ಇಂದು ಚಿತ್ರನಟ “ವಿಷ್ಣುವರ್ಧನ್ ಅಂಚೆ ಲಕೋಟೆ’ ಬಿಡುಗಡೆ
Team Udayavani, Sep 18, 2020, 5:30 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಹಿರಿಯ ಚಿತ್ರ ನಟ ಡಾ| ವಿಷ್ಣುವರ್ಧನ್ ಅವರ 70ನೇ ವರ್ಷದ ಜನ್ಮದಿನಾಚರಣೆ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು “ವಿಶೇಷ ಅಂಚೆ ಲಕೋಟೆ’ಯನ್ನು ಹೊರತಂದಿದ್ದು, ಶುಕ್ರವಾರ ಬಿಡುಗಡೆಗೊಳ್ಳಲಿದೆ.
ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯ ಮೇಘ್ ದೂತ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದಕ್ಷಿಣ ಕರ್ನಾಟಕ ಅಂಚೆ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್.ಮೂರ್ತಿ, ಚಿತ್ರ ನಿರ್ದೇಶಕ ಪ್ರೇಮ್, ಡಾ| ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಬಿಡುಗಡೆಗೊಳಿಸಲಿದ್ದಾರೆ.
ವಿಷ್ಣುವರ್ಧನ್ ಅವರು ಕನ್ನಡ ಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಭಾರತೀಯ ಚಿತ್ರರಂಗದ ಶತಮಾನೋತ್ಸವದ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ 2013ರಲ್ಲಿ ಡಾ| ವಿಷ್ಣುವರ್ಧನ್ ಅವರ “ವಿಶೇಷ ಅಂಚೆ ಚೀಟಿ’ಯನ್ನು ಹೊರತಂದಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.