ಸಾವಿರ ಸಲ ಹೇಳುತ್ತೇನೆ ಅಂಜನಾದ್ರಿಯೇ ಹನುಮನ ಜನ್ಮ ಸ್ಥಳ : ಸಿಎಂ ಬೊಮ್ಮಾಯಿ ಘೋಷಣೆ
ಅಂಜನಾದ್ರಿ ಬೆಟ್ಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ
Team Udayavani, Aug 1, 2022, 2:32 PM IST
ಕೊಪ್ಪಳ: ಅಂಜನಾದ್ರಿಯೇ ಹನುಮನ ಜನ್ಮ ಸ್ಥಳ ಇದನ್ನು ಸಾವಿರ ಸಾವಿರ ಸಾರಿ ಒತ್ತಿ ಹೇಳುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮೆಲ್ಲರ ಆರಾಧ್ಯ ದೈವ ಅಂಜನಾದ್ರಿಯ ಹನುಮಂತನ ದರ್ಶನಕ್ಕೆ ಆಗಮಿಸಿದ್ದೇವೆ. ಅಂಜನಾದ್ರಿಯ ಸಮಗ್ರ ಅಭಿವೃದ್ಧಿಗೆ ಈಗಾಗಲೆ ಬಜೆಟ್ ನಲ್ಲಿ 100 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದ್ದೇನೆ. ಅಂಜನಾದ್ರಿಗೆ ಪ್ರತಿವರ್ಷವೂ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಆಗಮಿಸುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸುವುದು ನಮ್ಮಕರ್ತವ್ಯ. ಬರುವ ದಿನಗಳಲ್ಲಿ ಯಾತ್ರಿಗಳು ಆಗಮಿಸುವ ಸಂಖ್ಯೆ ಹೆಚ್ಚಳವಾಗಲಿದೆ. ಹೀಗಾಗಿ ಅಂಜನಾದ್ರಿ ಬೆಟ್ಟದ ಮೇಲೂ ಮತ್ತು ಕೆಳಗೂ ಅಭಿವೃದ್ಧಿ ಆಗಬೇಕಾದ ಅಗತ್ಯವಿದೆ ಎಂದರು.
ಈಗಾಗಲೇ ಸರ್ಕಾರದ ಆದೇಶದೊಂದಿಗೆ ಅಂಜನಾದ್ರಿಗೆ ಬಂದಿದ್ದೇನೆ. ಅಂಜನಾದ್ರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸುವ ದೊಡ್ಡ ಗುರಿ ನಮ್ಮದಾಗಿದೆ. ಇಲ್ಲಿ ಯಾತ್ರಿಕರಿಗೆ ಆಸ್ಪತ್ರೆ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಚಿಂತನೆಯಾಗಿದೆ. ಬೆಟ್ಟಕ್ಕೆ ರೋಪ್ ವೇ ವ್ಯವಸ್ಥೆ ಮಾಡಿ ವಯಸ್ಸಾದವರಿಗೂ ಸಹ ಹನುಮಂತನ ದರ್ಶನ ಕಲ್ಪಿಸುವ ಚಿಂತನೆ ಇದೆ . ಬಜೆಟ್ ನಲ್ಲಿ ಜಿಲ್ಲೆಗೆ ನೀಡಿದ ಅನುದಾನದ ಕಾಮಗಾರಿಗಳಿಗೆ ಚಾಲನೆ ಕೊಡಲು ಬಂದಿದ್ದೇನೆ ಎಂದರು.
ಅಂಜನಾದ್ರಿಯಲ್ಲಿ ರೋಪ್ ವೇ ಗೆ ಮುಂದಿನ ಮುಂದಿನ ದಿನಗಳಲ್ಲಿ ಟೆಂಡರ್ ಕರೆಯಲಯ ಸೂಚನೆ ನೀಡಿದ್ದೇನೆ. ಅಂಜನಾದ್ರಿಯ ಅಭಿವೃದ್ಧಿಗೆ ಈಗಾಗಲೆ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದೇವೆ. ಅಂಜನಾದ್ರಿಯ ಜೊತೆಗೆ ಸುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿ ಮಾಡಲಾಗುವುದು. ಬಜೆಟ್ ನಲ್ಲಿ ಘೋಷಿಸಿದಂತೆ ಅಂತಾರಾಷ್ಟ್ರೀಯ ಮಟ್ಟದ ಹಂಪಿ ಟೂರಿಸಂ ಸರ್ಕಿಟ್ ನ್ನು ಮಾಡಲು ಯೋಜಿಸಲಾಗಿದೆ. ಹಂಪಿ ಮತ್ತು ಮೈಸೂರನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಂತಾರಾಷ್ಟ್ರೀಯ ಸರ್ಕಿಟ್ ಮಾಡಲು ಚಿಂತಿಸಿದ ಕಾರಣ ಯೋಜನೆ ರೂಪಿಸಲಾಗಿದೆ.
ಪುರಾತತ್ವ ಇಲಾಖೆ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲವುಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇದರ ಜತೆಗೆ ಅಂತಾರಾಷ್ಟ್ರೀಯ ಪ್ರವಾಸಿಗರಿಗೂ ವ್ಯವಸ್ಥೆ ಕಲ್ಪಿಸಲಾಗುವುದು. ಈ ಭಾಗದ ಐತಿಹಾಸಿಕ ಪ್ರವಾಸಿತಾಣಗಳ ಅಭಿವೃದ್ಧಿಗೆ ಒತ್ತುಕೊಡಲಿದ್ದೇವೆ ಎಂದರು.
ಹನುಮ ಜನಿಸಿದ್ದು ಅಂಜನಾದ್ರಿಯಲ್ಲಿಯೇ ಎಂದು ನಾನು ಸಾವಿರ ಸಲ ಹೇಳುತ್ತೇನೆ. ಸಾವಿರಾರು ವರ್ಷಗಳಿಂದ ಇರುವ ಕಿಷ್ಕಿಂದ ಪುರಾವೆಗಳೆ ಹನುಮ ಹುಟ್ಟಿದ್ದು ಇಲ್ಲೇ ಎಂದು ಸಾರಿ ಸಾರಿ ಹೇಳುತ್ತವೆ. ಇದನ್ನು ಬಿಟ್ಟು ಹೇಳಲು ಬೇರೆ ಪುರಾವೆಗಳು ಬೇಕಿಲ್ಲ. ಇತ್ತೀಚಿನ ದಿನಗಳಲ್ಲಿ ಆಂಜನೇಯ ಅಲ್ಲಿ ಜನಿಸಿದ್ದ ಇಲ್ಲಿ ಜನಸಿದ್ದ ಎಂಬ ವಿವಾದಗಳು ಕೇಳಿಬರುತ್ತಿವೆ. ಅಂಜನಾದ್ರಿಯೇ ಹನುಮಂತನು ಜನಸಿದ ಪ್ರದೇಶವಾಗಿದೆ ಎಂದು ಹೇಳುವುದುಕ್ಕೆ ಎರಡು ಮಾತಿಲ್ಲ. ಹಾಗಾಗಿ ಈ ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ನಾವು ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟಿದ್ದೇವೆ ಎಂದರು.
ಹನುಮ ಜನ್ಮಭೂಮಿ ಅಂಜನಾದ್ರಿ ಎನ್ನುವ ನಮ್ಮ ನಂಬಿಕೆಯೆ ಘೋಷಣೆಯಾಗಿದೆ. ಕರ್ನಾಟಕ, ಅಂಧ್ರ ಅಥವಾ ಬೇರೆ ರಾಜ್ಯ ಎಂಬ ಮಾತೇ ಇಲ್ಲ. ಇಡೀ ಭಾರತಕ್ಕೆ ಗೊತ್ತಿದೆ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂದು. ಇದನ್ನು ಸಾವಿರ ಬಾರಿ ಸಾರಿ ಸಾರಿ ಹೇಳುತ್ತೇನೆ. ಅಂಜನಾದ್ರಿಯ ಅಭಿವೃದ್ಧಿಗೆ ಬೇಕಾದ ಜಮೀನು ಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಈಗಾಗಲೆ ಒಂದು ಸಭೆ ಮಾಡಿರುವೆ ಎಂದರು.
ಆಂಜನೇಯ ಮೂರ್ತಿಗೆ ಸಿಎಂ ಸಾಷ್ಟಾಂಗ ನಮಸ್ಕಾರ
ಬೆಟ್ಟದ ಕೆಳಗೆ ಹನುಮಂತನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಹನುಮಾನ್ ಚಾಲೀಸಾ ಪಠಣ ಮಾಡಿದರು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತಿಯಿಂದ ಆಂಜಿನೇಯನ ಮೂರ್ತಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಗಮನ ಸೆಳೆದರು. ಅಂಜನಾದ್ರಿ ಆಡಳಿತ ಮಂಡಳಿಯಿಂದ ಸಿಎಂಗೆ ಸನ್ಮಾನ ಮಾಡಿ ಆಂಜನೇಯನ ಭಾವಚಿತ್ರ ಕಾಣಿಕೆಯಾಗಿ ನೀಡಿದರು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಸಿಎಂ ಬೊಮ್ಮಾಯಿ ಅವರಿಗೆ ಆಂಜನೇಯನ ಬೆಳ್ಳಿ ಮೂರ್ತಿ ಕಾಣಿಕೆಯಾಗಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.