಗುಣಮಟ್ಟದ ಶಿಕ್ಷಣ ನೀಡುವುದು ಕಷ್ಟವಾಗಿದೆ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ತಿಳಿಸಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಞಾನ ಭಾರತಿ ಕ್ಯಾಂಪನ್‌ನಲ್ಲಿರುವ ಪ್ರದರ್ಶನ ಕಲೆ, ವಿದೇಶಿ ಭಾಷಾ ಕೇಂದ್ರ, ತತ್ವಶಾಸ್ತ್ರ ಸೇರಿದಂತೆ ಕೆಲವು ಕೋರ್ಸ್‌ಗಳಿಗೆ ವಿಭಾಗಗಳಲ್ಲಿ ಒಬ್ಬರು ಮಾತ್ರ ಪ್ರಾಧ್ಯಾಪಕರಿದ್ದು, ಅತಿಥಿ ಉಪನ್ಯಾಸಕರಿಂದ ಕೋರ್ಸ್ ನಡೆಸಲಾಗುತ್ತಿದೆ ಎಂದರು.
ಜೀವ ವಿಜ್ಞಾನಕ್ಕೆ ಪೂರ್ಣಕಾಲಿಕ ಪ್ರಾಧ್ಯಾಪಕರೇ ಇಲ್ಲವಾಗಿದ್ದು, ತತ್ವಶಾಸ್ತ್ರ ವಿಭಾಗಕ್ಕಿರುವ ಒಬ್ಬರು ಪ್ರಾಧ್ಯಾಪಕರು ಶೀಘ್ರದಲ್ಲಿಯೇ ನಿವೃತ್ತಿ ಹೊಂದಲಿದ್ದಾರೆ. ಇದರಿಂದಾಗಿ ಶೈಕ್ಷಣಿಕ ಗುಣಮಟ್ಟ ಕುಸಿಯುವ ಆತಂಕ ಮೂಡಿದ್ದು, ಈಗಾಗಲೇ ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ ಎಂದು ಹೇಳಿದರು.
ಪುಟ್ಟಸ್ವಾಮಿ ಪ್ರಕರಣ ರಾಜ್ಯಪಾಲರ ಅಂಕಿತಕ್ಕೆ: ಬೆಂಗಳೂರು ವಿವಿಯ ಕಾರ್ಯಪಾಲಕ ಇಂಜಿನಿಯರ್ ಎನ್.ಪುಟ್ಟಸ್ವಾಮಿ ಅಮಾನತು ಪ್ರಕರಣದ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದ್ದು, ರಾಜ್ಯಪಾಲರೇ ನಿರ್ಣಯ ಕೈಗೊಳ್ಳಲಿದ್ದಾರೆ. ಅಮಾನತು ಮಾಡುವ ಅಧಿಕಾರ ತಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ವೇಣುಗೋಪಾಲ್ ಸ್ಪಷ್ಟಪಡಿಸಿದರು.
ಹಿಂದೆ ಕೋಲಾರದ ಅಕ್ರಮದ ಬಗ್ಗೆ ನಿವೃತ್ತ ನ್ಯಾ.ಶಿವಶಂಕರ್ ಭಟ್ ಅವರು ನೀಡಿರುವ ವರದಿಯು ಪುಟ್ಟಸ್ವಾಮಿ ಅವರ ಪರವಾಗಿದ್ದು, ಈ ವರದಿಯನ್ನು ರಾಜ್ಯಪಾಲರಿಗೆ ಕಳುಹಿಸಲು ಸಿಂಡಿಕೇಟ್ ಸಭೆ ನಿರ್ಧರಿಸಿದೆ. ರಾಜ್ಯಪಾಲರೇ ನೇಮಕ ಮಾಡಿದ ಸಮಿತಿಯಲ್ಲಿ ಯಾವುದೇ ಲೋಪದೋಷಗಳು ಕಂಡುಬಾರದೆ ಇರುವ ಕಾರಣ, ಮುಂದಿನ ಆದೇಶಕ್ಕಾಗಿ ರಾಜ್ಯಪಾಲರ ಗಮನಕ್ಕೆ ತರಲಾಗಿದೆ ಎಂದು ಮಾಹಿತಿ ನೀಡಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.