ಸಾವರ್ಕರ್ ವಿರುದ್ಧದ ಹೇಳಿಕೆಗೆ ಬದ್ಧ: ಸಿದ್ದರಾಮಯ್ಯ
Team Udayavani, Oct 23, 2019, 3:06 AM IST
ಹುಬ್ಬಳ್ಳಿ: “ಸಾವರ್ಕರ್ ಕುರಿತ ಹೇಳಿಕೆಗೆ ನಾನು ಈಗಲೂ ಬದ್ಧ. ಮಹಾತ್ಮ ಗಾಂಧಿ ಕೊಲೆ ಪ್ರಕರಣದಲ್ಲಿ ಅವರು ಒಬ್ಬ ಆರೋಪಿ ಯಾಗಿ ದ್ದರು. ಕೆಲವೊಂದು ಸಾಕ್ಷಿಗಳ ಕೊರತೆ ಯಿಂದ ಹೊರ ಬಂದಿ ರಬಹುದು. ಹಾಗಂತ ಅವರು ಆರೋಪಿನೇ ಅಲ್ಲ. ಗಾಂಧಿ ಹತ್ಯೆ ಆಗಿಲ್ಲ ಅಂತಾ ಹೇಳಕ್ಕಾಗಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತ ನಾಡಿ, ಸಾವರ್ಕರ್ ಹಿಂದೂ ಮಹಾ ಸಭಾದ ಅಧ್ಯಕ್ಷರಾಗಿದ್ದಾಗ ಹಿಂದುತ್ವದ ಕಾಯಿನ್ ಮಾಡಿದ್ದೇ ಅವರು.
ಬಹುತ್ವವಿರುವ ರಾಷ್ಟ್ರದಲ್ಲಿ ಹಿಂದೂ ಹೆಸರು ಹೇಳಿ ಕೊಂಡು ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಹಿಂದುತ್ವದಿಂದ ದೇಶದಲ್ಲಿ ಈಗ ಸಮಾಜ ವಿಭಜನೆ ಆಗುತ್ತಿದೆ. ಅಂಥವರಿಗೆ ಭಾರತರತ್ನ ಪ್ರಶಸ್ತಿ ಬೇಡ. ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತರತ್ನ ನೀಡಿ ಅಂತ ಹೇಳಿದ್ದೆ. ಅದು ತಪ್ಪಾ? ಸಾವಿತ್ರಿಬಾಯಿ ಪುಲೆ ಅವರಿಗೆ ನೀಡಿದ್ದಕ್ಕೆ ನಾನೇನು ವಿರೋಧ ಮಾಡಿದ್ದೇನಾ. ಇವ ರೇಕೆ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಕೊಂಡು ನೋಡ್ತಾರೆ? ಎಂದರು.
ಕೇಂದ್ರದಿಂದ ಚುನಾವಣಾ ಆಯೋಗ ದುರ್ಬಳಕೆ: ಕೇಂದ್ರದ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ದೇಶದ ಇತಿಹಾಸದಲ್ಲಿ 70 ದಿನ ಮೊದಲೇ ಚುನಾವಣೆ ಘೋಷಣೆ ಆಗಿದ್ದು ನೋಡಿದ್ದೀರಾ? ಭಾರತದಲ್ಲಿ ಪ್ರಮುಖ ಪಕ್ಷಗಳು ಇವಿಎಂ ಬಗ್ಗೆ ಸಂದೇಹ ಪಡುತ್ತಿರುವಾಗ ಕೇಂದ್ರ ಸರ್ಕಾರವೇಕೆ ಇವಿಎಂ ಬಳಸುತ್ತಿದೆ. ತನಗೆ ಸಂದೇಹವಿರುವ ಕೆಲವು ಆಯ್ದ ಬೂತ್‌ಗಳಲ್ಲೇ ಅದು ಇವಿಎಂಗಳನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿದೆ ಎಂದರು.
ಪರಿಹಾರ ಇನ್ನೂ ಕೊಟ್ಟಿಲ್ಲ: ರಾಜ್ಯದಲ್ಲಿ ಮತ್ತೆ ಪ್ರವಾಹ ಬಂದಿದೆ. ಬಿಜೆಪಿ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಸರಿಯಾಗಿ ಪರಿಹಾರ ನೀಡಿಲ್ಲ. ಶೆಡ್ ನಿರ್ಮಿಸಿಲ್ಲ. ನಾವು ಕೂಡ ಬೆಳಗಾವಿ, ಬೆಂಗಳೂರು ಸೇರಿ ರಾಜ್ಯದ ಎಲ್ಲೆಡೆ ಸಾಕಷ್ಟು ಹೋರಾಟ ಮಾಡುವ ಮೂಲಕ ಎಚ್ಚರಿಸುವ ಕಾರ್ಯ ಮಾಡಿದೆವು. ಮಲಗಿರೋರನ್ನ ಎಬ್ಬಿಸ ಬಹುದು. ಮಲಗಿರೋ ತರಹ ನಾಟಕ ಮಾಡೋರನ್ನ ಎಬ್ಬಿಸೋಕ್ಕಾಗುತ್ತಾ. ವಿಧಾನ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಸಂತ್ರಸ್ತರಿಗೆ ಪರಿಹಾರ ಕೊಡುತ್ತೇವೆ ಎಂದು ಹೇಳಿದ್ದರಿಂದ, ಕಾಯ್ದು ನೋಡಿದೆವು. ಪರಿಹಾರಕ್ಕಾಗಿ ಮತ್ತೆ ಹೋರಾಟ ಮಾಡುತ್ತೇವೆ ಎಂದರು.
ಮಳೆಯಲ್ಲೇ ನೆರೆಪೀಡಿತ ಗ್ರಾಮಗಳಿಗೆ ಭೇಟಿ
ಬಾಗಲಕೋಟೆ: ಮಲಪ್ರಭಾ ನದಿ ತುಂಬಿ ಹರಿಯುತ್ತಿರುವುದರಿಂದ ಬಾದಾಮಿ ಕ್ಷೇತ್ರದಲ್ಲಿ 3ನೇ ಬಾರಿ ಪ್ರವಾಹ ಉಂಟಾಗಿದ್ದು, ಮಂಗಳವಾರ ಸುರಿಯುತ್ತಿದ್ದ ಮಳೆಯಲ್ಲೇ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.
ಮಳೆ, ಪ್ರವಾಹ ಹಿನ್ನೆಲೆಯಲ್ಲಿ ಮೂರು ಬಾರಿ ಪ್ರವಾಸದ ಮಾರ್ಗ ಬದಲಾಯಿಸಿದ್ದ ಸಿದ್ದರಾಮಯ್ಯ, ಕೊನೆಗೆ ಬೆಳಗಾವಿ ಮೂಲಕ ಕೆರೂರ, ಕುಳಗೇರಿ ಕ್ರಾಸ್ ಮೂಲಕ ಕ್ಷೇತ್ರಕ್ಕೆ ಆಗಮಿಸಿದರು. ಮೊದಲು ಬೀರನೂರ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ಬೀರನೂರಕ್ಕೆ ಆಗಮಿಸುತ್ತಿದ್ದಂತೆ ಮಳೆಯೂ ಆರಂಭವಾಯಿತು. ಬೆಂಬಲಿಗರ ಸಹಾಯದೊಂದಿಗೆ ಕೊಡೆ ಹಿಡಿದು ಗ್ರಾಮದಲ್ಲಿ ಬಿದ್ದ ಮನೆಗಳನ್ನು ವೀಕ್ಷಿಸಿದರು.
ಬಿದ್ದ ಮನೆಗಳ ಸಮೀಕ್ಷೆಯಲ್ಲಿ ಲೋಪವಾಗಿದೆ. ತಾತ್ಕಾಲಿಕ ಪರಿಹಾರವೂ ನೈಜ ಸಂತ್ರಸ್ತರಿಗೆ ಸಿಕ್ಕಿಲ್ಲ ಎಂದು ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಮನೆಗಳ ಬಿದ್ದ ಸಮೀಕ್ಷೆ ಮಾಡಲಾಗಿದೆ. ಸಮೀಕ್ಷೆಯ ಬಳಿಕವೂ ಹಲವು ಮನೆ ಬಿದ್ದಿವೆ. ಪುನಃ ಸಮೀಕ್ಷೆ ನಡೆಸಿ ಪರಿಹಾರ ಕೊಡಬೇಕು. ಶೇ.25ಕ್ಕಿಂತ ಕಡಿಮೆ ಬಿದ್ದರೆ 50 ಸಾವಿರ, ಶೇ.25ಕ್ಕೂ ಹೆಚ್ಚು ಮನೆ ಬಿದ್ದರೆ 5 ಲಕ್ಷ ಪರಿಹಾರ ಕೊಡುವುದಾಗಿ ಸರ್ಕಾರ ವಿಧಾನಸಭೆಯಲ್ಲೇ ಒಪ್ಪಿಕೊಂಡಿದೆ. ಆ ಪ್ರಕಾರವೇ ಪರಿಹಾರ ಕೊಡಬೇಕು ಎಂದು ಸೂಚಿಸಿದರು.
ಕರ್ಲಕೊಪ್ಪ ಗ್ರಾಮಕ್ಕೆ ತೆರಳುತ್ತಿದ್ದಂತೆ ಜೋರಾಗಿ ಮಳೆ ಆರಂಭವಾಯಿತು. ಆಗ ಮಳೆಯಿಂದ ರಕ್ಷಿಸಿಕೊಳ್ಳಲು ಗ್ರಾಮದ ಆಂಜನೆಯ ದೇವಸ್ಥಾನದೊಳಗೆ ತೆರಳಿದರು. ಮಳೆ ತೀವ್ರವಾಗುತ್ತಿದ್ದಂತೆ ಬೀರನೂರ ಮತ್ತು ಕರ್ಲಕೊಪ್ಪ ಗ್ರಾಮಗಳಿಗೆ ಮಾತ್ರ ಭೇಟಿ ನೀಡಿ ಬಾದಾಮಿಗೆ ತೆರಳಿದರು. ಬಳಿಕ ಬಾದಾಮಿ ತಾಪಂ ಸಭಾ ಭವನದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.