ರಾಜ್ಯದಲ್ಲಿ 60 ಯೋಜನೆಯ ಒಟ್ಟು 2465 ಕೋಟಿ ರೂ. ಹೂಡಿಕೆಯ ಪ್ರಸ್ತಾವನೆಗೆ ಅನುಮೋದನೆ
Team Udayavani, May 1, 2022, 11:49 AM IST
ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 2465.94 ಕೋಟಿ ರೂ ಹೂಡಿಕೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಶನಿವಾರ ಸಂಜೆ ಕರ್ನಾಟಕ ಉದ್ಯೋಗ ಮಿತ್ರ ಭವನದಲ್ಲಿ ನಡೆದ 131 ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಈ. ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ,ಕೆಐಎಡಿಬಿ ಸಿಇಓ ಶಿವಶಂಕರ ಸೇರಿದಂತೆ ಮತ್ತಿತ್ತರ ಅಧಿಕಾರಿಗಳು ಭಾಗವಹಿಸಿದ್ದರು.
ಒಟ್ಟು 60 ಯೋಜನೆಗಳಿಂದ 2465.94 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಇದರಿಂದ 8575 ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಲ್ಲಿ 50 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ 10 ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅಂದಾಜು 1522.33 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 3190 ಜನರಿಗೆ ಉದ್ಯೋಗ ಲಭಿಸಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.
15 ಕೋಟಿ ರೂ ಯಿಂದ 50 ಕೋಟಿಯೊಳಗಿನ 49 ಯೋಜನೆಗೆ ಇಲಾಖೆ ಒಪ್ಪಿಗೆ ಕೊಟ್ಡಿದೆ. ಒಟ್ಟು 938.61 ಕೋಟಿ ಹೂಡಿಕೆಯಾಗಲಿದ್ದು,5385 ಜನರಿಗೆ ಉದ್ಯೋಗ ಲಭಿಸಲಿವೆ ಎಂದು ತಿಳಿಸಿದರು. ಹೆಚ್ಚುವರಿ ಬಂಡವಾಳ ಹೂಡಿಕೆಯ 1 ಯೋಜನೆಗೆ ಸಮಿತಿಯು ಅನುಮೋದನೆ ನೀಡಿದ್ದು, 5 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ.
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಿಗಳಿಗೆ ಅಗತ್ಯವಿರುವ ಭೂಮಿ, ನೀರು ರಸ್ತೆ ಹಾಗೂ ವಿದ್ಯುತ್ ಸೇರಿದಂತೆ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಕಾಲಮಿತಿಯೊಳಗೆ ಒಗದಿಸಲು ಇಲಾಖೆಯು ಬದ್ದವಾಗಿದೆ ಎಂದು ನಿರಾಣಿ ಅವರು ಭರವಸೆ ನೀಡಿದ್ದಾರೆ.
ಕರ್ನಾಟಕವನ್ನು ಕೈಗಾರಿಕಾ ವಲಯ ಹಾಗೂ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುವುದಾಗಿ ನಿರಾಣಿ ಅವರು ತಿಳಿಸಿದರು.
ಹೂಡಿಕೆ ಮಾಡುವ ಯೋಜನೆಗಳು
ಸಿದ್ದಾರ್ಥ ಸೌಹಾರ್ದ ಸಹಕಾರಿ ನಿಯಮಿತ 361.15 ಕೋಟಿ ರೂ. ಹೂಡಿಕೆ, 300 ಉದ್ಯೋಗ ಸೃಷ್ಟಿ
ಗುಡ್ ರಿಚ್ ಏರೋಸ್ಪೇಸ್ ಸರ್ವಿಸಸ್: ಪ್ರೆ.ಲಿ. 255.45 ಕೋಟಿ ರೂ. ಹೂಡಿಕೆ, 1743 ಉದ್ಯೋಗ ಸೃಜನೆ
ಜಿ.ಬಿ.ಪ್ರೆ.ಲಿ. 235 ಕೋಟಿ ರೂ. ಹೂಡಿಕೆ, 200 ಉದ್ಯೋಗ ಸೃಷ್ಟಿ
ಶ್ರೀ ಸಿಮೆಂಟ್ ಲಿ.156.17 ಕೋಟಿ ಹೂಡಿಕೆ, 54 ಉದ್ಯೋಗ
ಡಿಪ್ಯಾಕ್ ವೆಂಚರ್ಚಸ್ ಎಲ್ ಎಲ್ ಪಿ 112 ಕೋಟಿ ರೂ. ಹೂಡಿಕೆ, 100 ಉದ್ಯೋಗ
ದಾವಣಗೆರೆ ಶುಗರ್ಸ ಕಂಪನಿ 99 31 ಕೋಟಿ ರೂ. ಹೂಡಿಕೆ, 77 ಉದ್ಯೋಗ
ಟೆಮಿಕೊ ಮೋಟಾರ್ ಇಂಡಿಯಾ ಪ್ರೆ.ಲಿ. 88 ಕೋಟಿ ರೂ, 75 ಉದ್ಯೋಗ
ಜಯಶ್ರೀ ಎಥನಾಲ್ ಡಿಸ್ಟೀಲೇಷನ್ ಪ್ರೆ.ಲಿ. 80.25. ಕೋಟಿ ರೂ ಹೂಡಿಕೆ., 116 ಉದ್ಯೋಗ
ಸ್ವಾಜಿ ನ್ಯೂಟ್ರಿಷನಲ್ಸ್ ಪ್ರೆ.ಲಿ. 51 ಕೋಟಿ ರೂ ಹೂಡಿಕೆ, 510 ಉದ್ಯೋಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.