ಎಲ್ಲಾ ಡೀಸೆಲ್ ವಾಹನ ಸಂಚಾರ ರದ್ದು ಮಾಡಬಹುದಲ್ಲವೇ: ಹೈಕೋರ್ಟ್ ಪ್ರಶ್
Team Udayavani, Nov 29, 2017, 10:45 AM IST
ಬೆಂಗಳೂರು: ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ಆಯ್ದ ಕೆಲವೇ ಡೀಸೆಲ್ ವಾಹನಗಳ ನೋಂದಣಿ ನಿಷೇಧ ಕ್ರಮಕ್ಕಿಂತ, ಎಲ್ಲಾ ಮಾದರಿಯ ಡೀಸೆಲ್ ವಾಹನಗಳ ಸಂಚಾರವನ್ನೂ ರದ್ದು ಮಾಡಬಹುದಲ್ಲವೇ ಎಂದು ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನಿಸಿತು.
ಡೀಸೆಲ್ ಆಟೋ ನೋಂದಣಿ ನಿಷೇಧಿಸಿರುವ ರಾಜ್ಯಸರ್ಕಾರದ ಕ್ರಮ ಪ್ರಶ್ನಿಸಿ ಆಟೋ ಮೊಬೈಲ್ಸ್ ಕಂಪೆನಿಗಳು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾ. ಬಿ.ವಿ ನಾಗರತ್ನ ಅವರಿದ್ದ ಏಕಸದಸ್ಯ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿತು.
ವಿಚಾರಣೆ ವೇಳೆ “ಯಾವ ನಿರ್ದಿಷ್ಟ ಕಾರಣಕ್ಕಾಗಿ ಡೀಸೆಲ್ ಆಟೋ ನೋಂದಣಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿಲ್ಲ. ಬದಲಿಗೆ ವಾಯುಮಾಲಿನ್ಯ ತಡೆಗಟ್ಟಲು ಎಂದು ಈಗ ಕಾರಣ ನೀಡುತ್ತಿದ್ದೀರಿ’ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, “ಸರ್ಕಾರದ ಆದೇಶದಲ್ಲಿ ಈ ಬಗ್ಗೆ ಉಲ್ಲೇಖೀಸಿಲ್ಲ. ಜೊತೆಗೆ ಸದ್ಯ ಓಡಾಟ ನಡೆಸುತ್ತಿರುವ ಸಾವಿರಾರು ಸಂಖ್ಯೆಯ ಡಿಸೇಲ್ ಆಟೋ ರಿಕ್ಷಾಗಳ ಪರಿಸ್ಥಿತಿಯೇನು? ಇದಲ್ಲದೆ ಎಸ್‌ಯುವಿ ಸೇರಿ ಇನ್ನಿತರೆ ಡೀಸೆಲ್ ವಾಹನಗಳಿಗೆ ಯಾಕೆ ಅನ್ವಯವಾಗುವುದಿಲ್ಲ. ಪರಿಸರ ರಕ್ಷಣೆ ಹಾಗೂ ವಾಯುಮಾಲಿನ್ಯ ತಡೆಗಟ್ಟಲು ಎಲ್ಲಾ ಮಾದರಿ ಡೀಸೆಲ್ ವಾಹನಗಳ ಸಂಚಾರ ರದ್ದು ಮಾಡ ಬೇಕು, ಕೇವಲ ಆಯ್ದ ಕೆಲವೇ ವಾಹನಗಳಿಗೆ ಮಾತ್ರ ಏಕೆ ನಿಯಮ ರೂಪಿಸಬೇಕು’ ಎಂದು ಮೌಖೀಕ ಅಭಿಪ್ರಾಯ ವ್ಯಕ್ತಪಡಿಸಿತು.
ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ, ರಾಜ್ಯದಲ್ಲಿರುವ ಒಟ್ಟು ಡೀಸೆಲ್ ವಾಹನಗಳ ಅಂಕಿ- ಅಂಶಗಳ ಮಾಹಿತಿ, ಸಿಎನ್‌ಜಿ ( ಸಾಂದ್ರೀಕೃತ ನೈಸರ್ಗಿಕ ಅನಿಲ) ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಷ್ಟು ಅಂತರದಲ್ಲಿ ಈ ಘಟಕಗಳ ಸ್ಥಾಪನೆಯಾಗಿದೆ. ವಾಯು ಮಾಲಿನ್ಯ ನಿಯಂತ್ರಣ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ರಾಜ್ಯಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್ ಪೊನ್ನಣ್ಣ ಅವರಿಗೆ ಸೂಚಿಸಿ ನ. 30ಕ್ಕೆ ವಿಚಾರಣೆ ಮುಂದೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.