ಮತ್ತೋರ್ವನಿಗೆ ಮಂಗನ ಕಾಯಿಲೆ
Team Udayavani, Apr 26, 2020, 5:39 AM IST
ಸಾಂದರ್ಭಿಕ ಚಿತ್ರ.
ಸಾಗರ: ತಾಲೂಕಿನ ತುಮರಿಯ ಹೆಸ್ಸಿಗೆಯ ಗಣಪತಿ ನಾಯ್ಕ(35) ಅವರಿಗೆ ಮಂಗನ ಕಾಯಿಲೆಯ ಸೋಂಕು ತಗಲಿರುವುದು ದೃಢಪಟ್ಟಿದ್ದು, ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಈ ನಡುವೆ ಒಡಂಬೈಲು ಹೆನ್ನಿಯ ಮಾರುತಿ ಎಂಬುವವರನ್ನು ಕೂಡ ಶಂಕಿತ ಕೆಎಫ್‌ಡಿ ಹಿನ್ನೆಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರ ರಕ್ತ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ತಾಲೂಕು ವೈದ್ಯಾ ಧಿಕಾರಿ ಡಾ| ಮೋಹನ್ ಕೆ.ಎಸ್. ತಿಳಿಸಿದ್ದಾರೆ.
ಶಿವಮೊಗ್ಗದ ಪರಿಮಾಣ ಕ್ರಿಮಿ ಪರಿಶೋಧನಾ ಪ್ರಯೋಗಾಲಯ ಗುರುವಾರ ನಡೆಸಿದ 40 ಪರೀಕ್ಷೆಯಲ್ಲಿ ಇನ್ನೂ ನಾಲ್ಕು ಪ್ರಕರಣಗಳಲ್ಲಿ ಮಂಗನ ಕಾಯಿಲೆ ಖಚಿತಗೊಂಡಿದೆ. ಚಿಕ್ಕಮಗಳೂರಿನ ಎನ್.ಆರ್. ಪುರದ ದಬಗಣಿಯ ಸುನಿತಾ ಮಂಜುನಾಥ್ (31), ತೀರ್ಥಹಳ್ಳಿಯ ಮಾಳೂರು ಬೆಳುವೆಯ ಪವಿತ್ರಾ ಮಂಜುನಾಥ್ (25), ಉತ್ತರ ಕನ್ನಡ ಸಿದ್ದಾಪುರದ ಕಾನ್ಸೂರಿನ ಸಮೀಪದ ನಾಣಿಕಟ್ಟಾದ ಶೇಖರ್ ಗಣಪತಿ ನಾಯ್ಕ (40), ಕ್ಯಾದಗಿಯ ಸನ್ನೆಕೊಪ್ಪದ ಪುನೀತ್ ವೀರಭದ್ರ ನಾಯ್ಕ (8) ಅವರಿಗೆ ಕೆಎಫ್‌ಡಿ ಸೋಂಕು ತಗಲಿರುವುದು ಖಚಿತಪಟ್ಟಿದೆ. ಸಾಗರ ತಾಲೂಕಿನ ಕಾರ್ಗಲ್‌ನ 5, ತುಮರಿಯ 4 ಮತ್ತು ಅರಳಗೋಡಿನ ಒಂದು ಶಂಕಿತ ಜ್ವರದ ಪ್ರಕರಣಗಳ ರಕ್ತದ ಸ್ಯಾಂಪಲ್‌ನ್ನು ವಿಡಿಎಲ್‌ಗೆ ರವಾನಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.