![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jul 20, 2018, 2:54 PM IST
ಈ ಆರ್ಥಿಕ ವರ್ಷದಲ್ಲಂತೂ ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು
ಇರುವುದು 4.10 ಕೋಟಿ ಫಲಾನುಭವಿಗಳು
ಬೆಂಗಳೂರು: ಅನ್ನಭಾಗ್ಯದಲ್ಲಿ ಏಳು ಕೆ.ಜಿ ಅಕ್ಕಿ ಕೊಡುವುದನ್ನು ಮುಂದುವರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಹೇಳಿದ್ದಾರೆ. ಆದರೆ, ಅದು ಹೇಗೆ ಸಾಧ್ಯ ಎಂದು ಅವರ ಇಲಾಖೆಯ ಅಧಿಕಾರಿಗಳೇ ಪ್ರಶ್ನಿಸುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಒಬ್ಬ ಫಲಾನುಭವಿಗೆ 2 ಕೆ.ಜಿ.ಅಕ್ಕಿಯನ್ನು ಹೆಚ್ಚುವರಿಯಾಗಿ ಕೊಡಲು ಈಗಿನ ಆರ್ಥಿಕ ಸ್ಥಿತಿಯಲ್ಲಿತುಂಬಾ ಕಷ್ಟ. ಈ ಆರ್ಥಿಕ ವರ್ಷದಲ್ಲಂತೂ ಅದು ಸಾಧ್ಯವೇಇಲ್ಲ ಎಂದು ಕಡ್ಡಿ ಮುರಿದಂತೆ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಹಿಂದಿನ ಸರ್ಕಾರದಲ್ಲಿ ಬಿಪಿಎಲ್ ಕುಟುಂಬದ ಒಬ್ಬ ವ್ಯಕ್ತಿಗೆ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಕೊಡಲಾಗುತ್ತಿತ್ತು. ಆದರೆ, ಈಗಿನ
ಸರ್ಕಾರದಲ್ಲಿ ಅದನ್ನು 5 ಕೆ.ಜಿ.ಗೆ ಇಳಿಸಲು ತೀರ್ಮಾನಿಸಲಾಗಿತ್ತು. ವಿರೋಧ ವ್ಯಕ್ತವಾದ ನಂತರ ಮತ್ತೆ ಯಥಾಸ್ಥಿತಿ ಮುಂದುವರಿಸಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ, ಆರ್ಥಿಕವಾಗಿ ಹೇಳುವುದಾದರೆ ಹೆಚ್ಚುವರಿ ಅಕ್ಕಿ ಕೊಡುವುದು ದುಸ್ಸಾಹಸಕ್ಕೆ ಕೈ ಹಾಕಿದಂತಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಪ್ರಸ್ತುತ 4.10 ಕೋಟಿ ಬಿಪಿಲ್ ಕಾರ್ಡು ದಾರರಿದ್ದು, ಅನ್ನಭಾಗ್ಯ ಯೋಜನೆಯಡಿ ಸದ್ಯ ಪ್ರತಿ ವ್ಯಕ್ತಿಗೆ 7 ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. 5 ಕೆ.ಜಿ. ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಟ್ಟರೆ, 2 ಕೆ.ಜಿ. ಹೆಚ್ಚುವರಿ ಅಕ್ಕಿಯನ್ನು ರಾಜ್ಯ ಸರ್ಕಾರ ಕೊಡುತ್ತಿದೆ. ಇದಕ್ಕೆ ತಿಂಗಳಿಗೆ 2.80 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಇದರಲ್ಲಿ 5 ಕೆ.ಜಿ.ಅಕ್ಕಿ, ಕೆ.ಜಿ.ಗೆ 3 ರೂ.ಗಳಂತೆ ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ 2.17 ಲಕ್ಷಮೆಟ್ರಿಕ್ ಟನ್ ಅಕ್ಕಿ ಬರುತ್ತದೆ. ಹೆಚ್ಚುವರಿ ಅಕ್ಕಿ ಕೊಡಲು ರಾಜ್ಯ ಸರ್ಕಾರ ಪ್ರತಿ ತಿಂಗಳು 70 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ಕನಿಷ್ಠ 26ರಿಂದ ಗರಿಷ್ಠ 30ರೂ. ಕೊಟ್ಟು ಖರೀದಿಸುತ್ತದೆ. ಇದಕ್ಕಾಗಿ ತಿಂಗಳಿಗೆ 200 ಕೋಟಿ ರೂ., ವರ್ಷಕ್ಕೆ 2,400 ಕೋಟಿ ರೂ.ಬೇಕು. ಜತೆಗೆ, ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ತಿಂಗಳಿಗೆ 65 ಕೋಟಿ ರೂ.ಭರಿಸಬೇಕು. ಈ ಹಿಂದೆ ಒಂದು ಕಾರ್ಡ್‌ಗೆ 1 ಕೆ.ಜಿ. ತೊಗರಿ ಬೇಳೆ ಕೊಡಲಾಗುತ್ತಿತ್ತು. ಈಗ ಹೊಸ ಬಜೆಟ್‌ನಲ್ಲಿ ಘೋಷಿಸಿರುವಂತೆ ಬಿಪಿಎಲ್ ಕುಟುಂಬದ ಪ್ರತಿ
ವ್ಯಕ್ತಿಗೆ ಅರ್ಧ ಕೆ.ಜಿ. ತೊಗರಿ ಬೇಳೆ ರಿಯಾಯಿತಿ ದರದಲ್ಲಿ ಸಿಗಲಿದೆ. ಇದಕ್ಕಾಗಿ ತಿಂಗಳಿಗೆ ಅಂದಾಜು 33 ಸಾವಿರ ಮೆಟ್ರಿಕ್ ಟನ್ ತೊಗರಿ ಬೇಳೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಬೇಕಾಗಿದೆ. ತಿಂಗಳಿಗೆ 600 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ. ಬಜೆಟ್‌ನಲ್ಲಿ ರಿಯಾಯಿತಿದರದಲ್ಲಿ ಸಕ್ಕರೆ ಸಹ ಘೋಷಿಸಲಾಗಿರುವುದರಿಂದ ಇದಕ್ಕೂ ದೊಡ್ಡ ಆರ್ಥಿಕ ಹೊರೆ ಬೀಳಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಒಂದೊಮ್ಮೆ ಸಕ್ಕರೆ ಕೊಡದಿದ್ದರೆ ಹಾಗೂ ತೊಗರಿ ಬೇಳೆ ವಿತರಣೆ ಯಥಾಸ್ಥಿತಿ ಮುಂದುವರಿದರೆ ಆಗ ಸ್ವಲ್ಪ ಮಟ್ಟಿನ ಹಣ ಉಳಿತಾಯವಾಗಲಿದ್ದು, 7 ಕೆ.ಜಿ.ಅಕ್ಕಿಯನ್ನು ಮುಂದುವರಿಸಬಹುದು. ಆದರೆ, ಸದ್ಯದ ಸ್ಥಿತಿಯಲ್ಲಂತೂ 7 ಕೆ.ಜಿ.ಅಕ್ಕಿ ಕೊಡುವುದನ್ನುಮುಂದುವರಿಸುವುದು ಸಾಧ್ಯವಾಗದು ಎನ್ನುತ್ತಾರೆ ಅಧಿಕಾರಿಗಳು.
ಅನ್ನಭಾಗ್ಯ ಯೋಜನೆಯಡಿ ಕೊಡುತ್ತಿರುವ 7 ಕೆ.ಜಿ. ಅಕ್ಕಿಯನ್ನು 5 ಕೆ.ಜಿ.ಗೆ ಇಳಿಸುವುದಿಲ್ಲ. 7 ಕೆ.ಜಿ. ಕೊಡಲಾಗುತ್ತದೆ.
●ಶಾಮನೂರು ಶಿವಶಂಕರಪ್ಪ,
ಶಾಸಕ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.