ಟ್ರೋಲ್ ಗೂಂಡಾಗಿರಿ ವಿರುದ್ಧ ರೈ ಅಭಿಯಾನ; ಸಿಂಹ ಉತ್ತರವೇನು ಗೊತ್ತಾ?
Team Udayavani, Nov 23, 2017, 1:26 PM IST
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧ್ವನಿ ಎತ್ತಿದರೆ ಸಾಕು ಬೆರಳು ಕಟ್ ಮಾಡುತ್ತೇವೆ ಎನ್ನುತ್ತಾರೆ, ನಟಿ ದೀಪಿಕಾ ತಲೆ ತೆಗೆಯುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ, ನಮ್ಮ ಸಮಾಜ ಎಲ್ಲಿಗೆ ಬಂದಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಕಳವಳ ವ್ಯಕ್ತಪಡಿಸಿದ್ದು, ಟ್ರೋಲ್ ಗೂಂಡಾಗಿರಿ ವಿರುದ್ಧ #ಜಸ್ಟ್ ಆಸ್ಕಿಂಗ್ ಅಭಿಯಾನ ನಡೆಸುವುದಾಗಿ ತಿಳಿಸಿದ್ದಾರೆ.
ಗುರುವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟ್ವೀಟರ್, ಫೇಸ್ ಬುಕ್ ನಲ್ಲಿ ಟೀಕಿಸಿ ಫೋಸ್ಟ್ ಹಾಕಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಅವರಿಗೆ ತಮ್ಮ ವಕೀಲರ ಮೂಲಕ ಲೀಗಲ್ ನೋಟಿಸ್ ಜಾರಿಗೊಳಿಸಿರುವುದಾಗಿ ತಿಳಿಸಿದ್ದಾರೆ.
ಲೀಗಲ್ ನೋಟಿಸ್ ಗೆ ಉತ್ತರ ನೀಡದಿದ್ದರೆ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಗಳ ಸ್ಕ್ರೀನ್ ಶಾಟ್ ಅನ್ನು ಲೀಗಲ್ ನೋಟಿಸ್ ನಲ್ಲಿ ಲಗತ್ತಿಸಲಾಗಿದೆ ಎಂದು ಹೇಳಿದರು.
ಮಗನ ಸಾವಿನ ದುಖದಲ್ಲಿ ಡ್ಯಾನ್ಸರ್ ಹಿಂದೆ ಓಡಿ ಹೋಗಿದ್ದಾನೆ ಎಂದು ಟೀಕಿಸುತ್ತಾರೆ, ಪುತ್ರ ಶೋಕ ಏನೆಂದು ನಿಮಗೆ ಗೊತ್ತಿಲ್ಲ ಪ್ರತಾಪ್ ಸಿಂಹ ಅವರೇ ಎಂದು ತಿರುಗೇಟು ನೀಡಿದ್ದಾರೆ. ಗೌರಿ ಲಂಕೇಶ್ ಸಾವಿಗೆ ಬಂದಾಗ ಯಾರ ಪಕ್ಕದಲ್ಲಿ ಮಲಗಿದ್ದಿ…ಹೀಗೆ ಅಸಹ್ಯವಾಗಿ ಟೀಕಿಸುವುದು ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದ್ದಾರೆ.
ನನ್ನ ತಾಯಿಯ ಧರ್ಮದ ಬಗ್ಗೆ ಮಾತನಾಡುತ್ತಾರೆ.. ನಾನು ಯಾವುದಾದರು ಪ್ರಶ್ನೆ ಕೇಳಿದ್ರೆ ವೈಯಕ್ತಿಕವಾಗಿ ನಿಂದನೆ ಶುರು ಮಾಡುತ್ತಾರೆ. ಇದು ಟ್ರೋಲ್ ಗೂಂಡಾಗಿರಿ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈ, #Just Asking ಅಭಿಯಾನ ಪ್ರಾರಂಭಿಸುವುದಾಗಿ ಹೇಳಿದರು.
ಪ್ರತಾಪ್ ಸಿಂಹ ತಿರುಗೇಟು:
ಪ್ರಕಾಶ್ ರೈ ಅವರು ಬೆಂಗಳೂರಿನಲ್ಲಿ ಗುಡುಗಿದ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಯಾರೋ ಮಾಡಿದ ಟ್ವೀಟ್ ಅನ್ನು ನಾನು ರೀ ಟ್ವೀಟ್ ಮಾಡಿದ್ದೇನೆ. ರೀ ಟ್ವೀಟ್ ಮಾಡಿದವರಿಗೆ ಲೀಗಲ್ ನೋಟಿಸ್ ಕೊಡೋದಲ್ಲ. ಲೇಖನ ಯಾರು ಬರೆದಿದ್ದಾರೆ ಅವರಿಗೆ ನೋಟಿಸ್ ಕೊಡಿ. ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಟ್ವೀಟ್ ಮಾಡಿಲ್ಲ. ಎಂಎಂ, ಗೌರಿ ಲಂಕೇಶ್ ಹತ್ಯೆ ಇರಬಹುದು, ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿರುವುದು ರಾಜ್ಯ ಸರ್ಕಾರದ್ದು. ಹೀಗಾಗಿ ನೀವು ಪ್ರಧಾನಿ ಮೋದಿ ಅವರನ್ನು ಯಾಕೆ ಪ್ರಶ್ನೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದೆ. ಕಾವೇರಿ ವಿಚಾರದಲ್ಲಿ ರೈ ದ್ವಂದ್ವ ನಿಲುವು ಹೊಂದಿದ್ದಾರೆ. ಅದನ್ನು ನಾನು ಪ್ರಶ್ನಿಸಿದ್ದೆ. ನಾನು ಮಾಡಿರುವುದು ಗೂಂಡಾಗಿರಿ ಅಲ್ಲ, ಒಂದು ವೇಳೆ ಟ್ರೋಲ್ ಗೂಂಡಾಗಿರಿ ಅಂತ ಕರೆದರೆ ಅದು ಪ್ರಕಾಶ್ ರೈ ಅವರ ಬೌದ್ಧಿಕ ದಿವಾಳಿತನ ಎಂದೇ ಕರೆಯಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.