ಸಾವಿನಲ್ಲೂ ಸಾರ್ಥಕತೆ : ನಟ ಸಂಚಾರಿ ವಿಜಯ್ ಅಂಗಾಂಗ ದಾನ ಪ್ರಕ್ರಿಯೆ ಆರಂಭ
Team Udayavani, Jun 14, 2021, 10:28 PM IST
ಬೆಂಗಳೂರು: ರಸ್ತೆ ಅಪಘಾತದಿಂದ ತಲೆಗೆ ತೀವ್ರಪೆಟ್ಟಾಗಿ ನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯ ಎಂದು ವೈದ್ಯರು ಘೋಷಿಸಿದ್ದಾರೆ. ಕುಟುಂಬದ ಅನುಮತಿ ಮೇರೆಗೆ ಅಂಗಾಂಗ ದಾನ ಪಡೆದು ಇತರರಿಗೆ ಕಸಿ ಮಾಡಲಾಗಿದೆ. ಈ ಮೂಲಕ ಸಂಚಾರಿ ವಿಜಯ್ ಸಾವಿನಲ್ಲ ಸಾರ್ಥಕತೆ ಮೆರೆದಿದ್ದಾರೆ.
ಶನಿವಾರ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ಸ್ನೇಹಿರೊಟ್ಟಿಗೆ ತೆರಳುವಾಗ ಅಪಘಾತ ಸಂಭವಿಸಿದ್ದು, ಬನ್ನೇರುಘಟ್ಟ ಅಪೋಲೊ ಆಸ್ಪತ್ರೆ ಶನಿವಾರ ರಾತ್ರಿ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟಾಗಿದ್ದ ಹಿನ್ನೆಲೆ ವೈದ್ಯರು ಭಾನುವಾರ ಶಸ್ತ್ರ ಚಿಕಿತ್ಸೆ ನಡೆಸಿದ್ದರು. ಆನಂತರ ಪ್ರಜ್ಞಾಹೀನ ಸ್ಥಿತಿ (ಕೋಮಾ) ತಲುಪಿದ್ದರು. ವೆಂಟಿಲೇಟರ್ ಸಹಾಯದಿಂದ ಮಾತ್ರ ಉಸಿರಾಟ ನಡೆಸುತ್ತಿದ್ದರು. ಸೋಮವಾರವೂ ಆರೋಗ್ಯ ಚೇತರಿಕೆ ಕಾರಣ ಹಿನ್ನೆಲೆ ವೈದ್ಯರು ಮಧ್ಯಾಹ್ನ ಮತ್ತು ಸಂಜೆ ಎರಡು ಬಾರಿ ಅಧಿಕೃತ ಅಪ್ನಿಯಾ ಪರೀಕ್ಷೆ ನಡೆಸಿ ರಾತ್ರಿ 8.30ಕ್ಕೆ ಮೆದುಳು ನಿಷ್ಕ್ರಿಯಾ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅಪೋಲೊ ಆಸ್ಪತ್ರೆ ನ್ಯೂರೋ ಸರ್ಜನ್ ಡಾ.ಅರುಣ್ ಎಲ್ ನಾಯ್ಕ್, ನಟ ವಿಜಯ್ ಅವರ ಮೆದುಳು ನಿಷ್ಕಿçಯವಾಗಿದೆ. ಆದರೆ, ತೆಲೆ, ಮೆದುಳು ಭಾಗ ಹೊರತು ಪಡಿಸಿ ಉಳಿದ ಅಂಗಾಂಗಳು ಸ್ಥಿರವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು. ಹೀಗಾಗಿ, ಅವರ ಕುಟುಂಬಸ್ಥರ ಬಳಿ ಅಂಗಾಂಗ ದಾನಕ್ಕೆ ಚರ್ಚಿಸಿದೆವು. ಅವರು ಕೂಡಾ ಅನುಮತಿ ನೀಡಿದ್ದರು. ಸೋಮವಾರ ಸಂಜೆಯಿಂದಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಅಂಗಾಂಗ ದಾನ ನೋಂದಣಿ ಅಧಿಕೃತ ಸಂಸ್ಥೆಯಾದ ಜೀವಸಾರ್ಥಕತೆ ಟ್ರಸ್ಟ್ನವರು ಅಂಗಾಂಗ ವೈಫಲ್ಯವಾಗಿ ದಾನ ಅಗತ್ಯವಿರುವವರನ್ನು ಹೊಂದಿಸಲು ಕ್ರಮಕೈಗೊಂಡಿದ್ದಾರೆ.
1 ಲಿವರ್, 2 ಕಿಡ್ನಿ, ಶ್ವಾಸಕೋಶ ಹಾಗೂ ಹೃದಯ ಕವಾಟುಗಳನ್ನು ಅಪೋಲೋ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿದ್ದವರಿಗೆ ಕಸಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ನಾಳೆ ದೇಹ ಹಸ್ತಾಂತರ:
ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೂ ಅಂಗಾಂಗ ದಾನ ಶಸ್ತ್ರ ಚಿಕಿತ್ಸೆ, ಕಸಿ ಪ್ರಕ್ರಿಯೆಗಳು ನಡೆಯಲಿವೆ. ಅಪಘಾತ ಪ್ರಕರಣವಾಗಿರುವುದರಿಂದ ಪೊಲೀಸರ ಪ್ರಕ್ರಿಯೆ ಎಲ್ಲಾ ಮುಗಿದ ಬಳಿಕ ಮಂಗಳವಾರ ಬೆಳಗ್ಗೆ ಕುಟುಂಬ ಸದಸ್ಯರಿಗೆ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಸಂಚಾರಿ ವಿಜಯ್ ಸಹೋದರ ಸಿದ್ದೇಶ್ ಮಾತನಾಡಿ, ಅಣ್ಣ ಮರಳಿ ಬರುವುದಿಲ್ಲ ಎಂಬ ಕಹಿ ಸತ್ಯ ತಿಳಿದು ಅವರ ಅಂಗಾಂಗಗಳನ್ನು ಸಮಾಜಕ್ಕೆ ಅರ್ಪಣೆ ಮಾಡಲು ನಿರ್ಧರಿಸಿದೆವು. ನೆರೆ ಪರಿಹಾರ, ಕೊರೋನಾ ಸಂಕಷ್ಟದ ವೇಳೆಯಲ್ಲಿ ಸಮಾಜಕ್ಕಾಗಿ ಅವರು ಸಾಕಷ್ಟು ದುಡಿದಿದ್ದಾರೆ. ಸತ್ತ ಬಳಿಕವೂ ಅವರು ಸಮಾಜಕ್ಕೆ ನೆರವಾಗಲಿ ಎಂದು ಅವರ ಅಂಗಾಂಗಗಳನ್ನು ದಾನ ಮಾಡಿದ್ದೇವೆ. ಆ ರೀತಿಯಾದರೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದುಃಖಿಸಿದರು.
ಏನಿದು ಆಪ್ನಿಯಾ ಪರೀಕ್ಷೆ:
ಮೆದುಳು ವೈಫಲ್ಯವಾದ ರೋಗಿಗೆ ಅಳವಡಿಸಿರುವ ಕೃತಕವಾಗಿ ಅಳವಡಿಸಿರುವ ಉಸಿರಾಟ ವ್ಯವಸ್ಥೆಯನ್ನು ತೆಗೆಯಲಾಗುತ್ತದೆ. ಆಗ ಸ್ವಾಭಾವಿಕವಾಗಿ ಉಸಿರಾಟ ನಡೆಯದಿದ್ದರೆ ಅಪ್ನಿಯಾ ಪಾಸಿಟಿವ್ ಎಂದು ಪರಿಗಣಿಸಿ ಮೆದುಳು ನಿಷ್ಕ್ರಿಯ ಎಂದು ಘೋಷಿಸಲಾಗುತ್ತದೆ. ಈ ರೀತಿ ಸಂಚಾರಿ ವಿಜಯ್ ಅವರಿಗೆ ಎರಡು ಬಾರಿ ಪರೀಕ್ಷೆ ನಡೆಸಿದ್ದು, ಇದರ ಜತೆಗೆ ಕೆಲವು ಪರೀಕ್ಷೆ ನಡೆಸಿ ಮೆದುಳು ನಿಷ್ಕಿçಯಾ ಎಂದು (ಬ್ರೇನ್ ಡೆತ್)ಘೋಷಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.