ಸಾರ್ವಜನಿಕ ಉದ್ದಿಮೆಗಳೆಂಬ “ಬಿಳಿ ಆನೆ’ ಸಾಕಲು “ಅಂಬಾರಿ’ ಹೂಡಿಕೆ

ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳಿಗೆ "ಗಜ ಗಾತ್ರ'ದ ಸಾಲ   ಹೂಡಿಕೆ ಪ್ರಮಾಣ 2020-21ರಲ್ಲಿ 42 ಸಾವಿರ ಕೋಟಿ ರೂ.

Team Udayavani, Mar 27, 2022, 7:20 AM IST

ಸಾರ್ವಜನಿಕ ಉದ್ದಿಮೆಗಳೆಂಬ “ಬಿಳಿ ಆನೆ’ ಸಾಕಲು “ಅಂಬಾರಿ’ ಹೂಡಿಕೆ

ಬೆಂಗಳೂರು: ಸತತ ನಷ್ಟದಿಂದ ಸರಕಾರದ ಪಾಲಿಗೆ “ಬಿಳಿ ಆನೆ’ಗಳಂತಾಗಿರುವ ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳಿಗೆ ಸರಕಾರ “ಅಂಬಾರಿ’ ಹೂಡಿಕೆ ಮಾಡುತ್ತಿದೆ. “ಗಜ ಗಾತ್ರದ’ ಸಾಲ ನೀಡುತ್ತಿದೆ. ಆದರೆ, ಅವುಗಳಿಂದ ಬರುತ್ತಿರುವ ಪ್ರತಿಫ‌ಲ “ಅಳಿಲಿನಷ್ಟು’.

ಹೌದು! ರಾಜ್ಯದಲ್ಲಿ ಸರಕಾರಿ ಸ್ವಾಮ್ಯದ 60 ಸಾರ್ವಜನಿಕ ಉದ್ದಿಮೆಗಳಿವೆ. ಅವುಗಳಲ್ಲಿ 21ಕ್ಕೂ ಹೆಚ್ಚು ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ. ಈ ಪೈಕಿ ಸತತವಾಗಿ ನಷ್ಟದಲ್ಲಿರುವ 10ಕ್ಕೂ ಹೆಚ್ಚು ಉದ್ದಿಮೆಗಳಲ್ಲಿ ಸರಕಾರ ಕಳೆದು ಐದು ವರ್ಷಗಳಲ್ಲಿ ಬರೋಬ್ಬರಿ 42 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ. ಇದರಲ್ಲಿ ಸಂಚಿತ ನಷ್ಟ 16 ಸಾವಿರ ಕೋಟಿ ರೂ. ಆಗಿದೆ.

ನಷ್ಟದಲ್ಲಿರುವ ಕಂಪೆನಿಗಳ ಪೈಕಿ ಶಾಸನಬದ್ಧ ಸಂಸ್ಥೆಗಳಾದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಹಾಗೂ ಸರಕಾರಿ ಕಂಪೆನಿಗಳಾದ ಕೃಷ್ಣ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಮೈಸೂರು ಸಕ್ಕರೆ ಕಂಪೆನಿ, ಮೈಸೂರು ಪೇಪರ್ ಮಿಲ್ಸ್‌, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪೆನಿ, ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪೆನಿ, ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪೆನಿಗಳಿಗೆ ದೊಡ್ಡ ಪ್ರಮಾಣದ ಹೂಡಿಕೆ ಸರಕಾರ ಮಾಡಿದೆ. ಈ ಕಂಪೆನಿಗಳಿಗೆ 2017-18ರಲ್ಲಿ ಇದ್ದ 13 ಸಾವಿರ ಕೋಟಿ ರೂ. ಹೂಡಿಕೆ ಪ್ರಮಾಣ 2020-21ರಲ್ಲಿ 42 ಸಾವಿರ ಕೋಟಿ ರೂ. ಆಗಿದೆ.

ಆರ್ಥಿಕ ಇಲಾಖೆ ಸಮಜಾಯಿಷಿ
ನಷ್ಟದಲ್ಲಿರುವ ಕಂಪೆನಿಗಳಲ್ಲಿ ಹೂಡಿಕೆ ಮತ್ತು ಸಾಲದ ಬಗ್ಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ರಾಜ್ಯ ಸರಕಾರದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಷ್ಟದಲ್ಲಿರುವ ಕಂಪೆನಿಗಳಲ್ಲಿ ನೀರಾವರಿ ಹಾಗೂ ಇಂಧನ ಕ್ಷೇತ್ರಕ್ಕೆ ಸಂಬಂಧಿ
ಸಿದ್ದಾಗಿದ್ದು, ಅದು ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಗೆ ಕಾರಣವಾಗಿರುವುದರಿಂದ ಹೂಡಿಕೆಯು ಅನಿವಾರ್ಯವಾಗಿದೆ ಎಂದು ಆರ್ಥಿಕ ಇಲಾಖೆ ಸಮಜಾಯಿಷಿ ನೀಡಿದೆ. ಸರಕಾರದ ಮಾಹಿತಿಯಂತೆ ರಾಜ್ಯ ದಲ್ಲಿರುವ 60 ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳ ಪೈಕಿ 21 ಉದ್ದಿಮೆಗಳು ನಷ್ಟದಲ್ಲಿವೆ.

ನಷ್ಟದಲ್ಲಿರುವ ಕಂಪೆನಿ
ಮುಚ್ಚಲು ಶಿಫಾರಸು
ಸಾರ್ವಕನಿಕ ಲೆಕ್ಕಪತ್ರ ಸಮಿತಿಯು 2015ರಲ್ಲಿ ಸಲ್ಲಿಸಿದ್ದ ತನ್ನ 5ನೇ ವರದಿಯಲ್ಲಿ ನಷ್ಟದಲ್ಲಿರುವ ಕಂಪೆನಿಗಳು, ನಿಗಮಗಳ ಕಾರ್ಯ ಸಾಧನೆ ನಿರ್ಣಯಿಸಲು ಮತ್ತು 13ನೇ ಹಣಕಾಸು ಆಯೋಗ ಶಿಫಾರಸು ಮಾಡಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸದ ಕಂಪೆನಿ, ನಿಗಮಗಳನ್ನು ಗುರುತಿಸಿ ಮುಚ್ಚಲು ಶಿಫಾರಸು ಮಾಡಿದೆ ಎಂದು ಸಿಎಜಿ ವರದಿ ಉಲ್ಲೇಖೀಸಿದ್ದು, ಸಿಎಜಿ ಮತ್ತು ರಾಜ್ಯ ಹಣಕಾಸು ಲೆಕ್ಕ ಪರಿಶೋಧನಾ ವರದಿಗಳಲ್ಲಿ ಭಾರಿ ನಷ್ಟ ಅನುಭವಿಸುತ್ತಿರುವ ರಾಜ್ಯ ಸಾರ್ವಜನಿಕ ವಲಯದ ಉದ್ಯಮಗಳ ಕೆಲಸವನ್ನು ಪರಿಶೀಲಿಸಲು ಮತ್ತು ಹೂಡಿಕೆ, ಪುನಶ್ಚೇತನ, ಮುಚ್ಚುವಿಕೆಗೆ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ.

ಗಜ ಗಾತ್ರದ ಹೂಡಿಕೆ ಅಳಿಲಷ್ಟು ಪ್ರತಿಫ‌ಲ
ರಾಜ್ಯ ಸರಕಾರವು 2021ರ ಮಾರ್ಚ್‌ ಅಂತ್ಯದಲ್ಲಿರುವಂತೆ ಕಳೆದ ಐದು ವರ್ಷಗಳಲ್ಲಿ ಕಂಪೆನಿ, ನಿಗಮ ಮತ್ತು ಇತರ ಸಂಸ್ಥೆಗಳಲ್ಲಿ 68, 256 ಕೋಟಿ ರೂ. ಹೂಡಿಕೆ ಮಾಡಿದೆ. ಅದರಲ್ಲಿ 89 ಸರಕಾರಿ ಕಂಪೆನಿಗಳಲ್ಲಿ 60,731 ಕೋಟಿ, ಒಂಭತ್ತು ಶಾಸನಬದ್ಧ ನಿಗಮಗಳಲ್ಲಿ 2,934 ಕೋಟಿ, 44 ಕೂಡು ಬಂಡವಾಳ ಕಂಪೆನಿಗಳಲ್ಲಿ 4,137 ಕೋಟಿ, ಸಹಕಾರ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ 455 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಈ ಹೂಡಿಕೆ 2020-21ರಲ್ಲಿ ಬಂದಿರುವ ಪ್ರತಿಫ‌ಲ ಕೇವಲ 80 ಕೋಟಿ ರೂ. ಮಾತ್ರ.

31 ಸಾವಿರ ಕೋಟಿ ಸಾಲ
ಕಂಪೆನಿಗಳು, ನಿಗಮಗಳು ಮತ್ತು ಸಹಕಾರ ಸಂಸ್ಥೆಗಳಲ್ಲಿ ಹೂಡಿಕೆಯ ಜತೆಗೆ ಸರಕಾರವು ಅನೇಕ ಸಂಸ್ಥೆಗಳಿಗೆ ಸಾಲ ಮತ್ತು ಮುಂಗಡಗಳನ್ನು ಸಹ ನೀಡುತ್ತದೆ. ಅದರಂತೆ ಕಳೆದ ಐದು ವರ್ಷಗಳಿಂದ 2021ರ ಮಾರ್ಚ್‌ 31ರಲ್ಲಿದ್ದಂತೆ ಒಟ್ಟು 31 ಸಾವಿರ ಕೋಟಿ ರೂ. ಸಾಲ ಬಾಕಿ ಇದೆ. ಈ ಸಾಲ ಬಾಕಿಯ ಮೇಲಿನ ಬಡ್ಡಿ 4,374 ಕೋಟಿ ರೂ. ಇದ್ದು, ಕಳೆದ ಆರ್ಥಿಕ ವರ್ಷದ ಅಂತ್ಯಕ್ಕೆ 278 ಕೋಟಿ ರೂ. ಬಡ್ಡಿ ಸ್ವೀಕೃತವಾಗಿದೆ. 2020-21ರಲ್ಲಿ 2,669 ಕೋಟಿ ರೂ. ಸಾಲ ನೀಡಲಾಗಿದೆ. 2021ರ ಮಾ.31ರ ಅಂತ್ಯಕ್ಕೆ ವಸೂಲು ಮಾಡಬೇಕಿದ್ದ 5 ಸಾವಿರ ಕೋಟಿ ರೂ. ಅಸಲು ಮತ್ತು 4,904 ಬಡ್ಡಿ ಸೇರಿ ಒಟ್ಟು 9,911 ಕೋಟಿ ರೂ.ಗಳ ವಸೂಲಾತಿಯ ಅವಧಿ ಮೀರಿದೆ. 2020-21ರಲ್ಲಿ ರಾಜ್ಯ ಸರಕಾರವು ಮಂಜೂರು ಮಾಡಿದ ಒಟ್ಟು 4,063 ಕೋಟಿ ರೂ. ಮೊತ್ತದ 66 ಸಾಲಗಳಲ್ಲಿ 2,817 ಕೋಟಿ ರೂ. ಮೊತ್ತದ 50 ಸಾಲ ಮಂಜೂರು ಮಾಡಲಾಗಿದೆ.

– ರಫೀಕ್‌ ಅಹ್ಮದ್‌

ಟಾಪ್ ನ್ಯೂಸ್

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.