ಅಯ್ಯೋ… ದೇವರೇ ಮಳೆ ನಿಲ್ಲಿಸಪ್ಪ!
Team Udayavani, Oct 17, 2017, 7:57 AM IST
ಬೆಂಗಳೂರು: ಅಯ್ಯೋ ದೇವರೇ ಈ ಮಳೆರಾಯನ ಕಾಟ ನಿಲ್ಲಿಸಿಬಿಡಪ್ಪ…! ಮಳೆ ಸುರಿ ಸಲು ಪ್ರಾರ್ಥನೆ, ಯಾಗಗಳು ನಡೆಯುವುದು ಸಾಮಾನ್ಯ. ಆದರೆ, ಈಗ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಹೈರಾಣವಾರುವ ಬೆಂಗಳೂರು ಮತ್ತು ರಾಜ್ಯದ ಹಲವೆಡೆ ಜನರು ಮಳೆ ನಿಲ್ಲಿಸಲು ಪ್ರಾರ್ಥನೆಗೆ ಮೊರೆ ಹೋಗಬೇಕಾದ ಕಾಲ ಬಂದಿದೆ! ಬೆಂಗಳೂರಿನ ಮಳೆ ದುರಂತ ಗಮನಿಸಿ ಅಮೆರಿಕದಲ್ಲಿ ನೆಲೆಸಿರುವ ಕನ್ನಡತಿಯೊಬ್ಬರು ಶರಭೇಶ್ವರ ಜಪ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಮಳೆ ನಿಯಂತ್ರಣಕ್ಕೆ ಬಂದು, ಜನರ ಪ್ರಾಣ ಉಳಿಯಲಿ ಎಂಬ ಉದ್ದೇಶದಿಂದ ಈ ಜಪ ಆರಂಭಿಸಿದ್ದಾರೆ. ಅಮೆರಿಕದ ಫ್ಲೋರಿಡಾ ಟ್ಯಾಂಪಾದಲ್ಲಿ ಜಪನಿರತ ಮಹಿಳೆ ಹೆಸರು ಶೈಲಾ. ಅವರಿಗೆ ಈ ವಿಶಿಷ್ಟ ಪ್ರಯೋಗವನ್ನು ತಿಳಿಸಿದ್ದು ಮಂತ್ರತಂತ್ರ ಮುದ್ರಾ ಗುರುಗಳೆಂದು ಜನಪ್ರಿಯರಾಗಿರುವ, ಶಿರ್ಡಿ ಸಾಯಿ ಭಿಕ್ಷಾ ಕೇಂದ್ರದ ಸಂಸ್ಥಾಪಕರಾಗಿರುವ ಲಕ್ಷ್ಮೀ ಶ್ರೀನಿವಾಸ ಅವರು. ಬೆಂಗಳೂರಿನಲ್ಲೇ ಇರುವ ಈ ಮಹಿಳೆಯ ಗುರುಗಳಾದ ಲಕ್ಷ್ಮೀ ಶ್ರೀನಿವಾಸ ಇನ್ನು ಮೂರು ದಿನ ಕಾದು ಶರಭ ಪ್ರಯೋಗ ಮಾಡಲು ನಿರ್ಧರಿಸಿದ್ದಾರೆ. ಟ್ಯಾಂಪಾದ ಮೆಟ್‌ಲೆçಫ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶೈಲಾ ರಾಜ್ಯದ ಕೋಲಾರದವರು. 1980 ರಿಂದ ಅಮೆರಿಕದಲ್ಲೇ ನೆಲೆಸಿದ್ದಾರೆ.
“”ಒಂದೆರಡು ತಿಂಗಳ ಹಿಂದೆ ಅಮೆರಿಕದ ಫ್ಲೋರಿಡಾಕ್ಕೆ ಆ್ಯಂಡ್ರೂ ಹರಿಕೇನ್ ಅಪ್ಪಳಿಸಿತ್ತು. ಪರಿಣಾಮ ಇಡೀ ಫ್ಲೋರಿಡಾ ಮುಳುಗುವ ಅಪಾಯ ಎದುರಾಗಿತ್ತು. ಆಗಲೂ ಗುರುಗಳ ಮಾರ್ಗದರ್ಶನದಂತೆ ಶರಭ ಜಪ ಮಾಡಿದ್ದೇನೆ, ಅದು ಫಲಕಾರಿಯೂ ಆಗಿದೆ. ಬೆಂಗಳೂರಿನ ಜನತೆ ಈ ಜಪ ಮಾಡಲಿ, ಅದು ನಿಜಕ್ಕೂ ಪರಿಸ್ಥಿತಿಯನ್ನು ಸುಧಾರಿಸುತ್ತದೆ” ಎನ್ನುತ್ತಾರೆ ಶೈಲಾ. ಸಾಮಾನ್ಯವಾಗಿ ಮಳೆ ಬರಲಿ ಎಂದು ಪರ್ಜನ್ಯ ಜಪ ನಡೆಸಲಾಗುತ್ತದೆ. ಮಳೆ ದೇವತೆ ಎಂದು ಖ್ಯಾತನಾಗಿರುವ ಶೃಂಗೇರಿ ಸಮೀಪದ ಕಿಗ್ಗಾ ಋಷ್ಯಶೃಂಗನಿಗೆ ಪ್ರಾರ್ಥನೆ ಮಾಡಲಾಗುತ್ತದೆ. ವರುಣ ಹೋಮವನ್ನೂ ಮಾಡಲಾಗುತ್ತದೆ. ಕಪ್ಪೆಗಳ ಮದುವೆಯಂಥ ಜಾನಪದ ಆಚರಣೆಗಳೂ ನಮ್ಮಲ್ಲಿವೆ. ಆದರೆ, ಮಳೆ ನಿಲ್ಲಿಸುವ ಆಚರಣೆ ಬಲು ಅಪರೂಪ.
ಏನಿದು ಶರಭೇಶ್ವರ ಜಪ?
ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಶಿರ್ಡಿ ಸಾಯಿ ಬಾಬಾ ಅವರು ಈ ಜಪ ಮಾಡಿದ್ದರಂತೆ. ಶಿವನ ಒಂದು ಅವತಾರ ಶರಭೇಶ್ವರ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಭಗವಾನ್ ವಿಷ್ಣು ಉಗ್ರ ನರಸಿಂಹಾವತಾರ ಎತ್ತಿದಾಗ ಅವನನ್ನು ಸಾಂತ್ವನಗೊಳಿಸಲು ಶಿವ ಈ ರೂಪ ಧರಿಸಿದನಂತೆ. 8 ಕಾಲಿರುವ, ಮುಖ ಸಿಂಹದಂತಿರುವ, ಹಕ್ಕಿಯ ರೆಕ್ಕೆಗಳನ್ನು ಈ ರೂಪ ಹೊಂದಿದೆ. ಶರಭೇಶ್ವರ, ಪಂಚಭೂತಗಳನ್ನು ನಿಯಂತ್ರಿಸಬಲ್ಲ ಶಕ್ತಿ ಹೊಂದಿದ್ದಾನೆ ಎಂಬ ನಂಬಿಕೆ ಇದ್ದು, ಅವನನ್ನು ಓಂ ನಮೋ ಭಗವತೇ ಶರಭಾಯ ಜ್ವಲ ಜ್ವಲ ಪ್ರಜ್ವಲ ಪ್ರಜ್ವಲ ಸಹಾಯ ಸಹಾಯ ರಕ್ಷ ರಕ್ಷ ಸರ್ವ ಭೂತೋಬ್ಯಾಂ ಫಟ್ ಸ್ವಾಹಾ ಎಂಬ ಬೀಜಾಕ್ಷರಿಯಿಂದ ಜಪಿಸಬೇಕು.ಪ್ರತಿ 9 ಜಪಕ್ಕೆ ಒಂದು ಅಕ್ಷತೆ ಕಾಳು, ಹೂ ಅರ್ಪಿಸಬೇಕೆನ್ನುವುದು ತಂತ್ರವಿಧಿಯಾಗಿದೆ.
●ಪೃಥ್ವಿಜಿತ್ ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.