ಸದನದಲ್ಲಿ ಸಚಿವರ ಮಹಾಪೂರ: ಕಾಲೆಳೆದ ಪ್ರತಾಪಸಿಂಹ ನಾಯಕ್
Team Udayavani, Feb 23, 2024, 11:02 PM IST
ಬೆಂಗಳೂರು: ಯಾವಾಗಲೂ ಸಚಿವರ ಬರ ಇರುತಿತ್ತು. ಆದರೆ ಇಂದು ಸಚಿವರ ಮಹಾಪೂರವೇ ಇದೆ ಹೀಗೆಂದು ಬಿಜೆಪಿಯ ಪ್ರತಾಪಸಿಂಹ ನಾಯಕ್ ಸರಕಾರದ ಕಾಲೆಳೆದರು.
ಪ್ರಶ್ನೋತ್ತರ ಕಲಾಪದಲ್ಲಿ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ತಮ್ಮ ಪ್ರಶ್ನೆ ಕೇಳಲು ಎದ್ದು ನಿಂತ ಪ್ರತಾಪಸಿಂಹ ನಾಯಕ್, ಈ ಸದನದಲ್ಲಿ ಯಾವಾಗಲೂ ಸಚಿವರ ಬರ ಇರುತ್ತಿತ್ತು. ಆದರೆ ಇವತ್ತು ಸಚಿವರ ಮಹಾಪೂರವೇ ಇದೆ. ಪ್ರಶ್ನೆ ಕೇಳಲು ಬಹಳ ಸಂತೋಷ ಆಗುತ್ತಿದೆ ಎಂದರು.
ಅದಕ್ಕೆ ಅಲ್ಲಿ ಅಸೆಂಬ್ಲಿ ನಡೆಯುತ್ತಿಲ್ಲ, ಹಾಗಾಗಿ ಎಲ್ಲರೂ ಇಲ್ಲಿಗೆ ಬಂದಿದ್ದಾರೆ ಎಂದು ಕೆಲವು ಸದಸ್ಯರು ಹೇಳಿದರು. ಏಯ್ ಆ ಸಿಕ್ರೇಟ್ ಎಲ್ಲ ಹೇಳಬಾರದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹಾಸ್ಯ ಧಾಟಿಯಲ್ಲಿ ಹೇಳಿ, ಕಲಾಪ ಮುಂದುವರಿಸಿದರು. ಶುಕ್ರವಾರ ಪ್ರಶ್ನೋತ್ತರ ಕಲಾಪದ ವೇಳೆ 11ಕ್ಕೂ ಹೆಚ್ಚು ಸಚಿವರು ಸದನದಲ್ಲಿ ಹಾಜರಿದ್ದರು. ಗುರುವಾರ ಮತ್ತು ಶುಕ್ರವಾರ ಎರಡೂ ದಿನದ ಪ್ರಶ್ನೋತ್ತರ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.