ಸಿಂಡಿಕೇಟ್ ಬ್ಯಾಂಕ್ಗೆ ಅಜಯ್ ವಿಪಿನ್ ನಾನಾವತಿ ನೂತನ ಅಧ್ಯಕ್ಷ
Team Udayavani, Sep 2, 2017, 9:29 AM IST
ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಅಜಯ್ ವಿಪಿನ್ ನಾನಾವತಿ ಅವರು ಆ.28 ರಂದು ಅಧಿಕಾರ ವಹಿಸಿಕೊಂಡರು. ಅಮೆರಿಕದ ವರ್ಜೀನಿಯಟೆಕ್ನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ನಾನಾವತಿ ಅವರು ಈ ಹಿಂದೆ ಅಲಿಕಾನ್ ಲಿಮಿಟೆಡ್ ಮಂಡಳಿ ಸದಸ್ಯರಾಗಿದ್ದರು. ಹೆಚ್ಚುವ ರಿಯಾಗಿ ಸಕ್ರಿಯ ನಾವೀನ್ಯತೆ ಸುವಾರ್ತ ಬೋಧಕರಾಗಿ, ವಿವಿಧ ವೇದಿಕೆಗಳಿಗೆ, ಸ್ಟಾರ್ಟ್ ಅಪ್ಗ್ಳಿಗೆ ಎಸ್ಎಂಇ ಮತ್ತು ಏಂಜೆಲ್ ಹೂಡಿಕೆದಾರರ ಮಾರ್ಗ ದರ್ಶಿಯಾಗಿ ಕಾರ್ಯನಿರ್ವಹಿಸಿ ದ್ದಾರೆ. ಅಲ್ಲದೆ, ಕಾರ್ಪೋರೇಟ್ ಆಡಳಿತದ ಸಿಐಐ ಡೈರೆಕ್ಟರ್ ಗಿಲ್ಡ್ ಮತ್ತು ಸಿಐಐ ಸ್ಟಾರ್ಟ್ಅಪ್ ಕೌನ್ಸಿಲ್ ಸದಸ್ಯರಿಗೆ ಕೂಡ ಅವರು ಸಹ ಪ್ರಾಯೋಜಕರಾಗಿದ್ದರು.
1988ರಲ್ಲಿ 3ಎಂ ಸಂಸ್ಥೆಯಿಂದ ಆರಂಭಿಸಿದ ತಮ್ಮ ವೃತ್ತಿ ಜೀವನದ ಮೂರು ದಶಕಗಳಲ್ಲಿ ಅಮೆರಿಕ, ಸಿಂಗಪೂರ, ಆಸ್ಟಿನ್ ಹಾಗೂ ಇಸ್ರೇಲ್ ದೇಶಗಳಲ್ಲಿ ಹಿರಿಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅನುಭವ ಅವರಿ ಗಿದೆ. 3ಎಂ ಸೇವೆಯಿಂದ ನಿವೃತ್ತರಾದ ಮೇಲೂ 3ಎಂ ಸಂಸ್ಥೆಯ ಏಷ್ಯಾ- ಫೆಸಿಫಿಕ್, ಗ್ರೇಟರ್ ಚೀನಾ ವಲಯದ ಬೆಳವಣಿಗೆಯಲ್ಲಿ ಶ್ರಮಿಸಿದ್ದಾರೆ ಎಂದು ಬ್ಯಾಂಕ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.