![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Nov 10, 2021, 4:56 AM IST
ಬೆಂಗಳೂರು: ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಮೇಳ ಬೆಂಗಳೂರು ಟೆಕ್ ಸಮಿಟ್-2021’ಕ್ಕೆ ದಿನಗಣನೆ ಆರಂಭವಾಗಿದ್ದು, ನ. 17ರಿಂದ 19ರ ವರೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಕೋವಿಡ್-19ರ ಅನಂತರ ಶಿಕ್ಷಣ ಸೇರಿದಂತೆ ಪ್ರತಿ ಕ್ಷೇತ್ರ ದಲ್ಲಿ ತಂತ್ರಜ್ಞಾನದ ಹೊಸ ಆಯಾಮ ತೆರೆದುಕೊಂಡಿದೆ. ಅದಕ್ಕೆ ಪೂರಕವಾದ ತಂತ್ರಜ್ಞಾನ ಪರಿಹಾರೋಪಾಯಗಳು ಈ ಮೂರು ದಿನಗಳ ಮೇಳದಲ್ಲಿ ದೊರೆಯಲಿದೆ. ಆವಿಷ್ಕಾರಗಳು, ಭಿನ್ನ ಆಲೋಚನೆಗಳು, ತಂತ್ರ ಜ್ಞಾನಗಳ ವಿನಿಮಯ, ಸಂಶೋಧನೆ ಮತ್ತು ಅಭಿವೃದ್ಧಿಗೆ ಇದು ವೇದಿಕೆ ಆಗಲಿದೆ. ಸುಮಾರು 30 ದೇಶಗಳು ಮೇಳಕ್ಕೆ ಸಾಕ್ಷಿಯಾಗಲಿವೆ ಎಂದು ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ಈ ಬಾರಿಯ ತಂತ್ರಜ್ಞಾನ ಮೇಳ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಆಚೆಗೆ ವಿಸ್ತರಣೆ ಆಗಿದೆ. ಅಂದರೆ ಟೆಕ್ ಸಮಿಟ್‌ನ ಪೂರ್ವಭಾವಿ ಕಾರ್ಯಕ್ರಮ ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಅದೇ ರೀತಿ, ಜಾಗತಿಕ ಆವಿಷ್ಕಾರ ಮೈತ್ರಿ ಮಾದರಿಯಲ್ಲಿ ಈ ಸಲ ಇಂಡಿಯಾ ಇನ್ನೋವೇಶನ್ ಅಲಾಯನ್ಸ್’ ಮಾಡಿಕೊಂಡಿದ್ದು, ಇದರಡಿ ಹಲವು ರಾಜ್ಯಗಳೊಂದಿಗೆ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ವಿನಿಮಯ ನಡೆಯಲಿದೆ.
ಇದನ್ನೂ ಓದಿ:ತವರು ಜಿಲ್ಲಾ ಕೇಂದ್ರದಲ್ಲೇ ರಸ್ತೆಗೆ ‘ಅಪ್ಪು’ ಹೆಸರಿಡಲು ನಗರಸಭೆಯಲ್ಲಿ ಮೂಡದ ಒಮ್ಮತ
ಇದಲ್ಲದೆ, ಭಾರತ-ಅಮೆರಿಕ ಸಮಾವೇಶ ಏರ್ಪಡಿಸಲಾ ಗಿದ್ದು ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುವಂತೆ ಮಾಡಲಿದೆ ಎಂದರು.
ಸುಮಾರು 75 ಗೋಷ್ಠಿಗಳಲ್ಲಿ 300ಕ್ಕೂ ಅಧಿಕ ಪ್ರತಿನಿಧಿಗಳು ಮಾತನಾಡಲಿದ್ದಾರೆ. ಐದು ಸಾವಿರಕ್ಕೂ ಅಧಿಕ ಸ್ಟಾರ್ಟ್ ಅಪ್ ಗಳು ಭಾಗವಹಿಸಲಿವೆ.
ಭವಿಷ್ಯದ ಆರ್ಥಿಕತೆಗೆ ದಿಕ್ಸೂಚಿ: ಕ್ರಿಸ್
ಕರ್ನಾಟಕ ಐಟಿ ವಿಜನ್ ಗ್ರೂಪ್ ಅಧ್ಯಕ್ಷ ಎಸ್. ಗೋಪಾಲಕೃಷ್ಣನ್ (ಕ್ರಿಸ್) ಮಾತನಾಡಿ, ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕತೆ 5-10 ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಸರಕಾರ ಹೊಂದಿದೆ. ಇದಕ್ಕೆ ಐಟಿ-ಬಿಟಿ ರಾಜಧಾನಿಯಾಗಿರುವ ಕರ್ನಾಟಕದಿಂದ ಹೆಚ್ಚು ನಿರೀಕ್ಷೆ ಮಾಡಲಾಗುತ್ತಿದೆ. ಭವಿಷ್ಯದ ಆರ್ಥಿಕತೆಗೆ ತಂತ್ರಜ್ಞಾನ ಮೇಳ ದಿಕ್ಸೂಚಿ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.