ರಾಜ್ಯಾದ್ಯಂತ ಎಸಿಬಿ ದಾಳಿ: 9 ಅಧಿಕಾರಿಗಳಿಂದ ದಾಖಲೆ ವಶ
Team Udayavani, Jul 16, 2021, 6:30 AM IST
ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಕೆ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಅಧಿಕಾರಿಗಳು ಗುರುವಾರ ರಾಜ್ಯದ 9 ಸರಕಾರಿ ಅಧಿಕಾರಿಗಳಿಗೆ ಸೇರಿದ 43 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಪ್ರಧಾನ ಎಂಜಿನಿಯರ್ ಆರ್.ಪಿ.ಕುಲಕರ್ಣಿ ಅವರಿಂದ ಬೆಂಗಳೂರಿನಲ್ಲಿ 1 ವಾಸದ ಮನೆ, 4 ಫ್ಲ್ಯಾಟ್‌ಗಳು, ವಿವಿಧೆಡೆ 3 ನಿವೇಶನಗಳು, 2 ಕಾರು, 1 ದ್ವಿಚಕ್ರ ವಾಹನ, ಆಭರಣ, ನಗದು, ವಿವಿಧ ಬ್ಯಾಂಕ್ ಖಾತೆಗಳ ಠೇವಣಿಗಳು ಇತ್ಯಾದಿಗಳು ಸಿಕ್ಕಿವೆ.
ಕೋರಮಂಗಲದ ಆರ್‌ಟಿಒ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ಎ.ಕೃಷ್ಣಮೂರ್ತಿ ಅವರಿಂದ ಬೆಂಗಳೂರು ನಗರ ಹಾಗೂ ದೊಮ್ಮಲೂರಿನಲ್ಲಿ ಎರಡು ಮನೆ, ಒಂದು ಶಾಲಾ ಕಟ್ಟಡ, ತುಮಕೂರು ಜಿಲ್ಲೆ, ಕೊರಟಗೆರೆಯಲ್ಲಿನ 1 ಫಾರ್ಮ್ ಹೌಸ್, ವಿವಿಧೆಡೆ ಒಟ್ಟು 30 ನಿವೇಶನಗಳು, ಆಭರಣ, 82 ಎಕರೆ ಕೃಷಿ ಜಮೀನು, 4 ದ್ವಿಚಕ್ರ ವಾಹನಗಳು, 3 ಕಾರುಗಳು, 1 ಟೆಂಪೋ ಮ್ಯಾಕ್ಸ್ ಕ್ಯಾಬ್ ಪತ್ತೆಯಾಗಿವೆ.
ಬಸವಕಲ್ಯಾಣದ ಉಪವಿಭಾಗದ ಗ್ರಾಮೀಣ ನೀರು ಸರಬರಾಜು ಅಭಿವೃದ್ಧಿ ವಿಭಾಗ ಕಿರಿಯ ಎಂಜಿನಿಯರ್ ಸುರೇಶ್ ಅವರಿಂದ 1 ಮನೆ, ಭಾಲ್ಕಿಯಲ್ಲಿ 1 ಪೆಟ್ರೋಲ್ ಬಂಕ್, 4 ನಿವೇಶನಗಳು, ನಿರಖು ಠೇವಣಿ ಪತ್ರಗಳು ಪತ್ತೆಯಾಗಿವೆ.
ಮಂಡ್ಯ ಜಿಲ್ಲೆ ಸಾಮಾಜಿಕ ಅರಣ್ಯ, ಅರಣ್ಯ ಉಪ ಸಂರಕ್ಷಣಾಧಿಕಾರಿ ಟಿ.ವೆಂಕಟೇಶ್ ಅವರಿಂದ ಮೈಸೂರಿನಲ್ಲಿರುವ 2 ಮನೆ, 9 ನಿವೇಶನಗಳು, 12 ಎಕರೆ ಕೃಷಿ ಜಮೀನು ಸಿಕ್ಕಿವೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಲೂರು ಟೌನ್ ಪ್ಲ್ರಾನಿಂಗ್ ಅಥಾರಿಟಿ ಸಹಾಯಕ ನಿರ್ದೇಶಕ ಎಚ್. ಆರ್.ಕೃಷ್ಣಮೂರ್ತಿ ಅವರಿಂದ ಒಟ್ಟು 3 ಮನೆಗಳು, ವಿವಿಧ ನಗರಗಳಲ್ಲಿ 4 ನಿವೇಶನಗಳು, ಚನ್ನಗಿರಿಯಲ್ಲಿ 15 ಎಕರೆ 15 ಗುಂಟೆ ಕೃಷಿ ಜಮೀನು ಮುಂತಾದವು ಪತ್ತೆಯಾಗಿವೆ.
ವಿಜಯಪುರ ಕೆಪಿಟಿಸಿಎಲ್‌ನ ಪ್ರಭಾಪಿ ಇ.ಇ.ಸಿದ್ದರಾಮ ಮಲ್ಲಿಕಾರ್ಜುನ ಬಿರಾದರ್ ಅವರಿಂದ 3 ಮನೆಗಳು, 4 ನಿವೇಶನ, 35 ಎಕರೆ ಕೃಷಿ ಜಮೀನು ಮುಂತಾದವು ಸಿಕ್ಕಿವೆ.
ಬಳ್ಳಾರಿ ಜೆಸ್ಕಾಂ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ಎ.ಎನ್. ವಿಜಯ ಕುಮಾರ್ ಅವರಿಂದ 2 ಮನೆಗಳು, 8 ನಿವೇಶನಗಳು, 1 ದ್ವಿಚಕ್ರ ವಾಹನ, 2 ಕಾರುಗಳು, ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಜತೆಗೆ ಕೆಲ ದಾಖಲೆಗಳು ಸಿಕ್ಕಿದೆ.
ಜತೆಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿ ಜಿ.ಶ್ರೀಧರ್ ಹಾಗೂ ಉಡುಪಿಯ ಕೆಆರ್‌ಐಡಿಎಲ್‌ನ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣ ಎಸ್.ಹೆಬ್ಬೂರು ನಿವಾಸದ ಮೇಲೂ ದಾಳಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.