ಅಪ್ಪ ಹಾಕಿದ ಮರದ ಮೇಲೆ ಮನೆ ಕಟ್ಟಿದ ಆದಿವಾಸಿ ಗೆಜ್ಜ
Team Udayavani, Aug 2, 2017, 8:50 AM IST
ಪಿರಿಯಾಪಟ್ಟಣ: “ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬಿದ್ದ’ ಎಂಬುದು ಎಲ್ಲರೂ ಕೇಳಿರುವ ಬಹು ಪ್ರಸಿದಟಛಿ ಗಾದೆ. ಆದರೆ ಇಲ್ಲೊಬ್ಬ ಅಜ್ಜನಿಗೆ ಮಾತ್ರ ಅಪ್ಪ ಹಾಕಿದ ಮರವೇ ಸೂರಾಗಿದ್ದು ಮಾತ್ರ ವಿಪರ್ಯಾಸ! ಹೌದು, ನಾಗರಹೊಳೆ ಅಭಯಾರಣ್ಯದಲ್ಲಿರುವ ಮಲಗನಕೆರೆ ಹಾಡಿಯ ಜೇನುಕುರುಬ ಆದಿವಾಸಿ ಗೆಜ್ಜನೇ ಇದಕ್ಕೆ ಸಾಕ್ಷಿ.
ಸರ್ಕಾರಗಳು ಅರಣ್ಯ ಹಕ್ಕು ಕಾಯ್ದೆ ಮಾಡಿ ಆದಿವಾಸಿಗಳ ಒಕ್ಕಲೆಬ್ಬಿಸದೇ ಅಲ್ಲೇ ಮೂಲಸೌಲಭ್ಯ ಒದಗಿಸಬೇಕು ಎಂಬ ನಿಯಮ ಮಾಡಿದ್ದರೆ, ಅರಣ್ಯ ಅಧಿಕಾರಿಗಳು ಮಾತ್ರ ಗೆಜ್ಜ ನೆಲೆ ಮಾಡಿಕೊಳ್ಳಲೂ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಈ ಅಜ್ಜ ಮರದ ಮೇಲೆಯೇ ಮನೆ ಮಾಡಿಕೊಂಡು ಎರಡು ದಶಕಗಳಿಂದ ವಾಸಿಸುತ್ತಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲಗನಕೆರೆ ಹಾಡಿಯು ನಾಗರಹೊಳೆ ಅಭಯಾರಣ್ಯದಲ್ಲಿರುವ ಸುಮಾರು 24 ಆದಿವಾಸಿ ಕುಟುಂಬಗಳು ವಾಸವಿರುವ ಹಾಡಿ. ಇದರಲ್ಲಿ 23 ಸೋಲಿಗ ಕುಟುಂಬಗಳಿದ್ದರೆ, ಉಳಿದ ಒಂದು ಕುಟುಂಬ ಮುತ್ತಯ್ಯನ ಮಗ ಗೆಜ್ಜ ಅವರು ಜೇನುಕುರುಬ ಸಮುದಾಯದ್ದು. ಈ ಗೆಜ್ಜನಿಗೆ ಸರ್ಕಾರದಿಂದ ಮಂಜೂರಾದ ಅರ್ಧ ಎಕರೆ ಭೂಮಿ ಇದ್ದರೂ ಇವರು ಮಾತ್ರ ವಾಸವಿರುವುದು ಮಾವಿನ ಮರದ ಮೇಲೆ.
ನಾಲ್ಕೈದು ತಲೆಮಾರುಗಳಿಂದ ಮಲಗ ನಕೆರೆ ಹಾಡಿಯಲ್ಲಿಯೇ ವಾಸಿಸುತ್ತಿರುವ ಗೆಜ್ಜ ಅವರ ಕುಟುಂಬ ಒಂದು ಗುಡಿಸಲು ಹಾಕಿಕೊಂಡಿತ್ತು. ಈ ಗುಡಿಸಲಿನಲ್ಲಿ ಗೆಜ್ಜ ಅವರ ತಂದೆ ಮುತ್ತಯ್ಯ, ತಾಯಿ ಜೊತೆ ಸಹೋದರರಾದ ರಘು, ಪುಟ್ಟ, ಶಿವಪ್ಪನವರ ಜೊತೆ ಇದ್ದರು. ತಂದೆ ತಾಯಿ ಮೃತಪಟ್ಟ ನಂತರ ಸಹೋದರರು ಮದುವೆಯಾಗಿ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದರು. ಬಳಿಕ ಸರ್ಕಾರ ಇವರಿಗೆ ಅರ್ಧ ಎಕರೆ ಭೂಮಿಯನ್ನು ಮಂಜೂರು ಮಾಡಿಕೊಟ್ಟಿತು.
ಈ ಜಾಗದಲ್ಲಿ ಎಲ್ಲರೂ ಸೇರಿ ಮನೆ ನಿರ್ಮಿಸಿಕೊಳ್ಳಲು ಹೋದಾಗ ಅರಣ್ಯ ಅಧಿಕಾರಿಗಳು ಅಡ್ಡಿಪಡಿಸಿ ಇದ್ದ ಗುಡಿಸಲನ್ನೂ ತೆರವುಗೊಳಿಸಿದರು. ಸರ್ಕಾರ ಭೂಮಿ ಕೊಟ್ಟರೂ ಅಧಿಕಾರಿಗಳು ಮಾತ್ರ ಆ ಜಾಗದಲ್ಲಿ ಮನೆ ನಿರ್ಮಾಣ
ಮಾಡಲಾಗಲಿ, ಬೆಳೆ ಬೆಳೆಯುವುದಾಗಲಿ ಏನನ್ನೂ ಮಾಡಬಾರದು ಎಂದು ಹೇಳಿದ್ದಾರೆ. ಇವರು ನೆಲೆಸಿದ್ದ ಜಾಗವನ್ನು ಸಂಪೂರ್ಣವಾಗಿ ಆವರಿಸಿ ಕಂದಕ ಮತ್ತು ಸೋಲಾರ್ ಬೇಲಿಗಳನ್ನು ನಿರ್ಮಿಸಿದ್ದು, ಕನಿಷ್ಠ ಓಡಾಡಲೂ ಕಾಲು ರಸ್ತೆಯೂ ಇಲ್ಲದಂತೆ ಮಾಡಿದ್ದಾರೆ. ಸರ್ಕಾರ ಹಾಕಿದ್ದ ಕಿರು ನೀರು ಸರಬರಾಜು ಸೌಲಭ್ಯವನ್ನೂ ಬಳಸಿಕೊಳ್ಳದಂತೆ ಮಾಡಿದ್ದಾರೆ.
ನೆಲೆ ಕಳೆದುಕೊಂಡ ಕುಟುಂಬ ನಂತರ ದಿಕ್ಕಾಪಾಲಾಗಿದೆ.
ಗೆಜ್ಜರವರ ಪತ್ನಿ ಶೋಭಾ ರಾಣಿಗೇಟ್ ಬಳಿ ಇನ್ನೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಉಳಿದುಕೊಂಡರೆ, ಗೆಜ್ಜ ಅವರ ಮಕ್ಕಳಲ್ಲಿ ಕುಳ್ಳ ಮದುವೆಯಾಗಿ ಹೆಂಡತಿ ಜೊತೆ ಬೇರೆ ಊರಿನಲ್ಲಿ ವಾಸವಿದ್ದರೆ, ಇನ್ನೊರ್ವ ಅಪ್ಪಿ ಅಬ್ಬಳತಿ ಗಿರಿಜನ ಶಾಲೆಯಲ್ಲಿ ಓದುತ್ತಿದ್ದಾನೆ. ಸಹೋದರರೆಲ್ಲಾ ತಮ್ಮ ಕುಟುಂಬದವರೊಡನೆ ಬೇರೆ ಊರುಗಳಿಗೆ ಕೂಲಿ ಅರಸಿಕೊಂಡು ಹೋಗಿದ್ದಾರೆ. ಗೆಜ್ಜ ಮಾತ್ರ ಹುಟ್ಟಿ ಬೆಳೆದ ಜಾಗವನ್ನು ಬಿಡಲಾರದೆ ಅಲ್ಲಿಯೇ ಇದ್ದ ಮಾವಿನ ಮರದ ಮೇಲೆ ಬಿದಿರಿನಿಂದ ಅಟ್ಟಣಿಗೆ ಮಾಡಿಕೊಂಡು ಅಲ್ಲಿಯೇ ವಾಸಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.