ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ
Team Udayavani, Dec 15, 2018, 7:42 AM IST
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಹಿರಿಯ ರಂಗಕರ್ಮಿ ಬಿ.ವಿ.ಕಾರಂತರ ಜತೆಗೂಡಿ ಮೈಸೂರು ರಂಗಾಯಣವನ್ನು ಕಟ್ಟಲು ಶ್ರಮಿಸಿದ ರಂಗಭೂಮಿಯ ಹಿರಿಯ ನಿರ್ದೇಶಕ ಪಿ.ಗಂಗಾಧರಸ್ವಾಮಿ ಅವರು ಅಕಾಡೆಮಿ ನೀಡುವ ಜೀವಮಾನ ಸಾಧನೆ ಗೌರವಕ್ಕೆ ಭಾಜನರಾಗಿದ್ದಾರೆ. ಹವ್ಯಾಸಿ ರಂಗಭೂಮಿ ಕ್ಷೇತ್ರದಲ್ಲಿ ಛಾಪುಮೂಡಿಸಿರುವ ಉಡುಪಿಯ ಹಿರಿಯ ರಂಗಸಾಧಕ ಟಿ.ಪ್ರಭಾಕರ್ ಕಲ್ಯಾಣಿ, ದಕ್ಷಿಣ ಕನ್ನಡ ಜಿಲ್ಲೆಯ ಹವ್ಯಾಸಿ ರಂಗನಿರ್ದೇಶಕಿ ಮತ್ತು ನಟಿ ಉಷಾ ಭಂಡಾರಿ ಸೇರಿ 24 ಮಂದಿ ರಂಗಸಾಧಕರು ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್ ಪ್ರಶಸ್ತಿ ಸಾಧಕರ ಹೆಸರನ್ನು
ಪ್ರಕಟಿಸಿದರು. ಹಾಸ್ಯ ಕಲಾವಿದ ಕೆ.ಹಿರಣ್ಣಯ್ಯ ದತ್ತಿ ಪ್ರಶಸ್ತಿಗೆ ಹಾಸನದ ಹವ್ಯಾಸಿ ರಂಗಭೂಮಿ ಕಲಾವಿದ ನಿಕೋಲಸ್, ನಟರತ್ನ ಚಿಂದೋಡಿ ವೀರಪ್ಪ ನವರ ದತ್ತಿ ಪುರಸ್ಕಾರಕ್ಕೆ ಶಿವಮೊಗ್ಗದ ವೃತ್ತ ರಂಗಭೂಮಿ ನಟ ಮೃತ್ಯುಂಜಯಸ್ವಾಮಿ ಹಿರೇಮs…, ಪದ್ಮಶ್ರೀ ಚಿಂದೋಡಿ ಲೀಲಾ ಠ್ದತ್ತಿ ಪ್ರಶಸ್ತಿಗೆ ಧಾರವಾಡದ ವೃತ್ತಿರಂಗಭೂಮಿ ನಿರ್ದೇಶಕ ಎಂ.ಎಸ್. ಮಾಳವಾಡ ಹಾಗೂ ಕೆ.ರಾಮಚಂದ್ರಯ್ಯ ದತ್ತಿ ಪುರಸ್ಕಾರಕ್ಕೆ ರಾಮ ನಗರದ ಹವ್ಯಾಸಿ ರಂಗಭೂಮಿ ನಟ ನ.ಲಿ.ನಾಗರಾಜ್ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಜೀವಮಾನ ಸಾಧನೆ ಪ್ರಶಸ್ತಿ 50 ಸಾವಿರ ರೂ.ನಗದು ಮತ್ತು ಫಲಕ, ವಾರ್ಷಿಕ ಪ್ರಶಸ್ತಿ 25 ಸಾವಿರ ರೂ.ನಗದು ಮತ್ತು ಫಲಕ
ಹಾಗೂ ದತ್ತಿ ಪ್ರಶಸ್ತಿ 5 ಸಾವಿರ ರೂ.ನಗದು ಹಾಗೂ ಸ್ಮರಣಿಕೆಯನ್ನು ಹೊಂದಿದೆ. 2019ರ ಫೆಬ್ರವರಿಯಲ್ಲಿ ಉಡುಪಿಯಲ್ಲಿ
ಹಮ್ಮಿಕೊಳ್ಳ ಲಾಗುವ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಅಕಾಡೆಮಿ ಪ್ರಶಸ್ತಿಗಾಗಿ ಹಲವು ಸಂಖ್ಯೆ ಯಲ್ಲಿ ಅರ್ಜಿಗಳು ಬಂದಿದ್ದವು. ಆದರೆ ಆಯ್ಕೆ ಯಲ್ಲಿ ಸಾಮಾಜಿಕ ನ್ಯಾಯ ನೀಡಲಾಗಿದ್ದು, ಹಿರಿಯ ಕಲಾವಿದರಿಗೆ ಹೆಚ್ಚಿನ ಮನ್ನಣೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ನಾಟಕ ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿ ಪಟ್ಟಿ: ಉಗಮಶ್ರೀನಿವಾಸ (ಬೆಂಗಳೂರು), ಡಿ.ಎಲ್.ನಂಜುಂಡಸ್ವಾಮಿ
(ತುಮಕೂರು), ಜಕಾವುಲ್ಲಾ (ಹಾಸನ), ಪ್ರಭಾಕರ ಜೋಷಿ (ಕಲಬುರ್ಗಿ), ವಿಜಯಾನಂದ ಕರಡಿಗುಡ್ಡ (ರಾಯಚೂರು),
ಖಾಜೇಸಾಬ ಜಂಗಿ (ಬಾಗಲಕೋಟೆ), ಬಸಪ್ಪ ಮದರಿ (ವಿಜಯಪುರ), ಎಂ.ರವಿ (ಬೆಂಗಳೂರು), ಜಗದೀಶ್ ಕೆಂಗನಾಳ
(ಬೆಂಗಳೂರು ಗ್ರಾಮಾಂತರ), ಕಿರಗಸೂರು ರಾಜಪ್ಪ (ಚಾಮರಾಜನಗರ), ಟಿ.ಪ್ರಭಾಕರ ಕಲ್ಯಾಣಿ (ಉಡುಪಿ), ಎಸ್.ಆಂಜಿನಮ್ಮ
(ಬಳ್ಳಾರಿ), ಸಾವಿತ್ರಿ ನಾರಾಯಣಪ್ಪ ಗೌಡರ (ಗದಗ), ಮಕ್ಕಮ್ಮಲ್ ಹುಣಸಿಕಟ್ಟಿ (ಬೆಳಗಾವಿ), ಹನುಮಂತಪ್ಪ ಬಾಗಲಕೋಟಿ
(ಚಿತ್ರದುರ್ಗ), ಡಾ.ಕೆ.ವೈ.ನಾರಾಯಣ ಸ್ವಾಮಿ (ಕೋಲಾರ), ಉಷಾ ಭಂಡಾರಿ (ದಕ್ಷಿಣ ಕನ್ನಡ), ಡಿ.ಎಂ.ರಾಜಕುಮಾರ್
(ಶಿವಮೊಗ್ಗ), ಅಂಜಿನಪ್ಪ (ದೊಡ್ಡಬಳ್ಳಾಪುರ), ಹುಲಿವಾನ ಗಂಗಾಧರಯ್ಯ (ತುಮಕೂರು), ಮೋಹನ್ ಮಾರ್ನಾಡು ( ಮುಂಬಯಿ),
ಕೆಂಚೇಗೌಡ ಟಿ (ಮಂಡ್ಯ), ಮೈಮ್ ರಮೇಶ್ ( ಮೈಸೂರು), ಚಿಂದೋಡಿ ಚಂದ್ರಧರ (ದಾವಣಗೆರೆ) ಮತ್ತು ಈಶ್ವರದಲಾ (ತುಮಕೂರು).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.