ದಾವಣಗೆರೆ ಎಸಿ, ತಹಶೀಲ್ದಾರ್ ಹತ್ಯೆ ಯತ್ನ
Team Udayavani, Apr 9, 2017, 3:45 AM IST
ದಾವಣಗೆರೆ: ಅಕ್ಕಿ ಗಿರಣಿಯ ಗೋದಾಮಿನಲ್ಲಿದ್ದ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ವಶಕ್ಕೆ ಮುಂದಾದ ದಾವಣಗೆರೆ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಮತ್ತು ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಮಿನಿ ಟ್ರಕ್ ನುಗ್ಗಿಸಿ ಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ದೊಡ್ಡಬಾತಿ ಬಳಿ ನಡೆದಿದೆ.
ಮಧ್ಯಾಹ್ನ 1.30ರ ಸಮಯದಲ್ಲಿ ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ತಹಶೀಲ್ದಾರ್ ಸಂತೋಷಕುಮಾರ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಪಡಿತರ ಧಾನ್ಯ ದಾಸ್ತಾನು ಮಾಡಿದ್ದ ಅಕ್ಕಿ ಗಿರಣಿ ಮೇಲೆ ದಾಳಿ ನಡೆಸಿದರು. ಆಗ ಅಕ್ಕಿ ಗಿರಣಿ ಮಾಲೀಕ ಉಮಾಪತಿ ಗಿರಣಿ ಆವರಣದಲ್ಲಿದ್ದ ಪಡಿತರ ದಾಸ್ತಾನು ತುಂಬಿದ್ದ ಮಿನಿ ಟ್ರಕ್‌ನ ಚಾಲಕನಿಗೆ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮೇಲೆಯೇ ನುಗ್ಗಿಸಲು ಸೂಚಿಸಿದರು. ಅದರಂತೆ ಚಾಲಕ ಹತ್ಯೆಗೆ ಯತ್ನಿಸಿದ್ದು, ವಿಫಲವಾದ ತಕ್ಷಣ ವಾಹನದೊಂದಿಗೆ ಪರಾರಿಯಾಗಿದ್ದಾನೆ.
ಲಂಚ ಆರೋಪ: ಮಾಧ್ಯಮ ಪ್ರತಿನಿಧಿಗಳು ಬಂದಾಗ ವರಸೆ ಬದಲಿಸಿದ ಉಮಾಪತಿ, ಅಧಿಕಾರಿಗಳು ತಮ್ಮ ಬಳಿ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟರು ಎಂದು ಆರೋಪಿಸಿದರು. ತಮ್ಮ ವಾಹನದ ಮುಂದೆ ನಿಂತಿದ್ದ ಉಪವಿಭಾಗಾಧಿಕಾರಿ ಕುಮಾರಸ್ವಾಮಿ ಜೇಬಿಗೆ 50 ಸಾವಿರ ರೂ. ತುರುಕಲು ಸಹ ಉಮಾಪತಿ ಯತ್ನಿಸಿದರು. ಆದರೆ, ಕುಮಾರಸ್ವಾಮಿ ಹಣವನ್ನು ಬಿಸಾಡಿದರು. ಆಗ ಎಲ್ಲಾ ಅಧಿಕಾರಿಗಳು ಮತ್ತು ಮಾಧ್ಯಮದವರೂ ತಮ್ಮ ಬಳಿ ಹಣ ಪಡೆದಿದ್ದಾರೆಂದು ಗೊಣಗುತ್ತಾ ಅಲ್ಲಿಂದ ಕಾಲ್ಕಿತ್ತರು. ಪ್ರಕರಣ ಸಂಬಂಧ ಪ್ರಮುಖ ಆರೋಪಿ ಉಮಾಪತಿಯನ್ನು ಪೊಲೀಸರು
ಬಂಧಿಸಿದ್ದಾರೆ.
ಅನ್ನಭಾಗ್ಯದ ದೂರಿದ್ರೆ ನನಗೇ ಕೊಡಿ
ಅನ್ನಭಾಗ್ಯ ಯೋಜನೆಯಲ್ಲಿ ಲೋಪದೋಷ ಅಥವಾ ದೂರಿದ್ದಲ್ಲಿ ತಮಗೇ ಸಲ್ಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ. ಶನಿವಾರ ಯೋಜನೆಯ ಹೆಚ್ಚುವರಿ ಅಕ್ಕಿ ವಿತರಿಸಿ ಮಾತನಾಡಿ, ಅನ್ನಭಾಗ್ಯ ಯೋಜನೆ ದುರುಪ ಯೋಗವಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕೆಂದು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್
Congress; ಸುರ್ಜೇವಾಲ ವಿರುದ್ಧ ಸಚಿವರಿಂದಲೇ ದೂರು?: ಸತೀಶ್ ಜಾರಕಿಹೊಳಿ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.