ಅನಂತಕುಮಾರ್ ಮಾತು ಗಂಗೆಯಂತೆ ಹೊಲಸಾಗಿತ್ತು!
Team Udayavani, Nov 27, 2017, 8:23 AM IST
ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆ: ಚಂಪಾ ಈಗ ಎಂದಿನಂತೆ ಮಾತನಾಡುತ್ತಿಲ್ಲ ಎಂಬ ಅನುಮಾನಗಳಿಗೆ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ತೆರೆಬಿತ್ತು. ಅವರದೇ ಮಾತಿನ ಪ್ರಕಾರ ಕಾಟಾಚಾರದ ಕೃತಜ್ಞತೆ ಹೇಳುವ ಸಮ್ಮೇಳನಾಧ್ಯಕ್ಷರ ಸಮಾರೋಪದ ನುಡಿಗಳಿಗೆ ಬದಲಾಗಿ ತಮ್ಮನ್ನು ಟೀಕಿಸಿದವರಿಗೆ ಪ್ರತ್ಯುತ್ತರ ನೀಡಲು ಅವಕಾಶವನ್ನು ಬಳಸಿಕೊಂಡರು.
ಸಮಾರೋಪ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಅನಂತ ಕುಮಾರ್, ವೇದಿಕೆಯಲ್ಲೇ ಚಂಪಾ ಅವರ ಸೆಕ್ಯುಲರ್ ಪಕ್ಷಗಳಿಗೆ ಮತ ನೀಡಿ ಎಂಬ ಹೇಳಿಕೆಯನ್ನು ಬಲವಾಗಿ ಟೀಕಿಸಿದ್ದರು. ತಾಯಿ ಭುವನೇಶ್ವರಿ ಗುಡಿಯೊಳಗೆ ಹೋಗದ ಅವರ ಕ್ರಮಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದರು. ಪವಿತ್ರ ವೇದಿಕೆಯನ್ನು ರಾಜಕೀಯದಿಂದ ಅಪವಿತ್ರ ಮಾಡಬಾರದೆಂದು ಹೇಳಿದ್ದರು. ಒಂದು ಕಡೆ
ಅನಂತಕುಮಾರ್‌ರನ್ನು ಹೊಗಳುತ್ತಲೇ ಅವರೆಲ್ಲ ಮಾತುಗಳಿಗೆ ಚಂಪಾ ಬಲವಾದ ತಿರುಗೇಟು ನೀಡಿದರು.
ಅನಂತಕುಮಾರ್ ಈ ಪವಿತ್ರ ವೇದಿಕೆ ಯನ್ನು ರಾಜಕೀಯಕ್ಕೆ ಬಳಸಿಕೊಂಡು ಅಪವಿತ್ರ ಮಾಡಬಾರದು ಎಂದು ಹೇಳಿದರು.
ಆದರೆ ಇಡೀ ಭಾಷಣ ಪೂರ್ತಿ ರಾಜಕೀಯವನ್ನೇ ಮಾತನಾಡಿದರು. ಅಷ್ಟು ಮಾತ್ರವಲ್ಲ ತಾವು ಮಾತನಾಡಿದ್ದನ್ನು ಮಾತನಾಡಿ, ಇನ್ನೊಬ್ಬರು ಮಾತನಾಡಿದ್ದನ್ನು ಕೇಳುವ ಸಂಯಮವೂ ಇಲ್ಲದೇ ನೆವ ಹೇಳಿ ಎದ್ದು ಹೋದರು. ಇದು ನನಗೆ ಬೇಸರವುಂಟು
ಮಾಡಿದೆ ಎಂದು ಕುಟುಕಿದರು.
ಚಂಪಾ ನನ್ನ ಮೇಷ್ಟ್ರು ಎಂದು ಅನಂತ ಕುಮಾರ್ ಹೇಳಿದರು. ಆದರೆ ಆತ ನನ್ನ ಶಿಷ್ಯನೂ ಅಲ್ಲ, ನಾನು ಅವರ ಗುರುವೂ ಅಲ್ಲ.
ಗಂಗಾನದಿಯಲ್ಲಿ ಹಿಮಾಲಯದ ಶುದ್ಧ ನೀರೂ ಇರುತ್ತದೆ, ಗಟಾರದ ಹೊಲಸೂ ಇರುತ್ತದೆ. ಕೇಂದ್ರ ಸಚಿವರ ಇಂದಿನ
ಭಾಷಣದಲ್ಲಿ ಪವಿತ್ರತೆ ಜೊತೆಗೆ ಹೊಲಸೂ ಇತ್ತು. ಇದನ್ನು ಅನಂತಕುಮಾರ್ ಅವರು ಇಲ್ಲಿ ಬಿಟ್ಟು ಹೋಗಿರುವ ಕಣ್ಣು ಕಿವಿಗಳು
ಅವರಿಗೆ ವರದಿ ಮಾಡಲಿ ಎಂದು ವಿಡಂಬಿಸಿದರು.
ನಿಜವೆಂದರೆ ನಾನು ಯಾರಿಗೂ ಮತನೀಡಿ ಎಂದು ಕೇಳಿಲ್ಲ. ರಾಜ್ಯದ ಹಿತಕಾಯುವ ಬದ್ಧತೆಯಿರುವ ಪ್ರಾದೇಶಿಕ, ಸೆಕ್ಯುಲರ್ ಪಕ್ಷಕ್ಕೆ
ಮತಹಾಕಿ ಎಂದಿದ್ದೇನೆ. ಅದನ್ನು ಕೇಳಿ ಅನಂತ ಕುಮಾರ್ ನಿ¨ªೆಯಲ್ಲಿ ಉಚ್ಚೆ ಹೊಯ್ಯುವ ಕ್ಕಳಂತೆ ಹೆದರಿ ಒದ್ದಾಡಿದ್ದಾರೆ. ಪ್ರಾದೇಶಿಕ ಪಕ್ಷವನ್ನು ಚುನಾಯಿಸಿ ಎನ್ನುವುದು ನನ್ನ ಅಭಿಪ್ರಾಯವಾಗಿತ್ತು ಎಂದು ತಮ್ಮ ವಿವಾದಿತ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಪ್ರತಾಪ್ ಸಿಂಹಗೂ ಕುಟುಕು: ಕಾರ್ಯಕ್ರಮಕ್ಕೆ ಬಂದರೂ ಪ್ರತಾಪ್ ಸಿಂಹ ಜವಾಬ್ದಾರಿಯಿಲ್ಲದೇ ನಡೆದುಕೊಂಡರು. ಅವರಾದರೂ
ಇಲ್ಲಿನ ಸಂಸದರಾಗಿ ಕಾರ್ಯಕ್ರಮದಲ್ಲಿ ಉಳಿದುಕೊಂಡು ಜವಾಬ್ದಾರಿ ತೋರಬಹುದಿತ್ತು. ಆದರೆ, ಬಸವನ ಹಿಂದಿನ ಬಾಲದಂತೆ
ಹೊರಟು ಹೋದರು ಎಂದು ಚಂಪಾ ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಜಯಂತಿಗೆ ಸಮರ್ಥನೆ: ಪ್ರತಾಪ್ ಸಿಂಹ ಟಿಪ್ಪು ಜಯಂತಿಯನ್ನು ಟೀಕಿಸಿದರು. ಆದರೆ ಟಿಪ್ಪು ವೀರಯೋಧ. ಸ್ವಾತಂತ್ರ್ಯ ಹೋರಾಟ ಮಾಡಿದಾತ. ಅವನ ಜಯಂತಿ ಮಾಡಿದರೆ ಸಿಟ್ಟೇಕೆ ಎಂದು ಚಂಪಾ ಪ್ರಶ್ನಿಸಿದರು.
ಕೆ. ಪೃಥ್ವಿಜಿತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು
Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ
Sarji sweet box case: ಲವ್ ಫೈಲ್ಯೂರ್ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
HMPV Virus: ಭಾರತದ ಮೊದಲ ಎಚ್‌ಎಂಪಿವಿ ಸೋಂಕು ಪ್ರಕರಣ ಬೆಂಗಳೂರಿನಲ್ಲಿ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.