![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Feb 4, 2017, 3:45 AM IST
ಬೆಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಅಮೆರಿಕ ಫಸ್ಟ್’ ನೀತಿಗೆ ಜಾಗತಿಕವಾಗಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ, ಭಾರತದ ದೈತ್ಯ ಐಟಿ ಕಂಪನಿ ಇನ್ಫೋಸಿಸ್‌ನ ಸ್ಥಾಪಕ ಇನ್ಫೋಸಿಸ್ ನಾರಾಯಣಮೂರ್ತಿ, ಭಾರತೀಯ ಕಂಪನಿಗಳು ಎಚ್-1ಬಿ ವೀಸಾ ಮೇಲೆ ಹೆಚ್ಚಿನ ಅವಲಂಬನೆ ಇಟ್ಟುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.
ಆಂಗ್ಲ ಖಾಸಗಿ ವಾಹಿನಿಯೊಂದರ ಜತೆ ಮಾತನಾಡಿರುವ, ಅವರು ಭಾರತೀಯ ಕಂಪನಿಗಳು ಬಹು ಸಂಸ್ಕೃತಿಗೆ ಮನ್ನಣೆ ನೀಡಬೇಕು. ಈ ಮೂಲಕ ಸ್ಥಳೀಯರನ್ನೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ.
ಸದ್ಯ ಭಾರತೀಯ ಕಂಪನಿಧಿಗಳು, ಎಚ್-1ಬಿ ವೀಸಾ ಬಳಸಿಕೊಂಡು ಅಮೆರಿಕದಧಿಲ್ಲಿರುವ ಕಂಪನಿಧಿಗಳಿಗೆ ಉದ್ಯೋಧಿಗಿಧಿಗಳನ್ನು ಕಳುಹಿಸುತ್ತಿವೆ. ಆದರೆ ಇತ್ತೀಚೆಗಷ್ಟೇ ಅಮೆರಿಕದ ಪ್ರಜಾಪ್ರತಿನಿಧಿಗಳ ಸಭೆಯಲ್ಲಿ ಎಚ್-1ಬಿ ವೀಸಾದ ಮೇಲೆ ಬರುವವರಿಗೆ ಕನಿಷ್ಠ ವೇತನ ವಾರ್ಷಿಕ 87 ಲಕ್ಷ ರೂ(1,30,000 ಡಾಲರ್) ಇರಬೇಕು ಎಂಬ ಮಸೂದೆ ಮಂಡಿಸಲಾಗಿದೆ. ಒಂದು ವೇಳೆ ಇದಕ್ಕೆ ಡೊನಾಲ್ಡ್ ಟ್ರಂಪ್ ಬೆಂಬಲವನ್ನೇನಾದರೂ ನೀಡಿದರೆ, ಭಾರತೀಯರ ಅಮೆರಿಕದ ಕನಸು ನುಚ್ಚುನೂರಾಗಲಿದೆ ಎಂದೇ ಹೇಳಲಾಗುತ್ತಿದೆ.
ಆದರೆ ಇನ್ಫೋಸಿಸ್ ನಾರಾಯಣಮೂರ್ತಿ ಅವರು, ಈ ಎಲ್ಲ ವಾದಗಳನ್ನು ಬದಿಗೆ ಸರಿಸಿ ಬೇರೆ ವಾದ ಮಂಡಿಸಿದ್ದಾರೆ. ಭಾರತೀಯ ಕಂಪನಿಗಳೇಕೆ ಎಚ್-1ಬಿ ವೀಸಾವನ್ನೇ ಅವಲಂಬಿಸಬೇಕು. ಅಮೆರಿಕದಲ್ಲಿ ಕಂಪನಿ ತೆರೆಯುತ್ತೀರಾ ಎಂದಾದ ಮೇಲೆ ಅಲ್ಲಿನವರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು? ಹಾಗೆಯೇ ಆಯಾ ದೇಶಗಳಲ್ಲಿ ಅಲ್ಲಿನವರನ್ನೇ ಉದ್ಯೋಗಕ್ಕೆ ತೆಗೆದುಕೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ. ಇದಷ್ಟೇ ಅಲ್ಲ, ಅಮೆರಿಕದಲ್ಲಿರುವ ಭಾರತೀಯ ಕಂಪನಿಗಳು ಅಲ್ಲಿನ ಕಾಲೇಜುಗಳಿಗೆ ಹೋಗಿ ಕ್ಯಾಂಪಸ್ ಇಂಟರ್‌ವ್ಯೂ ಮಾಡಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬ ಸಲಹೆ ನೀಡಿದ್ದಾರೆ.
“”ಒಂದು ವೇಳೆ ಡೊನಾಲ್ಡ್ ಟ್ರಂಪ್ ಅವರು ಈ ಸಂಬಂಧ ಆದೇಶವನ್ನೇ ಹೊರಡಿಸಲಿ. ಇದನ್ನು ನಮ್ಮ ಅವಕಾಶಕ್ಕಾಗಿಯೇ ಬಳಸಿಕೊಳ್ಳೋಣ. ನಾವು ಅಲ್ಲಿಯವರನ್ನೇ ನೇಮಿಸಿ ಬಹು ಸಂಸ್ಕೃತಿಯ ಕ್ಯಾಂಪಸ್ ಮಾಡಿಕೊಳ್ಳೋಣ. ಬಹು ವೈವಿಧ್ಯದ ಪರಿಸರದಲ್ಲಿ ಕೆಲಸ ಮಾಡಲು ಭಾರತದ ಕಂಪನಿಗಳಿಗೆ ಸಿಕ್ಕಿರುವ ಅವಕಾಶ ಎಂದೇ ತಿಳಿಯೋಣ” ಎಂದು ಮೂರ್ತಿ ಹೇಳಿದ್ದಾರೆ.
ಬಹು ಸಂಸ್ಕೃತಿಯ ಸಮಾಜಕ್ಕೆ ಒಗ್ಗಿಕೊಳ್ಳಲಾರದ ಭಾರತೀಯ ಐಟಿ ಕಂಪನಿಗಳ ಮಾಲೀಕರ ಮನೋಭಾವದಿಂದಾಗಿ, ಭಾರತದಿಂದ ಉದ್ಯೋಗಿಗಳನ್ನು ಕರೆದುಕೊಂಡು ಹೋಗುವುದು “ಸುಲಭದ ಆಯ್ಕೆ’ಯಂತಾಗಿದೆ. ನಾವು ಅಲ್ಲಿಯವರನ್ನೂ ಜೊತೆಗೆ ಸೇರಿಸಿಕೊಂಡು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕಿದೆ ಎಂದಿದ್ದಾರೆ.
ಆದರೆ ನಾರಾಯಣಮೂರ್ತಿ ಅವರ ಈ ಅಭಿಪ್ರಾಯಗಳಿಗೆ ಭಾರತದ ಐಟಿ ತಜ್ಞರು ಬೇರೆಯ ವಾದವನ್ನೇ ಮುಂದಿಡುತ್ತಾರೆ. ಭಾರತದಿಂದ ಉದ್ಯೋಗಿಗಳನ್ನು ಕರೆದುಕೊಂಡು ಹೋಗುವುದು ಸುಲಭದ ಆಯ್ಕೆಯಲ್ಲ ಎಂದಿದ್ದಾರೆ. ವಿಶೇಷವೆಂದರೆ 2005 ರಿಂದ 2014ರ ವರೆಗೆ ಎಚ್-1ಬಿ ವೀಸಾ ಬಳಸಿ ಅಮೆರಿಕಕ್ಕೆ ಹೋದವರಲ್ಲಿ ಇನ್ಫೋಸಿಸ್, ವಿಪ್ರೋ ಮತ್ತು ಟಿಸಿಎಸ್ ಕಂಪನಿಗಳ ಉದ್ಯೋಗಿಗಳೇ ಹೆಚ್ಚು. ಅಂದರೆ ಸುಮಾರು 86 ಸಾವಿರ ಮಂದಿ ಹೋಗಿದ್ದಾರೆ.
ಈ ಮಧ್ಯೆ ನಾಸ್ಕಾಂ ವರದಿ ಪ್ರಕಾರ, ಅಲ್ಲಿ ಅಮೆರಿಕನ್ನರಿಗೆ ಮತ್ತು ಭಾರತೀಯರಿಗೆ ಒಂದೇ ರೀತಿಯ ವೇತನ ನೀಡಲಾಗುತ್ತಿದೆ. ವಾರ್ಷಿಕ 81,447 ಡಾಲರ್ ವೇತನವನ್ನು ಅಮೆರಿಕನ್ನರಿಗೆ ಕೊಟ್ಟರೆ, ಭಾರತೀಯರಿಗೆ 81,022 ಡಾಲರ್ ನೀಡಲಾಗುತ್ತಿದೆ. ಹೀಗಾಗಿ ಟ್ರಂಪ್ ಅವರ ದೂರದೃಷ್ಟಿ ವಕೌìಟ್ ಆಗದೇ ಇರುವ ಸಂಭವವೂ ಹೆಚ್ಚು ಐಟಿ ತಜ್ಞರು ಹೇಳುತ್ತಾರೆ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.