ಹುಟ್ಟೂರಲ್ಲಿ ರೆಬೆಲ್ ಸ್ಟಾರ್:ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ
Team Udayavani, Nov 25, 2018, 5:15 PM IST
ಮಂಡ್ಯ: ರೆಬೆಲ್ ಸ್ಟಾರ್ ಅವರ ಅಂತಿಮ ದರ್ಶನಕ್ಕೆ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜನಸಾಗರವೇ ಹರಿದು ಬಂದಿದೆ. ನೆಚ್ಚಿನ ಜನನಾಯಕನನ್ನು ಕೊನೇ ಬಾರಿಗೆ ನೋಡಲು ಕಿಲೋಮೀಟರ್‌ಗಟ್ಟಲೇ ಉದ್ದನೆಯ ಸಾಲುಗಳಲ್ಲಿ ಜನ ನಿಂತಿದ್ದಾರೆ.
ಅಂಬರೀಷ್ ಅವರ ಪಾರ್ಥೀವ ಶರೀರವನ್ನು ಕಂಠೀರವ ಕ್ರೀಡಾಂಗಣದಿಂದ ವಿಶೇಷ ಅಂಬುಲೆನ್ಸ್ ಮೂಲಕ ಝಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಾಯುಪಡೆಯ ಹೆಲಿಕ್ಯಾಪ್ಟರ್ ಮೂಲಕ ಸಂಜೆ 5 ಗಂಟೆಗೆ ಮಂಡ್ಯಕ್ಕೆ ತರಲಾಯಿತು.
ನಾಳೆ ಬೆಳಗ್ಗೆ 6ಗಂಟೆಯ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ಕಂಠೀರವ ಸ್ಟುಡಿಯೊ
ಮಧ್ಯಾಹ್ನ ದಿಂದಲೇ ಅಂಬರೀಶ್ ಅಭಿಮಾನಿಗಳು ಕ್ರೀಡಾಂಗಣದ ಸುತ್ತ ನೆರೆದಿದ್ದು, ರಾತ್ರಿ ಇಡೀ ಮಂಡ್ಯದ ಸಾಟಿಯಿಲ್ಲದ ನಾಯಕನ ಕೊನೇ ಬಾರಿಯ ದರ್ಶನ ಪಡೆಯಲಿದ್ದಾರೆ.
ಯುವಕರು, ವೃದ್ಧರು , ಮಹಿಳೆಯರು ಈಗಾಗಲೇ ಅಂತಿಮ ದರ್ಶನಕ್ಕಾಗಿ ಆಗಮಿಸಿದ್ದು ಕಣ್ಣೀರಿಡುತ್ತಿದ್ದಾರೆ.
ಅಂಬರೀಶ್ ಅವರ ಪಾರ್ಥೀವ ಶರೀರ ಕಂಡೊಡನೆಯೇ ನೆರೆದಿದ್ದ ಸಾವಿರಾರು ಮಂದಿ ಅಂಬರೀಶ್ ಅಣ್ಣಂಗೆ…ಜೈ..ಮಂಡ್ಯದ ಗಂಡಿಗೇ…ಮತ್ತೆ ಹುಟ್ಟಿ ಬನ್ನಿ ಅಂತ ಜೈಕಾರಗಳನ್ನು ಕೂಗಿದರು.
ಮಂಡ್ಯದಲ್ಲಿ ಅಭಿಮಾನಿಗಳ ಭಾರೀ ಒತ್ತಾಯದ ಹಿನ್ನಲೆಯಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಾಲಾಗಿದೆ. ಜನರ ಆಕ್ರೋಶ ಗಮನಿಸಿದ ಸಿಎಂ ಎಚ್‌ಡಿಕೆ ಅವರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿ ಸೇನಾ ಹೆಲಿಕ್ಯಾಪ್ಟರ್‌ಗಳ ವ್ಯವಸ್ಥೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
HMPV: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ ಸಿದ್ದರಾಮಯ್ಯ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.