ಪರಿಷತ್ ಕುಸ್ತಿಗೆ ಕಣ ಸಿದ್ಧ; ಮತ್ತೊಂದು ಹಂತದ ಚುನಾವಣೆ ಮೂರು ಪಕ್ಷಗಳಿಗೂ ಮುಖ್ಯ
Team Udayavani, Nov 10, 2021, 7:10 AM IST
ಬೆಂಗಳೂರು: ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯಾಗಿದ್ದ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣೆ ಮುಗಿದ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ 25 ಸ್ಥಾನ ಗಳ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ.
ರಾಜ್ಯದ ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರಗಳಿಂದ ವಿಧಾನ ಪರಿಷತ್ತಿನ 25 ಸ್ಥಾನಗಳ ಚುನಾವಣೆಗೆ ಕೇಂದ್ರ ಚುನಾವಣ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಡಿ. 10ರಂದು ಚುನಾವಣೆ, ಡಿ. 14ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ನ. 23 ಕೊನೆಯ ದಿನ. ಈ 25 ಸದಸ್ಯರ ಅವಧಿ 2022ರ ಜ. 5ಕ್ಕೆ ಕೊನೆಗೊಳ್ಳಲಿದೆ. ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತತ್‌ಕ್ಷಣ ದಿಂದಲೇ ಚುನಾವಣ ನೀತಿ ಸಂಹಿತೆ ಜಾರಿಯಾಗಿದೆ.
ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆ ಗಳ 25 ಸ್ಥಾನಗಳಿಗೆ ಚುನಾವಣೆ ನಡೆಯಲಿರುವುದರಿಂದ ಮುಂದಿನ ತಾ.ಪಂ., ಜಿ.ಪಂ. ಮತ್ತು ವಿಧಾನಸಭೆ ಚುನಾವಣೆಗೆ ಈ ಮತಸಮರ ರಾಜಕೀಯ ಪಕ್ಷಗಳಿಗೆ ರಂಗತಾಲೀಮು ಆಗಲಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇದ್ದು, ವಿಧಾನಸಭೆಯಿಂದ ವಿಧಾನಪರಿಷತ್ತಿನ 7 ಸ್ಥಾನಗಳಿಗೆ 2022ರ ಜೂನ್‌ನಲ್ಲಿ ಚುನಾವಣೆ ನಡೆಯಬೇಕಿದೆ.
ಇದರ ಜತೆಗೆ ವಿಧಾನಪರಿಷತ್ತಿನ ಒಟ್ಟು ಸಂಖ್ಯಾ ಬಲದಲ್ಲಿ ವಿಧಾನಸಭೆಯಿಂದ ಮತ್ತು ಸ್ಥಳೀಯ ಸಂಸ್ಥೆಗಳಿಂದ ತಲಾ 25 ಸ್ಥಾನಗಳಿವೆ. ಅಲ್ಲದೆ ಇದರಲ್ಲಿ ರಾಜಕೀಯ ಪಕ್ಷಗಳ ಚುನಾಯಿತ ಪ್ರತಿನಿಧಿಗಳೇ ಮತದಾರರಾಗಿರುವುದರಿಂದ ಈ ಚುನಾವಣೆ ಪಕ್ಷಗಳ ಪಾಲಿಗೆ ಪ್ರತಿಷ್ಠೆಯೇ ಹೌದು.
ಇದನ್ನೂ ಓದಿ:ಉ.ಪ್ರ. ಚುನಾವಣೆ: ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ: ಮಾಯಾವತಿ
ಚುನಾವಣ ನೀತಿ ಸಂಹಿತೆ ತತ್‌ಕ್ಷಣದಿಂದ ಜಾರಿಗೆ
ಚುನಾವಣ ನೀತಿ ಸಂಹಿತೆ ತತ್‌ಕ್ಷಣದಿಂದ ಜಾರಿಗೆ ಬಂದಿದೆ. ಚುನಾವಣೆ ಘೋಷಣೆಯಾಗಿರುವ ಸ್ಥಳೀಯ ಸಂಸ್ಥೆಗಳ 20 ಕ್ಷೇತ್ರಗಳು ರಾಜ್ಯಾದ್ಯಂತ ವ್ಯಾಪಿಸಿದ್ದು, ಬಹುತೇಕ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ. ಸಾರ್ವತ್ರಿಕ ಚುನಾವಣೆ ಸಂದರ್ಭ ಜಾರಿಯಾಗುವ ಮಾದರಿಯದೇ ನೀತಿ ಸಂಹಿತೆ ಈ ಚುನಾವಣೆಗೂ ಅನ್ವಯವಾಗಲಿದೆ ಎಂದು ಚುನಾವಣ ಆಯೋಗ ತಿಳಿಸಿದೆ.
ಚುನಾವಣೆ ನಡೆಯುವ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳು
ಬೀದರ್, ಕಲಬುರಗಿ, ವಿಜಯಪುರ (ದ್ವಿಸದಸ್ಯ), ಬೆಳಗಾವಿ (ದ್ವಿಸದಸ್ಯ), ಉತ್ತರ ಕನ್ನಡ, ಧಾರವಾಡ (ದ್ವಿಸದಸ್ಯ), ರಾಯಚೂರು-ಕೊಪ್ಪಳ (ಎರಡು ಜಿಲ್ಲೆ, ಒಬ್ಬ ಸದಸ್ಯ), ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಕನ್ನಡ (ದ್ವಿಸದಸ್ಯ), ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಡಗು, ಮೈಸೂರು (ದ್ವಿಸದಸ್ಯ).
ವೇಳಾಪಟ್ಟಿ
ಅಧಿಸೂಚನೆ ಪ್ರಕಟ: ನ. 16
ನಾಮಪತ್ರ ಸಲ್ಲಿಸಲು
ಕೊನೆಯ ದಿನ: ನ. 23
ನಾಮಪತ್ರ ಪರಿಶೀಲನೆ: ನ. 24
ನಾಮಪತ್ರ ವಾಪಸ್‌ಗೆ ಕೊನೆಯ ದಿನ: ನ. 26
ಮತದಾನ: ಡಿ. 10;
ಬೆಳಗ್ಗೆ 8ರಿಂದ ಸಂಜೆ 4
ಮತ ಎಣಿಕೆ: ಡಿ. 14
ಪೂರ್ಣ ಬಹುಮತಕ್ಕೆ ಬೇಕು 38 ಸ್ಥಾನ
-ಒಟ್ಟು 75 ಸ್ಥಾನಗಳ ವಿಧಾನಪರಿಷತ್ತಿನಲ್ಲಿ ಪೂರ್ಣ ಬಹುಮತಕ್ಕೆ 38 ಸ್ಥಾನಗಳು ಬೇಕು.
-ಸದ್ಯ 32 ಸ್ಥಾನ ಹೊಂದಿರುವ ಬಿಜೆಪಿ ಬಲಾಡ್ಯ. ಪೂರ್ಣ ಬಹುಮತಕ್ಕೆ ಈಗಿನ ಸ್ಥಳೀಯ ಸಂಸ್ಥೆಗಳ 6 ಸ್ಥಾನಗಳನ್ನು ಮರಳಿ ಗಳಿಸಿಕೊಂಡು ಹೆಚ್ಚುವರಿಯಾಗಿ 6 ಸ್ಥಾನ ಗೆಲ್ಲಬೇಕು.
-29 ಸ್ಥಾನಗಳ ಜತೆಗೆ ಒಬ್ಬರು ಪಕ್ಷೇತರರ ಬೆಂಬಲದೊಂದಿಗೆ 30 ಸ್ಥಾನ ಹೊಂದಿರುವ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳ 14 ಸ್ಥಾನಗಳನ್ನು ಉಳಿಸಿಕೊಂಡು ಹೆಚ್ಚುವರಿಯಾಗಿ 8ರಿಂದ 9 ಸ್ಥಾನ ಗೆಲ್ಲಬೇಕು.
-2022ರ ಜೂನ್-ಜುಲೈ ವೇಳೆಗೆ ಮತ್ತೆ 10 ಸ್ಥಾನಗಳು ಖಾಲಿ ಯಾಗಲಿದ್ದು, ಬಹುಮತ ಲೆಕ್ಕಾಚಾರ ಮತ್ತೆ ಏರುಪೇರು ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.