ಗಾಂಜಾ ಪ್ರಕರಣದಲ್ಲಿ ಟಿಟಿಡಿ ಮಾಜಿ ಅಧ್ಯಕ್ಷ ಆದಿಕೇಶವಲು ಮೊಮ್ಮಗ
Team Udayavani, Sep 29, 2017, 7:50 AM IST
ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಾಜಿ ಅಧ್ಯಕ್ಷ ದಿ.ಆದಿಕೇಶವಲು ಮೊಮ್ಮಗ ಚಲಾಯಿಸುತ್ತಿದ್ದ ಐಷಾರಾಮಿ ಬೆಂಝ್ ಕಾರಿನಲ್ಲಿ ಲಕ್ಷಾಂತರ ರೂ.ಮೌಲ್ಯದ ಗಾಂಜಾ ಪತ್ತೆಯಾಗಿದೆ. ಈ ಸಂಬಂಧ ಆದಿಕೇಶವಲು ಮೊಮ್ಮಗ ಗೀತವಿಷ್ಣು ಹಾಗೂ ಇತರರ ವಿರುದಟಛಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಜಯನಗರ ಠಾಣೆ
ಪೊಲೀಸರು ಪ್ರಕರಣ ದಾಖಲಿಸಿದ್ದು, ಇವರಿಂದ 110 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ, ವಿಷ್ಣು ಸ್ನೇಹಿತ ಸಂತೋಷ್ ಇತರರು ನಾಪತ್ತೆಯಾಗಿದ್ದಾರೆ ಎಂದು ಜಯನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಐಪಿಸಿ 279 (ಅತಿ ವೇಗವಾಗಿ ವಾಹನ ಚಾಲನೆ) 337 ನಿರ್ಲಕ್ಷ್ಯದ ಆರೋಪದ ಮೇಲೆ ವಿಷ್ಣು ವಿರುದಟಛಿ ಜಯ ನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬುಧವಾರ ತಡರಾತ್ರಿ 12.30ರ ಸುಮಾರಿಗೆ ಸ್ನೇಹಿತನ ಮನೆಯಲ್ಲಿ ಇಟ್ಟಿದ್ದ ಮೊಬೈಲ್ ತರಲು ಬೆಂಝ್ ಕಾರಿನಲ್ಲಿ ತನ್ನ ಸ್ನೇಹಿತರೊಂದಿಗೆ ಆರ್.ವಿ.ಕಾಲೇಜು ಜಂಕ್ಷನ್ ಕಡೆಯಿಂದ ಅತಿ ವೇಗವಾಗಿ ಹೋಗುತ್ತಿದ್ದ ಗೀತ ವಿಷ್ಣು, ಸೌಂತ್ ಎಂಡ್ ಸರ್ಕಲ್‌ನಲ್ಲಿ ಯಡಿಯೂರು ಸರ್ಕಲ್ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಕಾರು
ಬಿಬಿಎಂಪಿ ನಾಮಫಲಕಕ್ಕೆ ಗುದ್ದಿ, ಪೆಟ್ರೋಲ್ ಬಂಕ್ ಪಕ್ಕದ ಪಾದಚಾರಿ ಮಾರ್ಗದ ಮೇಲೆ ಹತ್ತಿ, ಪಲ್ಟಿಯಾಗಿದೆ. ಡಿಕ್ಕಿ ಪರಿಣಾಮ ಓಮ್ನಿ ಕಾರು ಸಂಪೂರ್ಣ ಜಖಂಗೊಂಡಿದೆ. ಅದರಲ್ಲಿದ್ದ ಕಲಾಸಿಪಾಳ್ಯ ನಿವಾಸಿಗಳಾದ ಕೈಜರ್, ಗಿಜರ್ ಹಾಗೂ ನಾಲ್ವರು ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಘಟನಾ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರು ವಿಷ್ಣ ಹಾಗೂ ಇತರ ಮೂವರು ಸ್ನೇಹಿತರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ, ವಿಷ್ಣು ಹೊರತು ಪಡಿಸಿ ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅಪಘಾತದಿಂದ ಉದ್ರಿಕ್ತಗೊಂಡಿದ್ದ ಸಾರ್ವಜನಿಕರು, ರಸ್ತೆಯುದ್ದಕ್ಕೂ ವಿಷ್ಣುಗೆ ಹೊಡೆದು ಕೊಂಡು, ಜಯನಗರ ಠಾಣೆಗೆ ಎಳೆದೊಯ್ದು, ಪೊಲೀಸರಿಗೊಪ್ಪಿಸಿದ್ದಾರೆ. ಈ ವೇಳೆ, ವಿಷ್ಣು ಕಂಠಪೂರ್ತಿ ಮದ್ಯ ಸೇವಿಸಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ
ಸಾರ್ವಜನಿಕರು ವಿಷ್ಣು ಕಾರಿನಲ್ಲಿ ಗಾಂಜಾ ಇದೆ ಎಂಬ ಮಾಹಿತಿ ನೀಡಿದ್ದರು. ಅದರಂತೆ ಕಾರು ಪರಿಶೀಲಿಸಿದಾಗ ಸಿಬ್ಬಂದಿಗೆ 110 ಗ್ರಾಂ ಗಾಂಜಾ ಸಿಕ್ಕಿದೆ. ತೀವ್ರ ಹಲ್ಲೆಗೊಳಗಾದ ವಿಷ್ಣು, ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜ್ವಲ್, ದಿಗಂತ್ ಇದ್ರಾ?
ಆದಿಕೇಶವಲು ಸ್ನೇಹಿತರಾಗಿರುವ ನಟ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಘಟನೆ ವೇಳೆ ವಿಷ್ಣು ಚಾಲನೆ ಮಾಡುತ್ತಿದ್ದ ಬೆಂಝ್ ಕಾರಿನಲ್ಲಿ ಇದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇತ್ತ ಕಾರಿನ ಮುಂಭಾಗದಲ್ಲಿ ಕುಳಿತಿದ್ದ ವಿಷ್ಣು ಮತ್ತು ಇತರರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸುತ್ತಿದ್ದಂತೆ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಸ್ಥಳದಿಂದ ಪರಾರಿಯಾದರು ಎಂದು ಹೇಳಲಾಗಿದೆ. ಆದರೆ, ನಮಗೆ ಅಧಿಕೃತವಾದ ಮಾಹಿತಿಯಿಲ್ಲ. ಸದ್ಯ ವಿಷ್ಣು ಪ್ರಸಾದ್ ಆಸ್ಪತ್ರೆಯಲ್ಲಿದ್ದು, ಈತನ ವಿಚಾರಣೆ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Food Department Operation: ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.