ಐದು ಗಂಟೆಗಳಲ್ಲಿ ಶಿರಸಿಯಿಂದ ಮಂಗಳೂರು ತಲುಪಿದ ಆ್ಯಂಬುಲೆನ್ಸ್
ಕರ್ನಾಟಕ ಆ್ಯಂಬುಲೆನ್ಸ್ ಚಾಲಕರ ಸಂಘಟನೆ ಸಹಕಾರ
Team Udayavani, Nov 10, 2020, 12:49 AM IST
ಸಾಂದರ್ಭಿಕ ಚಿತ್ರ
ಹೊನ್ನಾವರ: ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಕೇವಲ ಐದು ತಾಸುಗಳಲ್ಲಿ ಶಿರಸಿಯಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇದಕ್ಕೆ ಕರ್ನಾಟಕ ಆ್ಯಂಬುಲೆನ್ಸ್ ಚಾಲಕರ ಸಂಘಟನೆಯ ವ್ಯವಸ್ಥಿತ ಸಹಕಾರ ಸಹಕಾರಿಯಾಗಿತ್ತು. ಅಪರಾಹ್ನ ಮೂರು ಗಂಟೆಗೆ ಶಿರಸಿ ಘಟ್ಟ ಇಳಿಯಲು ಆರಂಭಿಸಿದ ಆ್ಯಂಬುಲೆನ್ಸ್ ರಾಷ್ಟ್ರೀಯ ಹೆದ್ದಾರಿಯ ವಾಹನಗಳ ಸಂದಣಿಯನ್ನು ದಾಟಿಕೊಂಡು ರಾತ್ರಿ 8 ಗಂಟೆಗೆ ಮಂಗಳೂರಿಗೆ ತಲುಪಿತ್ತು.
ರೋಗಿಯಿದ್ದ ಆ್ಯಂಬುಲೆನ್ಸ್‌ಗೆ ಕರ್ನಾಟಕ ಆ್ಯಂಬುಲೆನ್ಸ್ ಚಾಲಕ ಸಂಘಟನೆಯ ಸದಸ್ಯರು ವಿಶಿಷ್ಟವಾಗಿ ಸಹಕರಿಸಿದರು. ಆಯಾ ತಾಲೂಕಿನ ವ್ಯಾಪ್ತಿಯಲ್ಲಿ ಈ ಆ್ಯಂಬುಲೆನ್ಸ್‌ಗೆ ಹಿಂದು ಮುಂದು ಒಂದೊಂದು ಆ್ಯಂಬುಲೆನ್ಸ್ ಸಾಗಿತು. ಹೀಗೆ ಒಟ್ಟು ಮೂರು ಆ್ಯಂಬುಲೆನ್ಸ್ ಜೋರಾದ ಸೈರನ್‌ನೊಂದಿಗೆ ಸಾಗುತ್ತಿದ್ದಾಗ ಸಹಜವಾಗಿಯೇ ವಾಹನಗಳು ದಾರಿ ಮಾಡಿಕೊಟ್ಟವು. ಚತುಷ್ಪಥ ಕಾಮಗಾರಿಯ ಐಆರ್‌ಬಿ ಕಂಪೆನಿ ತನ್ನ ಗಡಿಯವರೆಗೆ ಆ್ಯಂಬುಲೆನ್ಸ್‌ಗಳನ್ನು ನೀಡಿತು. ಒಬ್ಬರಿಗೊಬ್ಬರು ಮೊಬೈಲ್‌ನಲ್ಲಿ ಸಂದೇಶ ನೀಡುತ್ತ ಖೋ ಕೊಟ್ಟವರಂತೆ ಮುಂದಿನ ಊರಿಗೆ ತಲುಪಿಸುತ್ತ ಸಂಘಟನೆಯ ಸದಸ್ಯರು ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.
ಭಿನ್ನ ವಿಧಾನ
ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುತ್ತಿದ್ದರು. ಇಲ್ಲಿ ಮಾತ್ರ ಆ್ಯಂಬುಲೆನ್ಸ್ ಸಂಘಟನೆಯ ಸಹಕಾರದೊಂದಿಗೆ ಭಿನ್ನ ವ್ಯವಸ್ಥೆ ಮಾಡಲಾಗಿತ್ತು. ಇದರ ಫಲವಾಗಿ ಸರಾಸರಿ 54 ಕಿ.ಮೀ. ವೇಗದಲ್ಲಿ ಶಿರಸಿಯಿಂದ 275 ಕಿ.ಮೀ. ದೂರದ ಮಂಗಳೂರಿಗೆ ಆ್ಯಂಬುಲೆನ್ಸ್ ಕ್ರಮಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.